ಬೆಂಗಳೂರು: ಇನ್ನೊಂದು ವಾರದಲ್ಲಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರು ಮಂತ್ರಿಯಾಗಲಿದ್ದಾರೆ ಎಂದು ಸಚಿವ ವಿ. ಸೋಮಣ್ಣ ಭವಿಷ್ಯ ನುಡಿದಿದ್ದಾರೆ.
ಆರ್ ಆರ್ ನಗರ ವ್ಯಾಪ್ತಿಯಲ್ಲಿ ಇಂದು ಕೂಡ ಫುಡ್ ಕಿಟ್ ವಿತರಣೆ ಕಾರ್ಯಕ್ರಮ ಮುಂದುವರಿದಿದೆ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸೋಮಣ್ಣ, ಮುಂದಿನ ಎಂಟು ಹತ್ತು ದಿನಗಳಲ್ಲಿ ಮುನಿರತ್ನ ಸಚಿವರಾಗುತ್ತಾರೆ. ಪಕ್ಷತೀತವಾಗಿ ಜಾತ್ಯತೀತವಾಗಿ ಮುನಿರತ್ನ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಸುಭೀಕ್ಷ ಸರ್ಕಾರ ಬರಬೇಕು ಒಳ್ಳೆಯ ಕೆಲಸ ಆಗಬೇಕಾದರೆ ಇಂತಹ ಶಾಸಕರು ಬರಬೇಕು. ಇನ್ನೊಂದು ವಾರದಲ್ಲಿ ಅವರು ಮಂತ್ರಿ ಆಗಲಿ. ಬಳಿಕ ರಾಜರಾಜೇಶ್ವರಿ ದೇವರ ದರ್ಶನವನ್ನ ನಾವಿಬ್ಬರು ಒಟ್ಟಿಗೆ ಮಾಡ್ತೇವೆ ಎಂದರು.
ಒಟ್ಟಿನಲ್ಲಿ ಬೆಂಗಳೂರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ವಿಚಾರದ ಬೆನ್ನಲ್ಲೇ ಸಚಿವರು ಭವಿಷ್ಯ ನುಡಿದಿದ್ದು, ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಲಾಕ್‍ಡೌನ್ ಎಫೆಕ್ಟ್- ಕೆಲ ತರಕಾರಿ ಬೆಲೆ ದುಬಾರಿ
ವಾರ್ಡ್ ನಂಬರ್ 160 ರ ಪಟ್ಟಣಗೆರೆ ಜಯಣ್ಣ ಸರ್ಕಲ್ ಲ್ಲಿ ಶಾಸಕ ಮುನಿರತ್ನ ಅವರು ಫುಡ್ ಕಿಟ್ ವಿರತಣೆ ಕಾರ್ಯಕ್ರಮ ನಡೆದಿದೆ. ಕಳೆದ ಹಲವು ದಿನದಿಂದ ಕ್ಷೇತ್ರದಾದ್ಯಂತ ಕೊರೊನಾ ಸಂಕಷ್ಟಕ್ಕೆ ಒಳಗಾಗದವರಿಗೆ ಶಾಸಕರು ಆಹಾರ ಕಿಟ್ ವಿತರಿಸುತ್ತಿದ್ದಾರೆ. ಸಾರ್ವಜನಿಕರು ಕೂಡ ಸಾಮಾಜಿಕ ಅಂತರದೊಂದಿಗೆ ಕಿಟ್ ಪಡೆದಿದ್ದಾರೆ. ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು, ಪಾಲಿಕೆ ಸದಸ್ಯರು ಭಾಗಿಯಾಗಿದ್ದಾರೆ.