ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ ಮಾವಿನ ಹಣ್ಣಿನ ಸೀಸನ್ ಮುಗಿಯುತ್ತಾ ಬಂದಿದೆ. ಹೀಗಾಗಿ ನೀವು ಇಂದು ಸಿಹಿಯಾದ ಮಾವಿನ ಹಣ್ಣಿನ ಕೇಸರಿ ಬಾತ್ ಮಾಡಿ ಸಿವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
* ಮಾವಿನ ಹಣ್ಣು- 1ಕಪ್
* ಚಿರೋಟಿ ರವೆ- 1ಕಪ್
* ಹಾಲು- 1ಕಪ್
* ತುಪ್ಪ- ಅರ್ಧ ಕಪ್
* ದ್ರಾಕ್ಷಿ ,ಗೋಡಂಬಿ
* ಏಲಕ್ಕಿ ಪುಡಿ – ಅರ್ಧ ಟೀ ಸ್ಪೂನ್
* ಹಳದಿ ಬಣ್ಣದ ಫುಡ್ ಕಲರ್
* ಕೇಸರಿ ದಳ
Advertisement
Advertisement
ಮಾಡುವ ವಿಧಾನ:
* ಮೊದಲು ಬಾಣಲೆಗೆ 2 ಚಮಚ ತುಪ್ಪ ಹಾಕಿ ಅದು ಬಿಸಿ ಆದ ಮೇಲೆ ದ್ರಾಕ್ಷಿ ಮತ್ತು ಗೋಡಂಬಿ ಹಾಕಿ ಹುರಿದುಕೊಳ್ಳಿ, ಈಗ ಅದನ್ನು ತೆಗೆದು ಬದಿಯಲ್ಲಿ ಇಟ್ಟಿರಬೇಕು. ಇದನ್ನೂ ಓದಿ: ಬೆಳಗ್ಗಿನ ಟಿಫಿನ್ಗೆ ಮಾಡಿ ಬಿಸಿ ಬೇಳೆ ಬಾತ್
Advertisement
* ಮಾವಿನ ಹಣ್ಣಿನ ಮಿಶ್ರಣವನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು, ಬಳಿಕ ಅದಕ್ಕೆ ಹಾಲು ಹಾಕಿ ತಿರುಗಿಸಿಕೊಳ್ಳಬೇಕು, ನಂತರ ಅದಕ್ಕೆ ನೀರು ಹಾಕಿ 2 ನಿಮಿಷ ಕುದಿಯಲು ಬಿಡಬೇಕು.
* ಬಳಿಕ ಏಲಕ್ಕಿ ಪುಡಿ, ಕೇಸರಿ ದಳ, ಹಳದಿ ಬಣ್ಣದ ಫುಡ್ ಕಲರ್ ಹಾಕಿ, ಆ ಮೇಲೆ ಹುರಿದ ದ್ರಾಕ್ಷಿ- ಗೋಡಂಬಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
* ನಂತರ ಹುರಿದ ಚಿರೋಟಿ ರವೆ, ಸ್ವಲ್ಪ ತುಪ್ಪ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ, ನಂತರ ಬೇಕಾದರೆ ಸ್ವಲ್ಪ ಸಕ್ಕರೆ ಸೇರಿಸಿ. ಬಳಿಕ 2 ರಿಂದ 3 ನಿಮಿಷ ಬೇಯಿಸಿದರೆ ಬಿಸಿ ಬಿಸಿ ಮಾವಿನ ಹಣ್ಣಿನ ಕೇಸರಿ ಬಾತ್ ಸವಿಯಲು ಸಿದ್ಧವಾಗುತ್ತದೆ.