ಚಿತ್ರದುರ್ಗ: ಸಚಿವ ಕೆ.ಎಸ್ ಈಶ್ವರಪ್ಪ ನಿಲುವು ಸರಿಯಾಗಿದೆ. ಈಶ್ವರಪ್ಪ ಖಾತೆಯಲ್ಲಿ ಸಿಎಂ ಕೈ ಹಾಕಿ ಬೀಗರಿಗೆ, ಬೇಕಾದವರಿಗೆ ಹಣ ಕೊಡುವ ಮೂಲಕ ಬಿ.ಎಸ್ ಯಡಿಯೂರಪ್ಪ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಕನ್ನಡ ಪರ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹಸ್ತಕ್ಷೇಪ ಮಾಡುವುದಾದರೆ ಮಂತ್ರಿಗಿರಿ ಯಾಕೆ ಬೇಕು? ಮಂತ್ರಿಗಳಿಗೆ ಅವರದ್ದೇ ಆದ ಸ್ವಾತಂತ್ರ್ಯ ಇರುತ್ತದೆ. ಸಚಿವ ಕೆ.ಎಸ್.ಈಶ್ವರಪ್ಪ ನಿಲುವನ್ನು ಬೆಂಬಲಿಸುತ್ತೇನೆ ಎಂದರು.
Advertisement
Advertisement
ಕೆಲವರು ಸಿಎಂ ಬಿಎಸ್‍ವೈಗೆ ಬೆಂಬಲ ಸೂಚಿಸಿದ್ದು ಒಳ್ಳೆಯದಲ್ಲ. ಸಿಎಂ ಬಿಎಸ್‍ವೈ ಹಸ್ತಕ್ಷೇಪ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಬಿಎಸ್‍ವೈ ನೇತೃತ್ವದ ಸರ್ಕಾರ ಕಂಪನಿ ಸರ್ಕಾರ. ವ್ಯಾಪಾರದ ಅಂಗಡಿ ಮಾಡಿಕೊಂಡಿದ್ದು ವರ್ಗಾವಣೆ ರೇಟ್ ಫಿಕ್ಸ್ ಆಗಿದೆ ಎಂದು ವಾಟಾಳ್ ಕಿಡಿಕಾರಿದರು.
Advertisement
ಬಿ.ಎಸ್.ಯಡಿಯೂರಪ್ಪ ಕಂಪನಿ ಹೋಗಬೇಕು, ಇಲ್ಲವಾದಲ್ಲಿ ರಾಜ್ಯಕ್ಕೆ ಅಪಾಯ. ಮಠಾಧೀಶರು ಬಿಎಸ್ ವೈ ಗೆ ಬೆಂಬಲ ನೀಡುವುದು ನಿಲ್ಲಿಸಲಿ. ರಾಜ್ಯದಲ್ಲಿ ಬೇಗ ಚುನಾವಣೆ ಬರಬೇಕು, ಅರಾಜಕತೆ ಸೃಷ್ಠಿ ಆಗಲು ಬಿಡಬಾರದು ಎಂದರು. ಇದೇ ವೇಳೆ ಮಾಜಿ ಸಚಿವ ಜಾರಕಿಹೊಳಿ ಸಿಡಿ ಕೇಸ್ ಸಂಬಂಧ ಉನ್ನತ ಮಟ್ಟದ ಸಮಗ್ರ ತನಿಖೆ ಆಗಲಿ ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.