ಜೆರುಸಲೇಮ್ : ಗಾಜಾದ ಹಮಾಸ್ ಬಂಡುಕೋರರೊಂದಿಗೆ ಆರಂಭಗೊಂಡ ಇಸ್ರೇಲ್ ಮಿಲಿಟಿರಿ ಪಡೆಯ ಯುದ್ಧ ದಿನೇ ದಿನೇ ತೀವ್ರತೆ ಪಡೆದುಕೊಳ್ಳುತ್ತಿದೆ. ಗಾಜಾ ನಗರದಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಿಂದ ಒಂದೇ ಕುಟುಂಬದ ಸುಮಾರು 10 ಮಂದಿ ಸಾವನ್ನಪ್ಪಿದ್ದು, ಪವಾಡಸದೃಶ್ಯವೆಂಬಂತೆ 6 ತಿಂಗಳ ಮಗು ಬದುಕುಳಿದಿದೆ.
Advertisement
ಈದ್ ಅಲ್- ಫಿತರ್ ರಜಾದಿನವನ್ನು ಆಚರಿಸಲು ಪತ್ನಿ ಮತ್ತು ಐದು ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದರು. ದಾಳಿಗೆ ಸಿಲುಕಿ ಕುಟುಂಬದ ಬಹುತೇಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಮಗುವಿನ ತಂದೆ ಮೊಹಮ್ಮದ್ ಹದೀದಿ ಹೇಳಿದ್ದಾರೆ. ಕಳೆದ ಶನಿವಾರ ಘಟನೆ ನಡೆದಿದ್ದು, ಸಾವನ್ನಪ್ಪಿದ ಕುಟುಂಬದ 10 ಮದಿ ಪೈಕಿ ಬಹುತೇಕರು ಪುಟ್ಟ ಮಕ್ಕಳೆ ಆಗಿದ್ದಾರೆ.
Advertisement
Advertisement
ಪತ್ನಿ ಮತ್ತು 6 ರಿಂದ 14 ವರ್ಷದ ಮಕ್ಕಳಲ್ಲಿ ಮೂವರು ಸಾವನ್ನಪಿದ್ದಾರೆ, 11 ವರ್ಷದ ಮಗು ಕಾಣೆಯಾಗಿದೆ. 6 ತಿಂಗಳ ಮಗ ಒಮರ್ ಮಾತ್ರ ಬದುಕುಳಿದಿದ್ದಾನೆ. ಮಗುವಿನ ಕಾಲು ಮುರಿದಿದೆ. ಮಗುವನ್ನು ಗಾಜಾದ ಅಲ್- ಶಿಫಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ದಾಳಿಯ ಬೆನ್ನಲ್ಲೇ ನೂರಾರು ಜನರು ಗಾಜಾ ನಗರದ ಬೀದಿಗಳಲ್ಲಿ ಕುಟುಂಬ ಸದಸ್ಯರ ಮೃತದೇಹಗಳನ್ನು ಹೊತ್ತು ಮೆರವಣಿಗೆ ನಡೆಸಿದ್ದಾರೆ ಎಂದು ಹದೀದಿ ತಿಳಿಸಿದ್ದಾರೆ.
Advertisement
ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ನೂರಾರು ರಾಕೆಟ್‍ಗಳನ್ನು ಹಾರಿಸಿದ್ದಾರೆ. ಪ್ರತೀಕಾರವಾಗಿ ಇಸ್ರೇಲ್ ಗಾಜಾ ಪಟ್ಟಿ ಮೇಲೆ ವೈಮಾನೀಕ ದಾಳಿ ನಡೆಸಿದೆ. ಗಾಜಾದಲ್ಲಿ 31 ಮಕ್ಕಳು 20 ಮಹಿಳೆಯರು ಸೇರಿದಂತೆ ಕನಿಷ್ಠ 126 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್‍ನಲ್ಲಿ 6 ವರ್ಷದ ಬಾಲಕ, ಸೈನಿಕರು ಸೇರಿದಂತೆ 7ಮಂದಿ ಮೃತಪಟ್ಟಿದ್ದಾರೆ.