ಇಂದು ವಿಚಾರಣೆಗೆ ಹಾಜರಾಗ್ತಾರಾ ರೇಪ್ ಆರೋಪಿ ರಮೇಶ್ ಜಾರಕಿಹೊಳಿ..?

Public TV
1 Min Read
ramesh 6

ಬೆಂಗಳೂರು: ಅತ್ಯಾಚಾರ ಕೇಸ್ ಆರೋಪಿ ರಮೇಶ್ ಜಾರಕಿಹೊಳಿಗೆ ಇಂದು ನಿರ್ಣಾಯಕ ದಿನ. ಅತ್ಯಾಚಾರ ಕೇಸ್‍ನಲ್ಲಿ ಇಂದು ಬಂಧನವೋ ಅಥವಾ ವಿಚಾರಣೆ ನಡೆಸಿ ಪೊಲೀಸರು ಬಿಟ್ಟು ಕಳಿಸ್ತಾರಾ ಎಂಬ ಕುತೂಹಲ ಹಾಗೇ ಇದೆ.

CD LADY 12121

ಇಂದು ಬೆಳಗ್ಗೆ ಪೊಲೀಸರ ಎದುರು ಆರೋಪಿ ಜಾರಕಿಹೊಳಿ ವಿಚಾರಣೆಗೆ ಹಾಜರಾಗಬೇಕಿದೆ. ಯುವತಿಯೇ ಖುದ್ದು ಪ್ರತ್ಯಕ್ಷ ಆದ ದಿನದಿಂದ ರಮೇಶ್ ಜಾರಕಿಹೊಳಿ ಇದುವರೆಗೂ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಜಾರಕಿಹೊಳಿಯೇ ನೀಡಿದ್ದ ಬ್ಲ್ಯಾಕ್‍ಮೇಲ್ ಕೇಸ್‍ನಲ್ಲಿ ಏಪ್ರಿಲ್ 2ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಜ್ವರದ ಕಾರಣದಿಂದ ವಿಚಾರಣೆಗೆ ಬರಲು ಸಾಧ್ಯವಾಗಿಲ್ಲ ಎಂದು ಜಾರಕಿಹೊಳಿ ಪರ ವಕೀಲರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇವತ್ತು ಬರುವಂತೆ ಪೊಲೀಸರು ಹೇಳಿದ್ದರು.

ramesh jarakiholi

ಈಗಾಗಲೇ ಯುವತಿ ನ್ಯಾಯಾಧೀಶರ ಎದುರು, ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ. ಆಕೆಯ ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು ಕೂಡಾ ಮುಗಿದಿದೆ. ಆದರೆ ಇದುವರೆಗೆ ಅತ್ಯಾಚಾರ ಕೇಸ್‍ನಲ್ಲಿ ಜಾರಕಿಹೊಳಿ ವಿಚಾರಣೆಯೇ ನಡೆದಿಲ್ಲ.

CD LADY

ಇತ್ತ ಪೊಲೀಸರ ತನಿಖೆ ಬಗ್ಗೆ ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಹೀಗಾಗಿ ಬಂಧನ ಭೀತಿಯಲ್ಲಿರುವ ಜಾರಕಿಹೊಳಿ ವಿಚಾರಣೆಗೆ ಬರ್ತಾರಾ? ವಿಚಾರಣೆಗೆ ಬಂದ್ರೆ ಪೊಲೀಸರು ಅರೆಸ್ಟ್ ಮಾಡ್ತಾರಾ? ಅಥವಾ ಆರೋಪಿಯ ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು ಕೂಡಾ ಅನಿವಾರ್ಯ ಆಗಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿ ಬಿಟ್ಟು ಕಳಿಸ್ತಾರಾ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

Share This Article
Leave a Comment

Leave a Reply

Your email address will not be published. Required fields are marked *