ಬೆಂಗಳೂರು: ಇಂದು ಐತಿಹಾಸಿಕ ಲಸಿಕಾ ಆಂದೋಲನ ದಿನವಾಗಿದೆ. ದೇಶದಲ್ಲಿ ಒಂದೇ ಕಾಲಕ್ಕೆ ಲಸಿಕೆ ಎಲ್ಲೆಡೆ ಬಿಡುಗಡೆ ಆಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
Advertisement
ಏಕಕಾಲಕ್ಕೆ 243 ಕಡೆ ಲಸಿಕೆ ನೀಡುವ ಕೆಲಸ ಆರಂಭಗೊಳ್ಳಲಿದೆ. 24,300 ಜನರಿಗೆ ಒಂದೇ ಜಾಗದಲ್ಲಿ ಲಸಿಕೆ ಕೊಡಲಾಗುತ್ತದೆ. ಪ್ರತಿಯೊಬ್ಬರು ಸಂಪೂರ್ಣ ವಿಶ್ವಾಸದೊಂದಿಗೆ ತೆಗೆದುಕೊಳ್ಳಿ. ಕೊರೊನಾ ಲಸಿಕೆಯನ್ನು ತೆಗೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ. ಕೊರೊನಾ ವೈರಸ್ ನಿಂದ ಶಾಶ್ವತ ಪರಿಹಾರ ಸಿಗುತ್ತದೆ. ನಮ್ಮ ದೇಶದ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದಿರುವುದು ನಮ್ಮ ದೇಶದ ಹೆಮ್ಮೆಯಾಗಿದೆ ಎಂದು ತಿಳಿಸಿದರು.
Advertisement
Advertisement
ಲಸಿಕಾ ವಿತರಣೆ ಕಾರ್ಯಕ್ರಮ ಉದ್ಘಾಟನೆ ಆದ ನಂತರ ಜಯನಗರ ಸರ್ಕಾರಿ ಆಸ್ಪತ್ರೆ, ಸೆಂಟ್ ಜಾನ್ಸ್ ಹಾಗೂ ಕೆ.ಆರ್.ಪುರಂ ಸರ್ಕಾರಿ ಆಸ್ಪತ್ರೆಗೆ ಭೇಟಿ ಸ್ವತಃ ನಾನೇ ಪರಿಶೀಲನೆ ನಡೆಸುತ್ತೇನೆ. ನಮ್ಮ ವಿಜ್ಞಾನಿಗಳು ಇಷ್ಟು ಬೇಗ ವ್ಯಾಕ್ಸಿನ್ ಕಂಡು ಹಿಡಿಯುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಕೆಲವು ವೈರಸ್‍ಗಳಿಗೆ ವ್ಯಾಕ್ಸಿನ್ ಕಂಡು ಹಿಡಿಯಲು 9 ವರ್ಷ 25 ವರ್ಷ ಎಲ್ಲಾ ತಗೆದುಕೊಂಡರು ಸಾಧ್ಯವಾಗುತ್ತಿರಲಿಲ್ಲ. ಆದರೆ ಕೊರೊನಾಗೆ ಒಂದು ವರ್ಷದೊಳಗೆ ವ್ಯಾಕ್ಸಿನ್ ಕಂಡು ಹಿಡಿದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.
Advertisement
ಪ್ರಧಾನಿ ಮೋದಿ ದೇಶದಾದ್ಯಂತ ಒಂದೇ ಕಾಲಕ್ಕೆ ಇಂದು ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ಕೂಡಾ ಸಿಎಂ ಚಾಲನೆ ನೀಡುತ್ತಿದ್ದಾರೆ. ಕೊರೊನ ಯೋಧರು ಸಂಪೂರ್ಣ ವಿಶ್ವಾಸ ದೊಂದಿಗೆ ಲಸಿಕೆಯನ್ನು ತೆಗೆದುಕೊಳ್ಳ ಬಹುದಾಗಿದೆ ಎಂದರು.