ಉಡುಪಿ: ಕಳೆದ ಮೂರು ದಿನಗಳಿಂದ ಉಡುಪಿಯಲ್ಲಿ ಮುಂಗಾರು ಮಳೆ ಕೊಂಚ ದುರ್ಬಲವಾಗಿತ್ತು. ಇದೀಗ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಇಂದು ರಾತ್ರಿಯಿಂದ ಜಿಲ್ಲೆಯಾದ್ಯಂತ ವಿಪರೀತ ಮಳೆ ಬೀಳುತ್ತದೆ ಎಂದು ಇಲಾಖೆ ಮುನ್ನೆಚ್ಚರಿಕೆ ರವಾನಿಸಿದೆ. ಉಡುಪಿ ಜಿಲ್ಲೆಯಾದ್ಯಂತ ಮುಂದಿನ ಆರು ದಿನ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
Advertisement
ಜಿಲ್ಲೆಯಾದ್ಯಂತ 60 ರಿಂದ 120 ಮಿಲಿ ಮೀಟರ್ ವರೆಗೆ ಮಳೆ ಬೀಳಬಹುದು ಎಂದು ಅಂದಾಜಿಸಲಾಗಿದೆ. ಕಳೆದ 24 ಗಂಟೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ ಹತ್ತು ಮಿಲಿಮೀಟರ್ ಮಳೆ ಬಿದ್ದಿದೆ. ಜಿಲ್ಲೆಯ ಮೂರು ತಾಲೂಕಿನ ಮಳೆ ವಿವರವನ್ನು ನೋಡೋದಾದರೆ, ಉಡುಪಿ ತಾಲೂಕಿನಲ್ಲಿ 9 ಕುಂದಾಪುರ ತಾಲೂಕಿನಲ್ಲಿ 13 ಕಾರ್ಕಳ ತಾಲೂಕಿನಲ್ಲಿ 10 ಮಿಲಿ ಮೀಟರ್ ಮಳೆಯಾಗಿದೆ.
Advertisement
Advertisement
ಕಂಬದ ಕೋಣೆ ಗ್ರಾಮದಲ್ಲಿ 34 ಮಿಲಿಮೀಟರ್ ಮಳೆಯಾಗಿದೆ. ಕಿರಿಮಂಜೇಶ್ವರ ಗ್ರಾಮದಲ್ಲಿ 25 ಮಿಲಿಮೀಟರ್ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ.