ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಮುಂದಿನ ಸಿಎಂ ಆಗಿ ಮಾಡುವಂತೆ ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಒತ್ತಾಯಿಸಿದೆ.
ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ಇಂದು ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಸುದ್ದಿಗೋಷ್ಠಿ ನಡೆಸಲಾಯ್ತು. ಈ ವೇಳೆ ಮಾತನಾಡಿದ ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ನ ಅಧ್ಯಕ್ಷರಾದ ದೊಡ್ಡಯ್ಯ, ಕೆಎಸ್ ಈಶ್ವರಪ್ಪ ಹಿಂದುಳಿದ ವರ್ಗದಿಂದ ಬಂದಂತಹ ನಿಷ್ಠಾವಂತ ನಾಯಕರಾಗಿದ್ದಾರೆ. ಬಹಳ ವರ್ಷಗಳಿಂದ ಬಿಜೆಪಿಯಲ್ಲಿ ನಿಷ್ಠಾವಂತರಾಗಿ ದುಡಿದಿದ್ದಾರೆ. ಯಡಿಯೂರಪ್ಪನವರೇ ಇದಕ್ಕೂ ಮೊದಲು ಪಕ್ಷವನ್ನು ತೊರೆದು ಮತ್ತೆ ವಾಪಸ್ ಆಗಿದ್ದಾರೆ ಅಂತಹವರಿಗೆ ಸಿಎಂ ಕುರ್ಚಿಯನ್ನು ನೀಡಲಾಗಿದೆ. ಆದರೆ ಹಿಂದುಳಿದ ವರ್ಗಗಳ ನಾಯಕ ಈಶ್ವರಪ್ಪನವರನ್ನು ಯಾರು ಸಹ ಗುರುತಿಸುತ್ತಿಲ್ಲ ಎಂದು ಬೇಸರ ಹೊರ ಹಾಕಿದರು.
ಒಂದು ವೇಳೆ ಈಶ್ವರಪ್ಪನವರು ಆಗುವುದು ಬೇಡ ಎಂದರೆ ಒಬ್ಬ ದಲಿತನನ್ನು ಸಿಎಂ ಮಾಡಲಿ ಕೇವಲ ಮೇಲ್ವರ್ಗಗಳ ನಾಯಕರನ್ನು ಇಲ್ಲಿ ಸಿಎಂ ಆಗುವಂತೆ ಪ್ರಸ್ತಾಪ ಮಾಡಲಾಗುತ್ತಿದೆ. ಅಲ್ಲದೆ ದಲಿತ ನಾಯಕ ಅಥವಾ ಹಿಂದುಳಿದ ವರ್ಗಗಳ ನಾಯಕರು ಸಿಎಂ ಆದರೆ ಇದರಿಂದ ಜನಸಾಮಾನ್ಯರಿಗೆ ಇನ್ನಷ್ಟು ಒಳ್ಳೆಯದಾಗುತ್ತದೆ ಎಂದು ಹೈಕಮಾಂಡ್ಗೆ ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ವತಿಯಿಂದ ಒತ್ತಾಯಿಸಲಾಗಿದೆ. ಇದನ್ನೂ ಓದಿ: ಜಲ ಪ್ರಳಯದ ಮಧ್ಯೆ ರಾಜಕೀಯ ಪ್ರಹಸನ – ಬಿಎಸ್‍ವೈಗೆ ನಾಳೆ ಬರುತ್ತಾ ಹೈಕಮಾಂಡ್ ಸಂದೇಶ?