ಉಡುಪಿ: ಶ್ರೀಕೃಷ್ಣ ಮಠದ 250 ನೇ ಪರ್ಯಾಯೋತ್ಸವ ನಡೆಯುತ್ತಿದ್ದು, ಪಂಚ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಮುಖ್ಯ ಅತಿಥಿಯಾಗಿ ಸೋಮವಾರ ಸಂಜೆ ಪಾಲ್ಗೊಳ್ಳಲಿದ್ದಾರೆ.
ವಿಶ್ವಪ್ರಸಿದ್ಧ ಉಡುಪಿ ಶ್ರೀಕೃಷ್ಣಮಠದ ಭಕ್ತರ ಸರತಿ ಸಾಲಿನ ದರ್ಶನ ವ್ಯವಸ್ಥೆಯಾದ ವಿಶ್ವಪಥ. ಆರಂಭವಾಗಿದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ ಎಂದು ಪರ್ಯಾಯ ಅದಮಾರು ಮಠದ ಪಿಆರ್ ಒ.ಶ್ರೀಶ ಕಡೆಕಾರು ಹೇಳಿದರು.
Advertisement
Advertisement
ಸೋಮವಾರ ಸಂಜೆ ಆಗಮಿಸುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಭಕ್ತರ ಪ್ರವೇಶಕ್ಕೆ ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಲಾದ ವಿಶ್ವಪಥ ದ್ವಾರವನ್ನು ಉದ್ಘಾಟನೆ ಮಾಡಲಿದ್ದಾರೆ. ನಂತರ ಉಡುಪಿ ಶ್ರೀ ಕೃಷ್ಣನ ದರ್ಶನವನ್ನು ಮಾಡಲಿರುವ ಯಡಿಯೂರಪ್ಪ, ರಾಜಾಂಗಣದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Advertisement
ಉಡುಪಿ ಶ್ರೀಕೃಷ್ಣ ಮಠದಲ್ಲಿ 250ನೇ ಪರ್ಯಾಯ ನಡೆಯುತ್ತಿದ್ದು, ಈಗ ಅದಮಾರು ಮಠ ಶ್ರೀಕೃಷ್ಣನ ಪೂಜಾ ಅಧಿಕಾರವನ್ನು ನಡೆಸುತ್ತಿದೆ. ಉಡುಪಿಯಲ್ಲಿ ಪರ್ಯಾಯದ ಸಂಪ್ರದಾಯ ಆರಂಭವಾಗಿ 500 ವರ್ಷ ಕರಾಘವೇಂದ್ರ ಪಂಚಶತಮಾನೋತ್ಸವ ಕಾರ್ಯಕ್ರಮದ ಉದ್ಘೋಷವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಾಡಲಿದ್ದು, ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿಯೂ ಭಾಗವಹಿಸಲಿದ್ದಾರೆ.
Advertisement
ಮಠದ ಮ್ಯಾನೇಜರ್ ಗೋವಿಂದರಾಜ್ ಮಾತನಾಡಿ, ಅದಮಾರು ಮಠಾಧೀಶರಾದ ವಿಶ್ವಪ್ರೀಯ ತೀರ್ಥ ಸ್ವಾಮೀಜಿ, ಈಶಪ್ರಿಯ ತೀರ್ಥ ಸ್ವಾಮೀಜಿಯವರನ್ನು ಸಿಎಂ ಭೇಟಿಮಾಡಿ ಚರ್ಚಿಸಲಿದ್ದಾರೆ. ರಾಜಾಂಗಣ ಬಳಿಯ ಉಡುಪಿ ಸೀರೆಯ ಮಳಿಗೆಗೆ ಸಿಎಂ ಚಾಲನೆ ನೀಡಲಿದ್ದಾರೆ ಎಂದರು. ಕಲಾವಿದ ಪುರುಷೋತ್ತಮ ಅಡ್ವೆ, ವೈ.ಎನ್ ರಾಮಚಂದ್ರ, ಸಂತೋಷ್ ಜೊತೆಗಿದ್ದರು.