ಬೆಂಗಳೂರು: ನಟಿ ರಾಗಿಣಿ ವಿರುದ್ಧ ಆರೋಪಗಳು ಕೇಳಿ ಬರುತ್ತಿರುವುದು ಇದೇ ಮೊದಲೇನು ಅಲ್ಲ. ಎರಡು ವರ್ಷದ ಹಿಂದೆ ಗಂಭೀರ ಆರೋಪ ಕೇಳಿ ಬಂದಿತ್ತು.
2016ರಲ್ಲಿ ರಾಗಿಣಿ ಬಳ್ಳಾರಿ ಟಸ್ಕರ್ಸ್ ತಂಡವನ್ನು ಖರೀದಿಸಿದ್ದರು. ಕೆಪಿಎಲ್ ಟೂರ್ನಿಯ ವೇಳೆ ಫಿಕ್ಸಿಂಗ್ ಆರೋಪ ಪ್ರಕರಣದಲ್ಲಿ ನಟಿ ರಾಗಿಣಿ ಹೆಸರು ಬಂದಿತ್ತು. ಆದರೆ ಸೂಕ್ತ ದಾಖಲೆ, ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣಕ್ಕೆ ಸು ಮ್ಮನಾಗಿದ್ದರು.
ಪ್ರಬಲವಾದ ಸಾಕ್ಷ್ಯಗಳು ಸಿಗದೇ ಇದ್ದರೂ ರಾಗಿಣಿಯ ಚಟುವಟಿಕೆ ಮೇಲೆ ಒಂದು ಕಣ್ಣು ಇಟ್ಟಿದ್ದರು. ರಾಗಿಣಿ ಮತ್ತು ರವಿಶಂಕರ್ ಚಲನವಲನದ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಸದ್ದಿಲ್ಲದೇ ಸಂಗ್ರಹಿಸುತ್ತಿದ್ದರು. ಇದನ್ನೂ ಓದಿ: 8 ಗಾಂಜಾ ತುಂಬಿದ್ದ ಸಿಗರೇಟ್ ಪತ್ತೆ – ಪೊಲೀಸರ ದಾಳಿ ವೇಳೆ ರಾಗಿಣಿ ಮನೆಯಲ್ಲಿ ಏನೇನು ಸಿಕ್ಕಿದೆ?
ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ, ಇಬ್ಬರು ನೈಜಿರಿಯನ್ ಪ್ರಜೆಗಳ ಬಂಧನ ನಂತರ ರವಿಶಂಕರ್, ರಾಗಿಣಿ ಸೇರಿ ಹದಿನೈದು ಜನ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಆಗ್ತಿದ್ದ ಮಾಹಿತಿ ಬಯಲಾಗಿತ್ತು ಈ ಸಂಬಂಧ ಮತ್ತಷ್ಟು ಸಾಕ್ಷ್ಯಗಳು ಸಿಕ್ಕ ನಂತರ ಕಾರ್ಯಚರಣೆ ತೀವ್ರಗೊಳಿಸಿದ ಸಿಸಿಬಿ, ಮೊನ್ನೆ ರವಿಶಂಕರ್ ಬಂಧಿಸಿತು ಎಂಬ ಮಾಹಿತಿ ಸಿಸಿಬಿ ಮೂಲಗಳಿಂದ ಸಿಕ್ಕಿದೆ.
ಎರಡು ವರ್ಷದ ಹಿಂದೆ ರಾಗಿಣಿ ವಿಚಾರವಾಗಿ ಸ್ಟಾರ್ ಹೋಟೆಲ್ ಒಂದರಲ್ಲಿ ರವಿಶಂಕರ್ ಮತ್ತು ಶಿವಪ್ರಕಾಶ್ ಎಂಬುವರ ಮಧ್ಯೆ ತೀವ್ರ ಗಲಾಟೆ ಆಗಿತ್ತು. ಈ ಬಗ್ಗೆಯೂ ಇಂದು ಸಿಸಿಬಿ ಅಧಿಕಾರಿಗಳು ರಾಗಿಣಿಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.