– ಸಿಟಿ ರವಿ ನಾಲಿಗೆಯನ್ನ ಇಟ್ಟಿಗೆಯಿಂದ ಉಜ್ಜಿ ಪಾವನ ಮಾಡ್ಬೇಕು
ತುಮಕೂರು: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವುದು ಸಣ್ಣತನದ ಪರಮಾವಧಿ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕಿಡಿಕಾರಿದ್ದಾರೆ.
Advertisement
ಮಧುಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು, ರಾಜ್ಯ ಸರ್ಕಾರದ ವಿರುದ್ಧ ಗರಂ ಆದರು. ಕ್ಯಾಂಟೀನ್ ಹೆಸರು ಬದಲಾಯಿಸೋದನ್ನ ಬಿಟ್ಟು ಅದೇ ಹೆಸರಲ್ಲಿ ಬೇರೆ ಯಾವುದಾದರೂ ಬಡವರ ಪರ ಕಾರ್ಯಕ್ರಮ ರೂಪಿಸಲಿ. ಖೇಲ್ ರತ್ನಗೆ ರಾಜೀವ್ ಗಾಂಧಿ ಹೆಸರು ತೆಗೆಯುವಂತಹದ್ದು ಅಪಚಾರ ಮಾಡಿದ ಹಾಗೆ. ಇಂದಿರಾ ಗಾಂಧಿಯವರ ಹೆಸರು ಇಡೀ ಪ್ರಪಂಚವೇ ನೆನಪಿಸಿಕೊಳ್ಳುವಂತಹದ್ದು ಎಂದು ಬಣ್ಣಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್, ಬೇಕಾದ್ರೆ ನೆಹರು ಹುಕ್ಕಾ ಬಾರ್ ತೆರೆಯಲಿ : ಸಿಟಿ ರವಿ
Advertisement
Advertisement
ಇಂಡಿಯಾ ಎಂದರೆ ಇಟ್ ಇಸ್ ಇಂದಿರಾ ಎಂದರ್ಥ. ಸಿಟಿ ರವಿ ಯಾರ್ರೀ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇವರು ಹುಟ್ಟೇ ಇರಲಿಲ್ಲ ಈ ಗಿರಾಕಿ. ಸ್ವಾತಂತ್ರ್ಯ ತರಲಿಕ್ಕೆ ಎಷ್ಟು ಕಷ್ಟ ಅನುಭವಿಸಿದ್ದಾರೆ ಗೊತ್ತಾ ಇವರಿಗೆ. ಆರ್ ಎಸ್ ಎಸ್ ಟ್ರೇನಿಂಗ್ ಭಾಷಣ ಮಾಡೋದು ಹೇಳಿಕೊಟ್ಟಿದ್ದಾರೆ, ಭಾಷಣ ಮಾಡ್ಕೊಂಡು ತಿರುಗ್ತಾರೆ. ಅವರ ನಾಲಿಗೆಗೆ ಸ್ವಲ್ಪ ಇಟ್ಟಿಗೆ ತಗೊಂಡು ಉಜ್ಜಿ ಪಾವನ ಮಾಡಬೇಕು ಎಂದು ವಾಗ್ದಾಳಿ ನಡೆಸಿದರು.
Advertisement
ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ:
ಕಾಂಗ್ರೆಸ್ಸಿನವರು ಇಂದಿರಾ ಕ್ಯಾಂಟೀನ್ ತೆರೆದಿರೋದು ಅವರ ಎಟಿಎಂಗಳನ್ನು ತುಂಬಿಸಿಕೊಳ್ಳಲೇ ಹೊರತು, ಇಂದಿರಾ ಗಾಂಧಿ ಮೇಲಿನ ಪ್ರೀತಿಯಿಂದಲ್ಲ. ಕಾಂಗ್ರೆಸ್‍ನವರು ಬೇಕಾದ್ರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ. ಬೇಕಾದ್ರೆ ಬಾರ್ ತೆರೆಯಲಿ, ನೆಹರು ಹುಕ್ಕಾ ಬಾರ್ ಎಂಬ ಹೆಸರಲ್ಲಿ ತೆರೆಯಲಿ. ಈಗ ಇಂದಿರಾ ಕ್ಯಾಂಟೀನ್ ಅನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮಾಡಬೇಕು ಅಂತಾ ಪ್ರಸ್ತಾಪಿಸಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ.