– ಕಾಮದಾಟದಲ್ಲಿ ತೊಡಗಿದ್ದ ಪತ್ನಿಯನ್ನ ಹಿಡಿದಿದ್ದ ಪತಿ
– ಮನನೊಂದ ಆತ್ಮಹತ್ಯೆಗೆ ಶರಣಾದ ಪತಿರಾಯ
– ಪತಿ ಊಟದಲ್ಲಿ ನಶೆ ಪದಾರ್ಥ ಸೇರಿಸಿ ಅಕ್ರಮ ಸಂಬಂಧ
ಲಕ್ನೋ: ಇನಿಯನ ಜೊತೆ ಸೇರಿದ ಪತ್ನಿ ಗಂಡನ ಮರ್ಮಾಂಗಕ್ಕೆ ಆ್ಯಸಿಡ್ ಎರಚಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿಯ ಟಿಪಿ ನಗರದಲ್ಲಿ ನಡೆದಿದೆ. ಪತ್ನಿಯ ದಾಳಿಯಿಂದ ಮನನೊಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ವ್ಯಕ್ತಿ ಸದ್ಯ ಗುರುನಾನಕ ನಗರದಲ್ಲಿ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದನು. ಇತ್ತೀಚೆಗೆ ಸ್ಥಳೀಯ ವೈದ್ಯನೊಬ್ಬನ ಜೊತೆ ಕಾಮದಾಟದಲ್ಲಿ ತೊಡಗಿದ್ದ ವೇಳೆ ಪತ್ನಿಯನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ತದನಂತರ ಇನಿಯನ ಜೊತೆ ಸೇರಿದ ಪ್ಲಾನ್ ಮಾಡಿಕೊಂಡು ಪತಿಯ ಮರ್ಮಾಂಗಕ್ಕೆ ಆ್ಯಸಿಡ್ ಎರಚಿದ್ದನು. ಈ ಸಂಬಂಧ ಪತ್ನಿ ವಿರುದ್ಧ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಸೆಕ್ಸ್ ವೇಳೆ ಸ್ಫೋಟಗೊಂಡ ಕಾಂಡೋಮ್-ದೂರು ದಾಖಲಿಸಿದ ಮಹಿಳೆ
ಮಹಿಳೆ ಕುಟುಂಬಸ್ಥರ ಆಹಾರದಲ್ಲಿ ನಶೆ ಪದಾರ್ಥ ಸೇರಿಸುತ್ತಿದ್ದಳು. ಎಲ್ಲರೂ ನಿದ್ದೆಗೆ ಜಾರಿದ ಬೆನ್ನಲ್ಲೇ ವೈದ್ಯನ ಜೊತೆ ದೈಹಿಕ ಸಂಪರ್ಕ ಹೊಂದುತ್ತಿದ್ದಳು. ಆ್ಯಸಿಡ್ ದಾಳಿಯಿಂದಾಗಿ ವ್ಯಕ್ತಿಗೆ ಖಾಸಗಿ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದವು. ಇದರಿಂದ ಮಾನಸಿಕವಾಗಿ ನೊಂದ ಪತಿ ಕಾರ್ಖಾನೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಿದ್ದಾರೆ. ಇದನ್ನೂ ಓದಿ: ಕಾರು ನಿಲ್ಲಿಸಿ ವಿಳಾಸ ಕೇಳಿದ – ಮಹಿಳೆ ಹತ್ತಿರ ಬರ್ತಿದ್ದಂತೆ ಫ್ಯಾಂಟ್ ಬಿಚ್ಚಿದ
ಮರ್ಮಾಂಗಕ್ಕೆ ಆ್ಯಸಿಡ್ ಎರಚಿದ ಪ್ರಕರಣದಲ್ಲಿ ಮಹಿಳೆ ಮತ್ತು ಆಕೆಯ ಪ್ರಿಯಕರ ಜೈಲಿನಲ್ಲಿದ್ದಾರೆ. ಇತ್ತ ಪತಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇತ್ತ ದಂಪತಿಯ ಮೂರು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ಡಾಕ್ಟರ್ ಅಂಕಲ್ ಮನೆಗೆ ಬರುತ್ತಿದ್ದರು. ಪ್ರತಿಬಾರಿಯೂ ತಿಂಡಿ ತರುತ್ತಿದ್ದರು ಎಂದು ಮಹಿಳೆಯ ಮಕ್ಕಳು ಹೇಳುತ್ತಾರೆ. ಇದನ್ನೂ ಓದಿ: ಗೆಳತಿಗೆ ಹೇಳದೇ ಕಾಂಡೋಮ್‍ಗೆ ರಂಧ್ರ ಹಾಕಿ ಸೆಕ್ಸ್- 4 ವರ್ಷ ಜೈಲು ಶಿಕ್ಷೆ