Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇದು ಪವರ್‌ಫುಲ್ ಫ್ಯಾಮಿಲಿ ಪ್ಯಾಕ್ ಮೋಷನ್ ಪೋಸ್ಟರ್!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಇದು ಪವರ್‌ಫುಲ್ ಫ್ಯಾಮಿಲಿ ಪ್ಯಾಕ್ ಮೋಷನ್ ಪೋಸ್ಟರ್!

Bengaluru City

ಇದು ಪವರ್‌ಫುಲ್ ಫ್ಯಾಮಿಲಿ ಪ್ಯಾಕ್ ಮೋಷನ್ ಪೋಸ್ಟರ್!

Public TV
Last updated: June 16, 2020 7:27 pm
Public TV
Share
2 Min Read
FAMILY PACK 4
SHARE

– ಅಪ್ಪು ಒಪ್ಪಿದ ಕಥೆಯಲ್ಲೇನೋ ಸೆಳೆತವಿದ್ದಂತಿದೆ

ಈ ವರ್ಷದ ಆರಂಭದಲ್ಲಿಯೇ ಒಂದಷ್ಟು ಟಾಕ್ ಕ್ರಿಯೇಟ್ ಮಾಡಿದ್ದ ಚಿತ್ರ ಫ್ಯಾಮಿಲಿ ಪ್ಯಾಕ್. ಈ ಚಿತ್ರ ತಯಾರಿಯ ಕಾಲದಲ್ಲಿಯೇ ಭರಪೂರ ಪ್ರಚಾರ ಪಡೆದುಕೊಂಡಿದ್ದಾರ ಹಿಂದೆ ಬಲವಾದ ಕಾರಣಗಳಿದ್ದಾವೆ. ಇದು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಪಿಆರ್‍ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣಗೊಳ್ಳಲಿರೋ ಚಿತ್ರವೆಂಬುದು ಪ್ರಧಾನ ಕಾರಣವಾಗಿತ್ತು. ಅದಲ್ಲದೇ ಈ ಹಿಂದೆ ಸಂಕಷ್ಟಕರ ಗಣಪತಿ ಎಂಬ ಚೆಂದದ ಚಿತ್ರ ನಿರ್ದೇಶನ ಮಾಡಿದ್ದ ಅರ್ಜುನ್ ಕುಮಾರ್ ಎಸ್ ಫ್ಯಾಮಿಲಿ ಪ್ಯಾಕಿನ ಸಾರಥ್ಯ ವಹಿಸಿಕೊಂಡಿದ್ದಾರೆ. ಅದೂ ಕೂಡ ಫ್ಯಾಮಿಲಿ ಪ್ಯಾಕ್‍ನತ್ತ ಪ್ರೇಕ್ಷಕರು ಆಕರ್ಷಿತರಾಗುವಂತೆ ಮಾಡಿತ್ತು. ಇದೀಗ ಕೊರೊನಾ ಕಾಲದ ಸುದೀರ್ಘ ಶುಷ್ಕ ವಾತಾರವಣದ ಅಂಚಿನಲ್ಲಿ ಫ್ಯಾಮಿಲಿ ಪ್ಯಾಕ್ ಚಿತ್ರದ ಮೋಷನ್ ಪೋಸ್ಟರ್ ಲಾಂಚ್ ಆಗಿದೆ!

FAMILY PACK 2

ಪಿಆರ್‍ಕೆ ಸಂಸ್ಥೆಯ ಕಡೆಯಿಂದ ನಿರ್ಮಾಣಗೊಳ್ಳುತ್ತಿರೋ ಸಿನಿಮಾ ಅಂದ ಮೇಲೆ ಅದರ ಬಗ್ಗೆ ಪ್ರೇಕ್ಷಕರಲ್ಲೊಂದು ಮೋಹ ಮೂಡಿಕೊಳ್ಳುತ್ತೆ. ಹಾಗೊಂದು ಟ್ರೆಂಡ್ ಮೂಡಿಸುವಂತಹ ಅಪರೂಪದ ಕಥೆಗಳನ್ನೇ ಪುನೀತ್ ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ಆದ್ದರಿಂದಲೇ ಅವೆಲ್ಲವೂ ಹಿಟ್ ಆಗಿವೆ. ಇದೀಗ ಮೋಷನ್ ಪೋಸ್ಟರ್ ಮೂಲಕ ಸುದ್ದಿ ಮಾಡುತ್ತಿರೋ ಫ್ಯಾಮಿಲಿ ಪ್ಯಾಕ್ ಪಿಆರ್‍ಕೆ ನಿರ್ಮಾಣದ ಐದನೇ ಕಾಣಿಕೆ. ಇದರಲ್ಲಿ ಲಿಖಿತ್ ಮತ್ತು ಅಮೃತಾ ಅಯ್ಯಂಗಾರ್ ನಾಯಕ ನಾಯಕಿಯಾಗಿ ನಟಿಸಿರೋ ಈ ಚಿತ್ರದಲ್ಲಿ ರಂಗಾಯಣ ರಘು ಕೂಡ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

FAMILY PACK 5

ಈ ಮೂರೂ ಪಾತ್ರಗಳ ಝಲಕ್ಕುಗಳು ಈ ಮೋಷನ್ ಪೋಸ್ಟರ್‍ನಲ್ಲಿ ಕಾಣಿಸಿಕೊಂಡಿವೆ. ಇದರ ಜೊತೆ ಜೊತೆಗೇ ಒಂದಿಡೀ ಕಥೆಯ ಬಗ್ಗೆ ನಾನಾ ಕಲ್ಪನೆಗಳು ಸುರುಳಿ ಬಿಚ್ಚಿಕೊಳ್ಳುವಂತೆ ಮಾಡುವಷ್ಟು ಶಕ್ತವಾಗಿಯೂ ಅದು ಮೂಡಿ ಬಂದಿದೆ. ಇದರೊಂದಿಗೆ ನಿರ್ದೇಶಕ ಅರ್ಜುನ್ ಕುಮಾರ್ ಪರಿಣಾಮಕಾರಿಯಾಗಿಯೇ ಮೊದಲ ಛಾಪು ಮೂಡಿಸಿದ್ದಾರೆ. ಸಂಕಷ್ಟಕರ ಗಣಪತಿ ಚಿತ್ರದಲ್ಲಿ ಅರ್ಜುನ್ ಕುಮಾರ್ ಮತ್ತು ಲಿಖಿತ್ ಕಾಂಬಿನೇಷನ್ನು ಯಶ ಕಂಡಿತ್ತು. ಈ ಕಾರಣದಿಂದಲೇ ಅವರ ಎರಡನೇ ಸಮಾಗಮವಾಗಿರೋ ಫ್ಯಾಮಿಲಿ ಪ್ಯಾಕ್‍ನತ್ತ ಎಲ್ಲರ ಚಿತ್ತ ನೆಡುವಂತಾಗಿದೆ. ಆ ಚಿತ್ರದಲ್ಲಿ ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಎಂಬ ಕಾಯಿಲೆಯ ಮೂಲಕ ಮಜವಾಗಿ ಕಥೆ ಹೇಳಲಾಗಿತ್ತು. ಹಾಗಾದರೆ ಫ್ಯಾಮಿಲಿ ಪ್ಯಾಕ್‍ನೊಳಗೆ ಎಂಥಾ ಕಥೆ ಇರಲಿದೆ ಎಂಬ ಕುತೂಹಲ ಮೂಡಿಕೊಳ್ಳೋದು ಸಹಜ. ಈ ನಿಟ್ಟಿನಲ್ಲಿ ಕೆದಕಿದರೆ ನಿರ್ದೇಶಕರ ಕಡೆಯಿಂದ ರಸವತ್ತಾದ ಒಂದಷ್ಟು ಅಂಶಗಳು ಹೊರಬೀಳುತ್ತವೆ.

FAMILY PACK 1

ಫ್ಯಾಮಿಲಿ ಪ್ಯಾಕ್ ಕಥೆ ಪಕ್ಕಾ ಕಾಮಿಡಿ ಟ್ರೀಟ್‍ಮೆಂಟ್ ಪಡೆದಿರುವಂತದ್ದು. ಮನೋರಂಜನೆಯ ಹೂರ ಪದರ ಮತ್ತು ಗಹನವಾದ ವಿಚಾರದ ಹೂರಣದೊಂದಿಗೆ ಈ ಕಥೆಯನ್ನು ಸಿದ್ಧಪಡಿಸಲಾಗಿದೆಯಂತೆ. ಅಪ್ಪ-ಅಮ್ಮ ಎಲ್ಲ ಇದ್ದರೂ ಒಂದು ಚೆಂದದ ಕುಟುಂಬಕ್ಕಾಗಿ ಹಂಬಲಿಸೋ ಹುಡುಗನ ಸುತ್ತ ಈ ಕಥೆ ಬಿಚ್ಚಿಕೊಳ್ಳಲಿದೆಯಂತೆ. ಅದನ್ನು ಒಂದಿನಿತೂ ಮುಕ್ಕಾಗದ ಮನರಂಜನೆಯೊಂದಿಗೆ ಕಟ್ಟಿ ಕೊಟ್ಟಿರೋ ರೀತಿಗೆ ಪುನೀತ್ ರಾಜ್‍ಕುಮಾರ್ ಫಿದಾ ಆಗಿದ್ದರಂತೆ. ಈ ಕಾರಣದಿಂದಲೇ ಅವರು ಇದನ್ನು ತಮ್ಮ ಸಂಸ್ಥೆಯ ಮೂಲಕ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

FAMILY PACK 3

ಕೊರೊನಾ ಎಂಬೊಂದು ಕಂಟಕ ಎದುರಾಗದಿದ್ದರೆ ಈ ಹೊತ್ತಿಗೆಲ್ಲ ಫ್ಯಾಮಿಲಿ ಪ್ಯಾಕಿನ ಬಹುತೇಕ ಚಿತ್ರೀಕರಣವಾಗಿರುತ್ತಿತ್ತು. ಆದರೆ ಆರಂಭಿಕ ತಯಾರಿಯ ಹಂತದಲ್ಲಿಯೇ ಕೊರೊನಾ ಬ್ರೇಕ್ ಹಾಕಿತ್ತು. ಇದೀಗ ಮತ್ತೆ ಫ್ಯಾಮಿಲಿ ಪ್ಯಾಕ್ ಚಿತ್ರತಂಡ ಆಕ್ಟಿವ್ ಆಗಿದೆ. ಲಾಕ್‍ಡೌನ್ ಕಾಲದಲ್ಲಿ ಸಾಧ್ಯವಾದಷ್ಟು ತಯಾರಿಯನ್ನೂ ಮಾಡಿಕೊಳ್ಳಲಾಗಿದೆ. ಈಗಾಗಲೇ ತಾರಾಗಣ ಮತ್ತು ಲೊಕೇಷನ್ನುಗಳೆಲ್ಲವೂ ಫೈನಲ್ ಆಗಿವೆ. ಇನ್ನೇನು ಸರ್ಕಾರದ ಕಡೆಯಿಂದ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಗೋದಕ್ಕಾಗಿ ಚಿತ್ರತಂಡ ಎದುರು ನೋಡುತ್ತಿದೆ.

TAGGED:power starPublic TVPuneeth Rajkumarsandalwoodಪಬ್ಲಿಕ್ ಟಿವಿಪವರ್ ಸ್ಟಾರ್ಪುನೀತ್ ರಾಜ್ ಕುಮಾರ್ಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

Commercial LPG Cylinder 19kg
Latest

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 993 ರೂ. ಏರಿಕೆ

Public TV
By Public TV
3 minutes ago
TUMBAIL 00000 00000
Latest

ಇಂದಿನಿಂದ ದೇಶದಲ್ಲಿ ಹೊಸ ಆನ್‌ಲೈನ್ ಗೇಮಿಂಗ್ ಕಾಯ್ದೆ ಜಾರಿ – ಏನಿದು ಹೊಸ ರೂಲ್ಸ್‌?

Public TV
By Public TV
11 minutes ago
RCB vs GT
Cricket

ಕೈಕೊಟ್ಟ ಬ್ಯಾಟರ್ಸ್‌, ಆರ್‌ಸಿಬಿಗೆ ಹೀನಾಯ ಸೋಲು – ಗುಜರಾತ್‌ಗೆ 4 ವಿಕೆಟ್‌ಗಳ ಅಮೋಘ ಜಯ

Public TV
By Public TV
8 hours ago
Heavy rains in Bengaluru Bowring Hospital wall collapses 6 dead
Bengaluru City

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ದುರಂತ – ಸಿಎಂ ಸೂಚನೆ ಬೆನ್ನಲ್ಲೇ ಇಬ್ಬರು ಇಂಜಿನಿಯರ್‌ ಅಮಾನತು

Public TV
By Public TV
8 hours ago
01 25
Big Bulletin

ಬಿಗ್‌ ಬುಲೆಟಿನ್‌ 30 April 2026 ಭಾಗ-1

Public TV
By Public TV
9 hours ago
02 23
Big Bulletin

ಬಿಗ್‌ ಬುಲೆಟಿನ್‌ 30 April 2026 ಭಾಗ-2

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?