ಈ ಅಂಬುಲೆನ್ಸ್‌ನಲ್ಲಿ ಮಕ್ಕಳ ಶವ ಸಾಗಿಸಲು ಇಷ್ಟವಿಲ್ಲ, ದಯವಿಟ್ಟು ಸುರಕ್ಷಿತವಾಗಿರಿ: ನಟ ಅರ್ಜುನ್ ಗೌಡ

Public TV
2 Min Read
ARJUN GOWDA

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆಯಿಂದ ರಾಜ್ಯ ಭೀಕರ ಪರಿಣಾಮ ಎಸುರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಮೂರನೇ ಅಲೆಯ ಬಗ್ಗೆ ಸ್ಯಾಂಡಲ್‍ವುಡ್ ನಟ, ಅಂಬುಲೆನ್ಸ್ ಡ್ರೈವರ್ ಅರ್ಜುನ್ ಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ARJUN 1

ಮೂರನೇ ಅಲೆಯ ಬಗ್ಗೆ ಮಾತನಾಡಿರುವ ಅರ್ಜುನ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಈಗಾಗಲೇ ಈ ಅಂಬುಲೆನ್ಸ್ ನಲ್ಲಿ ಹಲವಾರು ಮಂದಿಯ ಶವಗಳನ್ನು ಸಾಗಿಸಿದ್ದೀನಿ. ಆದರೆ ಮುಂದೆ ಮಕ್ಕಳ ಶವವನ್ನು ಸಾಗಿಸಲು ಇಷ್ಟಪಡಲ್ಲ. ಹೀಗಾಗಿ ದಯವಿಟ್ಟು ಮಕ್ಕಳನ್ನು ರಕ್ಷಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವೀಡಿಯೋವನ್ನು ನಟ ಇನ್ಸ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

arjun gowda e1621049910728

ವೀಡಿಯೋದಲ್ಲಿ ಹೇಳಿದ್ದೇನು..?
ಎಲ್ಲರಿಗೂ ನಮಸ್ಕಾರ ಕೊರೊನಾ ಮೂರನೇ ಅಲೆ ಬರಲಿದೆ. ಅದರಿಂದ ಮಕ್ಕಳಿಗೆ ತೊಂದರೆ ಆಗುತ್ತದೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಮೂರನೇ ಅಲೆ ಬರತ್ತೆ ಎಂದು ಎಲ್ಲರೂ ಕಾಯುತ್ತಾ ಕೂತಿದ್ದೀರಾ ಅನಿಸುತ್ತೆ. ಆದರೆ ಅದು ಈಗಾಗಲೇ ಬಂದಿದೆ. ಅಪ್ಪ-ಅಮ್ಮನಿಗೆ ಕೊರೊನಾ ಬರುತ್ತದೆ. ಈ ವೇಳೆ ಮಕ್ಕಳು ಐಸೋಲೇಟ್ ಆಗ್ತಿದ್ದಾರೆ, ಅದೇ ರೀತಿ ಅಪ್ಪ-ಅಮ್ಮ ನಿಧನರಾಗ್ತಿದ್ದಾರೆ. ಅವರ ಮಕ್ಕಳು ಏನು ಮಾಡ್ತಾರೆ ಎಂದು ಅರ್ಜುನ್ ಪ್ರಶ್ನಿಸಿದ್ದಾರೆ.

ನನಗೆ ನಿತ್ಯ 25 ಫೋನ್‍ಗಳು ಬರುತ್ತಿವೆ. ನಮಗೆ ಕೊರೊನಾ ಬಂದಿದೆ. ನಮ್ಮ ಮಕ್ಕಳನ್ನು ಎಲ್ಲಾದರೂ ಐಸೋಲೇಷನ್ ಮಾಡಬೇಕು. ಆ ಬಗ್ಗೆ ನಿಮಗೆ ಗೊತ್ತಾ ಎಂದು ಕೇಳುತ್ತಾರೆ. ಇನ್ನೂ ಕೆಲವರು ನಮ್ಮ ಸಂಬಂಧಿಕರಲ್ಲಿ ಅಪ್ಪ-ಅಮ್ಮ ಇಬ್ಬರೂ ಮೃತಪಟ್ಟಿದ್ದಾರೆ. ಅವರ ಮಕ್ಕಳನ್ನು ಅಡಾಪ್ಟ್ ಮಾಡಿಕೊಳ್ಳಬೇಕಿತ್ತು. ಯಾರಾದಾರೂ ಸಿಕ್ತಾರಾ ಎಂದು ಕೇಳುತ್ತಾ ಇದ್ದಾರೆ. ಇದಕ್ಕೆಲ್ಲಾ ಹೊಣೆ ಯಾರು? ಎಂದು ಅರ್ಜುನ್ ಆತಂಕ ವ್ಯಕ್ತಪಡಿಸಿದ್ದಾರೆ.

ARJUN GOWDA 1

ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಒಂದೊಳ್ಳೆಯ ಔಟ್ ಕಮ್ ಬಂದೇ ಬರುತ್ತದೆ ಎಂಬ ನಂಬಿಕೆ ಇದೆ. ಕೊರೊನಾ ಬರೋದಕ್ಕೂ ಮೊದಲೇ ರೆಡಿ ಆಗಿದ್ರೆ ಒಳ್ಳೆಯದು. ಯಾಕಂದ್ರೆ ಈಗಾಗಲೇ ಇದೇ ಗಾಡಿಯಲ್ಲಿ ತುಂಬಾ ಹೆಣಗಳನ್ನು ಸಾಗಿಸಿದ್ದೀನಿ. ಈಗ ಮಕ್ಕಳ ಹೆಣವನ್ನೂ ತೆಗೆದುಕೊಂಡು ಹೋಗಬೇಕು ಎಂದರೆ ನಾನು ಅದನ್ನು ಇಷ್ಟಪಡಲ್ಲ ಎಂದು ಅರ್ಜುನ್ ಗೌಡ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *