ಈಕೆಯೇ ನನ್ನ ಮಗಳು, ಆದ್ರೆ ನನ್ನ ಪಾಲಿಗೆ ಸತ್ತಿದ್ದಾಳೆ – ಪುತ್ರಿಯನ್ನ ನೋಡಿ ಕಣ್ಣೀರಿಟ್ಟ ತಂದೆ

Public TV
4 Min Read
Shikha Dubey Case 2

– ಜೀವಂತವಾಗಿ ಬಂದ ಸುಂದರಿ ಹೇಳಿದ್ದು ಮೈ ನಡುಗಿಸೋ ಕೊಲೆ ಕಥೆ
– ಸ್ವಾರ್ಥಕ್ಕಾಗಿ 3 ವರ್ಷದ ಮಗುವಿನ ತಾಯಿಯ ಪ್ರಾಣ ತೆಗೆದ ಚೆಲುವೆಯ ಭಯಾನಕ ಕಹಾನಿ

ಗೊರಖಪುರ: 2011ರ ಗೊರಖಪುರ ಜಿಲ್ಲೆಯಲ್ಲಿ ನಡೆದ ಶಿಖಾ ದುಬೆ ಕೊಲೆ ಪ್ರಕರಣ ಇಡೀ ಉತ್ತರ ಪ್ರದೇಶವನ್ನ ಬೆಚ್ಚಿ ಬೀಳಿಸಿತ್ತು. ಆ ಥ್ರಿಲ್ಲರ್ ಕೊಲೆ ಪ್ರಕರಣದ ಕಹಾನಿಯ ವಿವರ ಇಲ್ಲಿದೆ. ತನ್ನ ಇನಿಯನ ಜೊತೆ ಲಲ್ಲೆ ಹೊಡೆಯೋಕೆ ಹೋದ ಸುಂದರಿ ಮುಗ್ಧ ಮಹಿಳೆಯ ಜೀವವನ್ನ ತೆಗೆದಿರುವ ಭಯಾನಕ ಪ್ರಕರಣವಿದು.

Shikha Dubey Case 3

2011 ಜೂನ್ 11ರಂದು ಗೊರಖಪುರದಲ್ಲಿ ಗುರುತು ಸಿಗದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿತ್ತು. ಯುವತಿ ಬಟ್ಟೆ, ಅಲ್ಲಿದ್ದ ಕೆಲ ವಸ್ತುಗಳ ಆಧಾರದ ಮೇಲೆ ಆಕೆ ಇಂಜಿನೀಯರಿಂಗ್ ವಿದ್ಯಾರ್ಥಿನಿ ಅನ್ನೋದು ಗೊತ್ತಾಗಿತ್ತು. ಇತ್ತ ಮಗಳು ಶಿಖಾ ಕಾಣೆಯಾಗಿದ್ದಾಳೆ ಅಂತಾ ದೂರು ದಾಖಲಿಸಿದ್ದ ಪೋಷಕರು ಪುತ್ರಿಯ ಶವ ಎಂದು ಗುರುತಿಸಿ ಅಂತ್ಯಕ್ರಿಯೆ ನಡೆಸಿದ್ದರು. ಪುತ್ರಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ತಂದೆ ರಾಮ್ ಪ್ರಕಾಶ್ ದುಬೆ ನೆರೆಮನೆಯ ದೀಪು ಎಂಬವನ ವಿರುದ್ಧ ದೂರು ದಾಖಲಿಸಿದ್ದರು.

Shikha Dubey Case 1

ಪೊಲೀಸರು ಆರೋಪಿ ದೀಪುವಿನ ಬೆನ್ನತ್ತಿದ್ದಾಗ ಆತ ಸಹ ಕಾಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪೊಲೀಸರ ಅನುಮಾನ ಮತ್ತಷ್ಟು ಬಲವಾದಾಗ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ದೀಪು ಸೋನಭದ್ರ ನಗರದಲ್ಲಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಆತನ ಬಂಧನಕ್ಕೆ ತೆರಳಿದ್ದ ಗೊರಖಪುರ ಪೊಲೀಸರಿಗೆ ಶಾಕ್ ಎದುರಾಗಿತ್ತು. ಯಾರ ಕೊಲೆಯಲ್ಲಿ ದೀಪುನನ್ನು ಬಂಧಿಸಲು ಬಂದಿದ್ದರೋ ಆಕೆಯ ಅವನ ಜೊತೆಯಲ್ಲಿದ್ದಳು. ಒಂದು ಕ್ಷಣ ಆಶ್ಚರ್ಯಗೊಂಡು ಇಬ್ಬರನ್ನ ಬಂಧಿಸಿ ಗೊರಖಪುರಕ್ಕೆ ಕರೆ ತಂದಿದ್ದರು.

Shikha Dubey Case 1

ಮಗಳ ಕೆನ್ನೆ ಮುಟ್ಟಿ ಕಣ್ಣೀರಿಟ್ಟ ತಂದೆ: ಇನ್ನು ಮಗಳು ಸತ್ತೇ ಹೋದಳು ಅಂತ್ಯಕ್ರಿಯೆ ಮಾಡಿ ದುಃಖದಲ್ಲಿ ಮಡುವಿನಲ್ಲಿದ್ದ ಕುಟುಂಬಕ್ಕೆ ಶಿಖಾ ಬದುಕಿರುವ ವಿಷಯ ತಿಳಿದಿದೆ. ಪೊಲೀಸ್ ಠಾಣೆಗೆ ತೆರಳಿದ್ದ ಶಿಖಾ ತಂದೆಗೆ ಅಧಿಕಾರಿಗಳು ಎಲ್ಲ ಮಾಹಿತಿ ನೀಡಿದ್ದಾರೆ. ಶಿಖಾ ಬಳಿ ತಂದೆ ರಾಮ್ ಪ್ರಕಾಶ್ ಪುತ್ರಿಯ ಕೆನ್ನೆ ಮುಟ್ಟಿ ಈಕೆಯ ನನ್ನ ಮಗಳು. ಆದ್ರೆ ನನ್ನ ಪಾಲಿಗೆ ಸತ್ತು ಹೋಗಿದ್ದಾಳೆ ಎಂದು ಹೇಳಿ ಕಣ್ಣೀರು ಹಾಕಿ ಹೊರ ನಡೆದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ತಂದೆ ಮಗಳನ್ನ ಗುರುತಿಸೋ ಫೋಟೋ ಲಭ್ಯವಿದೆ. ಇದನ್ನೂ ಓದಿ: ಲವ್ ಮಾಡಿ ಗರ್ಭಿಣಿ ಮಾಡ್ದ, ಮದುವೆಯಾಗು ಎಂದಿದ್ದಕ್ಕೆ ಕೊಲೆಯೇ ಮಾಡ್ಬಿಟ್ಟ ಪಾಪಿ!

Police Jeep

ಮೈ ನಡುಗಿಸೋ ಕೊಲೆ ಕಥೆ: ಶಿಖಾ ಮತ್ತು ದೀಪು ಒಂದೇ ಏರಿಯಾದ ನಿವಾಸಿಗಳಾಗಿದ್ದರಿಂದ ಇಬ್ಬರ ಮಧ್ಯೆ ಲವ್ ಆಗಿತ್ತು. ಮದುವೆಗೆ ಎರಡೂ ಕುಟುಂಬಗಳು ವಿರೋಧ ವ್ಯಕ್ತಪಡಿಸುತ್ತೇವೆ ಎಂಬುದನ್ನ ಖಾತ್ರಿ ಮಾಡಿಕೊಂಡು ಕಿಲ್ಲರ್ ಜೋಡಿ ಭಯಾನಕ ಕೊಲೆಯ ಬಲೆಯನ್ನ ಹೆಣೆದಿತ್ತು. ಶಿಖಾ ಲವರ್ ದೀಪು ಜೊತೆ ಓಡಿ ಹೋಗಲು ಪ್ಲಾನ್ ಮಾಡ್ಕೊಂಡಿದ್ದಳು. ಆದ್ರೆ ಓಡಿ ಹೋದ್ರೂ ಮನೆಯವರಿಗೆ ಈ ವಿಷಯ ತಿಳಿಯಬಾರದು ಅಂತ ಇನಿಯನ ಜೊತೆ ಸೇರಿ ತನ್ನ ಕೊಲೆಯ ಕಥೆಯನ್ನ ಬರೆದಿದ್ದಳು.

UP police

ತನ್ನಷ್ಟೆ ಎತ್ತರ, ಹೋಲಿಕೆ ಇರುವಂತಹ ಯುವತಿಯನ್ನ ಕೊಂದು ಅದನ್ನ ತನ್ನ ಕೊಲೆ ಎಂದು ಬಿಂಬಿಸಲು ಶಿಖಾ ಪ್ಲಾನ್ ಮಾಡಿದ್ದಳು. ಇದಕ್ಕೆ ಇನಿಯ ದೀಪು ತನ್ನ ಗೆಳೆಯರ ಮೂಲಕ ಶಿಖಾಗೆ ಸಾಥ್ ನೀಡಿದ್ದನು. ಇದನ್ನೂ ಓದಿ: ಕಾರಿನಲ್ಲಿ ಸೆಕ್ಸ್, ಲವ್ವರ್ ಕೊಲೆ- ನಗ್ನ ದೇಹವನ್ನ ಪೋಷಕರ ಬಳಿ ಕೊಂಡೊಯ್ದು ತಪ್ಪೊಪ್ಪಿಕೊಂಡ ಆರೋಪಿ

thinkstockphotos 186407421

ಮೂರು ವರ್ಷದ ಮಗುವಿನ ತಾಯಿಯ ಕೊಲೆ: ಕೊಲೆಗೆ ದೀಪು ಸೋನಭದ್ರ ಜಿಲ್ಲೆಯಲ್ಲಿ ಟ್ರಾನ್ಸಪೋರ್ಟ್ ಕೆಲಸ ಮಾಡಿಕೊಂಡಿದ್ದ ಸುಗ್ರೀವ್ (35) ಬಳಿ ಸಹಾಯ ಕೇಳಿದ್ದನು. ದೀಪುವಿನ ಗೆಳತಿಯಷ್ಟು ಎತ್ತರ ಮತ್ತು ಹೋಲಿಕೆಯುಳ್ಳ ಮೂರು ವರ್ಷದ ಮಗುವಿನ ತಾಯಿ ಪೂಜಾ (25) ಎಂಬವರ ಕೊಲೆಗೆ ರೂಪುರೇಷ ಸಿದ್ಧಪಡಿಸಿದ್ದನು. ಇದನ್ನೂ ಓದಿ: ತಾಯಿಯನ್ನೇ ಕೊಂದ ಟೆಕ್ಕಿ ಪ್ರಕರಣಕ್ಕೆ ಟ್ವಿಸ್ಟ್ – ಕೊಲೆ ಮಾಡಿ ಲವ್ವರ್ ಜೊತೆ ಜೂಟ್

COUPLE medium

ಗೊರಖಪುರದಲ್ಲಿ ಮೂರು ಸಾವಿರ ರೂಪಾಯಿ ಕೆಲಸ ಕೊಡಿಸುವದಾಗಿ ಇಬ್ಬರು ಪೂಜಾಗೆ ಹೇಳಿದ್ದರು. ಆರ್ಥಿಕ ಸಂಕಷ್ಟದಲ್ಲಿದ್ದ ಕೆಲಸ ಒಪ್ಪಿಕೊಂಡ ಪೂಜಾ ಗೊರಖಪುರಕ್ಕೆ ಬರಲು ಒಪ್ಪಿದ್ದರು. ಜೂನ್ 10ರಂದು ಟ್ರಕ್ ನಲ್ಲಿ ಪೂಜಾಳನ್ನ ಕರೆತಂದ ದೀಪು ಮತ್ತು ಸುಗ್ರೀವ್ ಗೆ ಶಿಖಾ ಜೊತೆಯಾಗಿದ್ದಳು. ಟ್ರಕ್ ನಲ್ಲಿ ರಾಡ್‍ನಿಂದ ಹೊಡೆದು ಪೂಜಾಳನ್ನ ಕೊಲೆಗೈದಿದ್ದರು. ಗುರುತು ಸಿಗದಂತೆ ಮುಖವನ್ನ ವಿಕಾರಗೊಳಿಸಿದ್ದರು. ನಂತರ ಶಿಖಾ ಪ್ರತಿನಿತ್ಯ ಕೊರಳಲ್ಲಿ ಧರಿಸುತ್ತಿದ್ದ ದಾರ ಮತ್ತು ಬಟ್ಟೆಯನ್ನ ಹಾಕಿದ್ದಾರೆ. ಇದನ್ನೂ ಓದಿ: ಅನ್ಯ ಜಾತಿ ಯುವಕನ ಜೊತೆ ಲವ್- ಅಣ್ಣ, ಬಾವನಿಂದ ಯುವತಿ ಕೊಲೆ ಯತ್ನ

marriage fb 020419062152 1

ಈ ಕೊಲೆಗೆ ಟ್ರಕ್ ಚಾಲಕ ಹಣದಾಸೆಗಾಗಿ ಮೂವರಿಗೆ ಸಾಥ್ ನೀಡಿದ್ದನು. ರಾತ್ರಿ ಶವವನ್ನ ಸಿಂಗಾಡಿಯಾ ಬಳಿ ಎಸೆದು ಪರಾರಿಯಾಗಿದ್ದರು. ಜೊತೆಗೆ ಪ್ರತಿನಿತ್ಯ ಶಿಖಾ ಬಳಸುತ್ತಿದ್ದ ವಸ್ತುಗಳನ್ನ ಸಹ ಶವದ ಪಕ್ಕದಲ್ಲಿ ಎಸೆದು ಪಾರಾಗಿದ್ದರು. ಪೊಲೀಸರು ಇಬ್ಬರನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಸದ್ಯ ಜಾಮೀನು ಪಡೆದು ಹೊರ ಬಂದಿರುವ ಶಿಖಾ ಮತ್ತು ದೀಪು ಬೇರೆ ಬೇರೆ ಮದುವೆಯಾಗಿ ಜೀವನ ನಡೆಸುತ್ತಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದೆ. ಇದನ್ನೂ ಓದಿ: ಗಂಡನನ್ನು ಬಿಟ್ಟು ಲವ್ವರ್ ಜೊತೆ ಮಗಳು ಎಸ್ಕೇಪ್- ರೊಚ್ಚಿಗೆದ್ದ ತಂದೆಯಿಂದ ಇಬ್ಬರ ಕೊಲೆ

Share This Article
Leave a Comment

Leave a Reply

Your email address will not be published. Required fields are marked *