ಮೈಸೂರು: ಇಂದು ಮೈಸೂರು ಮಹಾ ನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ನಡೆಯಲಿದ್ದು, ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಕಾರಣ ಚುನಾವಣೆ ಕೂತುಹಲ ಮೂಡಿಸಿದೆ. ಪಾಲಿಕೆ ಸದಸ್ಯರು ಮತ್ತು ಶಾಸಕರು, ಸಂಸದರ ಸೇರಿ ಒಟ್ಟು 73 ಮತಗಳ ಪಾಲಿಕೆಯಲ್ಲಿ ಗದ್ದುಗೆ ಹಿಡಿಯಲು 38 ಮತಗಳು ಬೇಕು. ಆದರೆ ಪಾಲಿಕೆಯಲ್ಲಿ ಜೆಡಿಎಸ್ 22 ಮತ, ಕಾಂಗ್ರೆಸ್ 20 ಮತ ಹಾಗೂ ಬಿಜೆಪಿ 25 ಮತ, ಬಿಎಸ್‍ಪಿ 1 ಮತ ಹಾಗೂ ಪಕ್ಷೇತರ 5 ಮತ ಹೊಂದಿವೆ. ಹೀಗಾಗಿ ಮೈತ್ರಿ ಅನಿವಾರ್ಯ.
Advertisement
ಕಳೆದ ಎರಡು ವರ್ಷದಿಂದ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಇತ್ತು. ಆದರೆ ಈ ಬಾರಿ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರಿಸಲು ಜೆಡಿಎಸ್ ಒಪ್ಪುತ್ತಿಲ್ಲ. ಹೀಗಾಗಿ ಇವತ್ತಿನ ಚುನಾವಣೆ ಕೂತುಹಲ ಮೂಡಿಸಿದೆ. ಖುದ್ದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೈಸೂರಿಗೆ ಆಗಮಿಸಿ ಚುನಾವಣೆ ನಡೆಸುತ್ತಿದ್ದಾರೆ. ಮೈಸೂರಿನ ಹೊರ ವಲಯದ ರೆಸಾರ್ಟ್ ನಲ್ಲಿ ತಮ್ಮ ಪಕ್ಷದ ಸದಸ್ಯರ ಜೊತೆ ಸಭೆಯ ಮೇಲೆ ಸಭೆ ನಡೆಸಿದ್ದಾರೆ. ಈ ನಡುವೆ ಕಾಂಗ್ರೆಸ್ ಪರವಾಗಿ ಮಾಜಿ ಸಚಿವ ತನ್ವೀರ್ ಸೇಠ್ ದಳಪತಿಗಳ ಭೇಟಿ ಮಾಡಿ ಮೈತ್ರಿ ಮುಂದುವರಿಸಿ ಎಂದು ಕೇಳಿದ್ದಾರೆ.
Advertisement
Advertisement
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಮೇಯರ್ ಮಾಡುವಂತೆ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಜೆಡಿಎಸ್ ಮಾತ್ರ ತನ್ನ ನಿಲುವು ಸ್ಪಷ್ಟಪಡಿಸಿಲ್ಲ.
Advertisement
ಒಟ್ಟು ಪಾಲಿಕೆಯ ಮತಗಳು-73
ಪಾಲಿಕೆ ಗದ್ದುಗೆ ಹಿಡಿಯಲು ಬೇಕಾಗುವ ಮತಗಳು-38
ಜೆಡಿಎಸ್-22 ಮತ
ಕಾಂಗ್ರೆಸ್-20 ಮತ
ಬಿಜೆಪಿ- 25 ಮತ
ಬಿಎಸ್‍ಪಿ -1 ಮತ
ಪಕ್ಷೇತರ-5 ಮತ