ಲಕ್ನೋ: ಕೊರೊನಾ ಇರುವುದರಿಂದ ಜನರು ಸರ್ಕಾರದ ನಿಮಯಗಳನ್ನು ಪಾಲಿಸುತ್ತಾ ಮದುವೆ, ಶುಭ-ಸಮಾರಂಭಗಳನ್ನು ಮಾಡುತ್ತಿದ್ದಾರೆ. ಆದರೆ ಇಲ್ಲಿ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಒಂದು ಘಟನೆ ನಡೆದು ಮದುವೆ ಅರ್ಧಕ್ಕೆ ನಿಂತು ಹೋಗಿದೆ.
ಉತ್ತರಪ್ರದೇಶದ ಹಮಿರ್‍ಪುರದಲ್ಲಿ, ಮದುವೆಗೆ ಸರಿ ಸುಮಾರು 11 ಗಂಟೆ ಬಾಕಿ ಇತ್ತು ಅಷ್ಟೇ ಮದುವೆ ಆಗೋದಕ್ಕೆ. ಆದರೆ ವರನಿಗೆ ಕೊರೊನಾ ಪಾಸಿಟಿವ್ ಅನ್ನೋ ರಿಪೋರ್ಟ್ ಬಂದಿದೆ. ಕೋಡಲೇ ವರನ ಮನೆಯವರು ಮದುವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ.
ಸದ್ಯ ವರ ಕ್ವಾರಂಟೈನ್‍ನಲ್ಲಿದ್ದು, ವರನ ಜೊತೆಗೆ ಸಂಪರ್ಕದಲ್ಲಿದ್ದವರಿಗೆಲ್ಲಾ ಟೆಸ್ಟ್ ಮಾಡಿಸಲಾಗಿದೆ. ಇದೀಗ ವಧು ಹಾಗೂ ವರನ ಮನೆಯವರೆಲ್ಲಾ ಮದುವೆಯನ್ನು ಮುಂದೂಡಿದ್ದಾರೆ. ಕೆಲವೇ ಗಂಟೆಯಲ್ಲಿ ನಡೆಯಬೇಕಿದ್ದ ಮದುವೆ ಕೊರೊನಾದಿಂದ ಮುಂದೆ ಹೋಗಿದೆ.