-ಸದ್ದಿಲ್ಲದೇ ಬಲಿಯಾಗ್ತಿದ್ದಾರೆ ವರ್ಷಕ್ಕೆ ಹತ್ತು ಸಾವಿರ ಮಂದಿ!
ಬೆಂಗಳೂರು: ದೇಶದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಈವರೆಗೂ 13,254 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಈ ಕೊರೊನಾಗಿಂತ ಮತ್ತೊಂದು ಆಘಾತದ ಸುದ್ದಿ ಇದಾಗಿದೆ. ಇದು ದೇಶದೊಳಗೆ ಯಾರಿಗೂ ಗೊತ್ತಾಗದಾಗೇ ಗುಪ್ತ ಸಾಂಕ್ರಾಮಿಕ ರೋಗವಾಗಿ ಹರಡುತ್ತಿದೆ.
ದೇಶದಲ್ಲಿ ಮಾನಸಿಕ ಖಿನ್ನತೆ ಒಳಗಾಗಿ ಸಾಯುವವರ ಸಂಖ್ಯೆ ದಿನದಿಂದ ಏರಿಕೆಯಾಗುತ್ತಿದ್ದೆಯಂತೆ. ಪ್ರತಿ ವರ್ಷಕ್ಕೆ ಕನಿಷ್ಠ ಹತ್ತು ಸಾವಿರ ಮಂದಿ ಸುಸೈಡ್ ಮಾಡಿಕೊಂಡು ಸಾವನ್ನಪ್ಪಿದ್ದಾರಂತೆ. ಇತದೊಂದು ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ಮಾಹಿತಿ ವಿಭಾಗ ನೀಡಿದೆ.
Advertisement
Advertisement
ಮಾನಸಿಕ ಖಿನ್ನತೆಯಿಂದ ದೇಶದಲ್ಲಿ ಯುವ ಸಮುದಾಯ ಸಾವನ್ನಪ್ಪುತ್ತಿದ್ದಾರೆ. 2016 – 9,478, 2017 – 9905, 2018 – 10,159 ಮಂದಿ ಖಿನ್ನತೆಯಿಂರ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಖಿನ್ನತೆಯಿಂದ ಗಂಟೆಗೊಂದು ಸಾವು ಆಗುತ್ತಿದ್ದು ಪ್ರತಿದಿನ ಹೆಚ್ಚು ಕಮ್ಮಿ 28 ಮಂದಿ ಬಲಿಯಾಗುತ್ತಿದ್ದಾರಂತೆ ಎಂದು ರಾಷ್ಟ್ರೀಯ ಅಪರಾಧ ಮಾಹಿತಿ ವಿಭಾಗ ತಿಳಿಸಿದೆ.
Advertisement
Advertisement
2019 ರ ಅಂಕಿ ಅಂಶಗಳು ಸದ್ಯ ಲಭ್ಯವಾಗಿಲ್ಲ. ಆದರೆ ಲ್ಯಾನ್ಸೆಟ್ ಜರ್ನಲ್‍ನಲ್ಲಿ ಪ್ರಕಟವಾದ ಲೇಖನದ ಪ್ರಕಾರ ಪ್ರತಿ ಏಳು ಮಂದಿ ಭಾರತೀಯರಲ್ಲೊ ಒಬ್ಬರು ಖಿನ್ನತೆಗೆ ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಿದ್ದಾರಂತೆ. 1990 ರ ಬಳಿಕ ಈ ಪ್ರಮಾಣ ಅಧಿಕವಾಗಿದೆಯಂತೆ. ಇದರಲ್ಲಿ ಸರಿಯಾದ ಚಿಕಿತ್ಸೆ ಮತ್ತು ಸಲಹೆ ಸಿಗದ ಕಾರಣ ಹಲವರು ಸಾವನ್ನಪ್ಪುತ್ತಿದ್ದಾರೆ. ಇದಿಷ್ಟೇ ಅಲ್ಲದೇ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ ಪ್ರಕಾರ, ಹೀಗೆ ಖಿನ್ನತೆ ಒಳಗಾಗುವರ ಪ್ರಮಾಣ 2018 ರಲ್ಲಿ 83% ರಷ್ಟಿದ್ರೆ ಸದ್ಯ 90% ಕ್ಕೇರಿದೆ. ಸುಶಾಂತ್ ಸಿಂಗ್ ರಜಪೂತ್ ಮಾತ್ರವಲ್ಲದೇ ದೀಪಿಕಾ ಪಡುಕೋಣೆ ಸೇರಿದಂತೆ ಹಲವು ನಟ ನಟಿಯರು ಖುದ್ದು ಖನ್ನತೆಗೆ ಒಳಗಾಗಿದ್ದು ಹೇಳಿಕೊಂಡಿದ್ದರು.