ಮಂಗಳೂರು: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಮಂಗಳೂರಿನ ವಿನಂತಿ ಹರಿಕಾಂತ ದಾಖಲೆ ಬರೆಯುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಸಾಧನೆಗೆ ವಯಸ್ಸಿನ ಹಂಗಿಲ್ಲ ಎನ್ನುವುದಕ್ಕೆ ಅದೆಷ್ಟೋ ನಿದರ್ಶನಗಳನ್ನು ನಾವು ಗಮನಿಸುತ್ತೇವೆ. ಸಣ್ಣ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೆ ಅನೇಕರು ಎಲ್ಲರ ಮೂಗಿನ ಮೇಲೆ ಬೆರಳಿಡುವಂತೆ ಸಾಧನೆ ಮಾಡಿದ್ದಾರೆ. ಈ ಸಾಲಿಗೆ ಮಂಗಳೂರಿನ 5ರ ಪೋರಿಯೊಬ್ಬಳು ಸೇರ್ಪಡೆಗೊಂಡಿದ್ದಾಳೆ. ಮಂಗಳೂರಿನ 5ರ ಬಾಲಕಿ ವಿನಂತಿ ಹರಿಕಾಂತ ಯೋಗದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.
Advertisement
Advertisement
ವಿನಂತಿ ಹರಿಕಾಂತ ತನ್ನ 5ನೇ ವಯಸ್ಸಿನಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾಳೆ. ಈಕೆ ಸಣ್ಣಂದಿನಿಂದಲೇ ಯೋಗಾಸನದಲ್ಲಿ ಆಸಕ್ತಿ ಹೊಂದಿದ್ದು, 100ಕ್ಕಿಂತ ಹೆಚ್ಚಿನ ಯೋಗಾಸನ ಭಂಗಿಗಳನ್ನು ಸರಾಗವಾಗಿ ಮಾಡುತ್ತಾಳೆ. ಇದೀಗ `ಉತ್ರಾಸನ ಭಂಗಿ’ಯಲ್ಲಿ ದೀರ್ಘ ಕಾಲದವರೆಗೆ ಅಂದರೆ 5 ನಿಮಿಷ, 15 ಸೆಕೆಂಡ್ ಕಾಲ ತಟಸ್ಥವಾಗಿ ಉಳಿದು ಅದ್ಭುತ ಸಾಧನೆಯನ್ನು ಮಾಡಿದ್ದಾಳೆ. ಈಕೆಯ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ ಗರಿಮೆಯ ಕಿರೀಟ ಮುಡಿಗೇರಿದೆ. ಇದನ್ನೂ ಓದಿ: ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿದ ಮಳೆ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ: ಹೆಬ್ಬಾರ್
Advertisement
Advertisement
ಈಕೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ 20 ವರ್ಷಗಳಿಂದ ಮಂಗಳೂರಿನ ಕೊಣಾಜೆ ಸಮೀಪದ ಅಸೈಗೋಳಿಯಲ್ಲಿರುವ ಕೆಎಸ್ಆರ್ಪಿ 7ನೇ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈಶ್ವರ ಹರಿಕಾಂತ ಹಾಗೂ ಆರತಿ ಹರಿಕಾಂತ ದಂಪತಿಯ ಪುತ್ರಿಯಾಗಿದ್ದಾಳೆ. ಈಕೆ ಯೋಗಾಸನದಲ್ಲಿ ಮಾತ್ರ ಅಲ್ಲದೆ ನೃತ್ಯ, ಸಂಗೀತ, ಚಿತ್ರ ಕಲೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆಯಾಗಿದ್ದಾಳೆ. ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆದು ಸಾಧನೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.