ಇನ್ಮುಂದೆ ಬೆಂಗ್ಳೂರಿನ ನಿವಾಸಿಗಳು ಕಸಕ್ಕೂ ದುಡ್ಡು ಪಾವತಿಸಬೇಕು

Public TV
2 Min Read
Bengaluru Lockdown 4

– ಕಸ ನಿರ್ವಹಣೆಗೆ ಶುಲ್ಕ ಜಾರಿ
– ಮುಂದಿನ ತಿಂಗಳಿನಿಂದ ಜಾರಿ ಸಾಧ್ಯತೆ
– ವಿದ್ಯುತ್‌ ಬಿಲ್‌ ಜೊತೆ ಕಸಕ್ಕೂ ಬಿಲ್‌?

ಬೆಂಗಳೂರು: ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯ ಅಡಿಯಲ್ಲಿರುವ ಮನೆಗಳು ಪ್ರತಿ ತಿಂಗಳು ಕಸಕ್ಕೂ ದುಡ್ಡನ್ನು ಪಾವತಿಸಬೇಕು.

ಹೌದು. ಬಿಬಿಎಂಪಿ ರೂಪಿಸಿರುವ ಕಸ ನಿರ್ವಹಣೆ ಉಪನಿಯಮ 2020 ರಾಜ್ಯಪತ್ರದಲ್ಲಿ ಪ್ರಕಟವಾಗಿದ್ದು, ಅಧಿಕೃತವಾಗಿ ಜಾರಿಗೆ ಬಂದಿದೆ. ಶುಲ್ಕ ಸಂಗ್ರಹ ಸಂಬಂಧ ಬೆಸ್ಕಾಂಗೆ ಪತ್ರ ಬರೆದಿದ್ದು ಸರ್ಕಾರ ಒಪ್ಪಿದರೆ ಮುಂದಿನ ತಿಂಗಳಿನಿಂದಲೇ ಇದು ಜಾರಿಗೆ ಬರುವ ಸಾಧ್ಯತೆಯಿದೆ.

ಪ್ರತಿ ತಿಂಗಳು ಮನೆಯ ಅಳತೆಗೆ ತಕ್ಕಂತೆ ಹಣ ಸಂಗ್ರಹವಾಗಲಿದೆ. ನೀರು, ವಿದ್ಯುತ್ ಬಿಲ್ ಹೇಗೆ ಕಟ್ಟುತ್ತೀರೋ ಹಾಗೆ ಕಸಕ್ಕೂ ದುಡ್ಡನ್ನು ಕಟ್ಟಬೇಕು. ಬೆಸ್ಕಾಂ ಜೊತೆಗೆ ಈ ಸಂಬಂಧ ಬಿಬಿಎಂಪಿ ಮಾತುಕತೆ ನಡೆಸುತ್ತಿದ್ದು ಒಪ್ಪಿಗೆ ಸಿಕ್ಕರೆ ವಿದ್ಯುತ್ ಬಿಲ್ ಜೊತೆ ಕಸದ ಬಿಲ್ ಬರಲಿದೆ. ಒಂದು ವೇಳೆ ಬೆಸ್ಕಾಂ ಒಪ್ಪದೇ ಇದ್ದರೆ ಆಸ್ತಿ ತೆರಿಗೆ ಕಟ್ಟುವಾಗ ವಸೂಲಿಗೂ ಚಿಂತನೆ ನಡೆದಿದೆ.

bengaluru city arial dh 1553098309

ಮನೆ ಮಾತ್ರವಲ್ಲದೇ ಕಟ್ಟಡ, ಐಷಾರಾಮಿ ಕಲ್ಯಾಣಮಂಟಪಗಳಿದ್ದರೆ ದುಬಾರಿ ಶುಲ್ಕ ಪಾವತಿಸಬೇಕಾಗುತ್ತದೆ. ಆಸ್ಪತ್ರೆ, ಹೋಟೆಲ್, ವಾಣಿಜ್ಯ ಕಟ್ಟಡಗಳಿಗೂ ಪ್ರತ್ಯೇಕ ಶುಲ್ಕ ವಿಧಿಸಲು ಬಿಬಿಎಂಪಿ ಮುಂದಾಗಿದೆ.

ಯಾರಿಗೆ ಎಷ್ಟೆಷ್ಟು ಶುಲ್ಕ?
30*40 ಸೈಟ್ – 30 ರೂ.
60*40 ಸೈಟ್ – 40 ರೂ.
60*40 ಮೇಲ್ಪಟ್ಟು- 50 ರೂ.

ಹೋಟೆಲ್, ಛತ್ರ, ಆಸ್ಪತ್ರೆಗಳಿಗೆ ಶುಲ್ಕವೆಷ್ಟು?
10 ಸಾವಿರ ಚದರಡಿ – 300 ರೂ.
10,000-50,000 ಚದರಡಿ – 500 ರೂ.
50 ಸಾವಿರ ಮೇಲ್ಪಟ್ಟರೆ – 600 ರೂ.
ದೊಡ್ಡ ಕಲ್ಯಾಣಮಂಟಪ – 14,000 ರೂ.

KLR GARBAGE 3

 

ವಾಣಿಜ್ಯ ಕಟ್ಟಡಗಳಿಗೆ ಎಷ್ಟೆಷ್ಟು ಶುಲ್ಕ?
1,000 ಚದರಡಿ ಕಟ್ಟಡಗಳಿಗೆ – 50 ರೂ.
1,000-5,000 ಚದರಡಿ ಕಟ್ಟಡಗಳಿಗೆ – 100 ರೂ.
5,000 ಮೇಲ್ಪಟ್ಟ ಕಟ್ಟಡಗಳಿಗೆ – 300 ರೂ.

ಕೈಗಾರಿಕಾ ಕಟ್ಟಡಗಳಿಗೆ ಎಷ್ಟೆಷ್ಟು ಶುಲ್ಕ?
1,000 ಚದರಡಿ ಕಟ್ಟಡಗಳಿಗೆ – 100 ರೂ.
1,000-5,000 ಚದರಡಿ ಕಟ್ಟಡಗಳಿಗೆ – 200 ರೂ.
5,000 ಮೇಲ್ಪಟ್ಟ ಕಟ್ಟಡಗಳಿಗೆ – 300 ರೂ.

garbage vehicle

ಹೈಕೋರ್ಟ್‌ ಹೇಳಿದ್ದು ಏನು?
ಈ ಹಿಂದೆ ಪ್ರಕರಣ ಒಂದರ ವಿಚಾರಣೆ ಸಂದರ್ಭದಲ್ಲಿ ಕಸ ನಿರ್ವಹಣೆಗಾಗಿ ಬಿಬಿಎಂಪಿ ವರ್ಷಕ್ಕೆ 1 ಸಾವಿರ ಕೋಟಿ ಅಧಿಕ ವೆಚ್ಚ ಮಾಡುತ್ತಿದೆ. ಆದರೆ, ಆಸ್ತಿ ತೆರಿಗೆ ಜೊತೆ ಸಂಗ್ರಹಿಸುತ್ತಿದ್ದ ಉಪಕರದಿಂದ ಕೇವಲ 40 ಕೋಟಿ ರೂ. ಮಾತ್ರ ಸಂಗ್ರಹವಾಗುತ್ತಿದೆ. ಸಣ್ಣ ನಗರಾಡಳಿತ ಸಂಸ್ಥೆಗಳೇ ಕಸ ನಿರ್ವಹಣೆಗೆ ಬಳಕೆದಾರರ ಶುಲ್ಕ ವಿಧಿಸುತ್ತಿರುವಾಗ ಬಿಬಿಎಂಪಿ ಕ್ರಮಕೈಗೊಳ್ಳದ ಬಗ್ಗೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು.

Share This Article