ಕೊಪ್ಪಳ: ವೃತ್ತಿಯಲ್ಲಿ ಇಂಜಿನೀಯರ ಆಗಿದ್ದರೂ ಕೂಡ ಛಾಯಾಚಿತ್ರದ ಹವ್ಯಾಸ ಬೆಳೆಸಿಕೊಂಡಿರುವ ಶ್ರೀನಿವಾಸ್ ಸದ್ಯ ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಹೆಸರು ವಾಸಿಯಾಗಿದ್ದಾರೆ.
ಒಂದು ಫೋಟೊ ಸಾವಿರ ಪದಗಳಿಗೆ ಸಮ ಎನ್ನುತ್ತಾರೆ. ಫೋಟೊದಲ್ಲಿರುವ ಭಾವ, ಫೋಟೊ ಹೇಳುವ ನೂರಾರು ಕಥೆಗಳಿಂದಾಗಿ ಫೋಟೋಗ್ರಾಫರ್ ಗಳಿಗೆ ತಮ್ಮದೇ ಸ್ಥಾನ ಹೊಂದಿದ್ದಾರೆ. ಹಲವರು ಫೋಟೋಗ್ರಾಫಿಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ, ಬಹಳಷ್ಟು ಫೋಟೋಗ್ರಾಫಿಯನ್ನು ಪ್ಯಾಶನ್ ನ್ನಾಗಿ ಇಟ್ಟುಕೊಂಡಿದ್ದಾರೆ. ಹೀಗೆ ಹವ್ಯಾಸಕ್ಕಾಗಿ ಫೋಟೋಗ್ರಾಫಿ ಮಾಡುವ ಇಂಜನೀಯರ್ ಕೆಲವೇ ದಿನಗಳಲ್ಲಿ ನೂರಾರು ಮೆಡಲ್ ಪಡೆದಿದ್ದಾರೆ, ಅದರಲ್ಲಿ ತಿಂಗಳ ಹಿಂದೆ ಅಂತರಾಷ್ಟ್ರೀಯ ಚಿನ್ನದ ಪದಕ ಪಡೆದಿದ್ದಾರೆ.
Advertisement
Advertisement
ಮೂಲತಃ ಕೊಪ್ಪಳದ ಗಂಗಾವತಿಯವರಾಗಿರುವ ಶ್ರೀನಿವಾಸ್ ಎಣ್ಣಿ, ಓದಿದ್ದು ಡಿಪ್ಲೋಮಾ ಕಂಪ್ಯೂಟರ್ ಸೈನ್ಸ್. ಗಂಗಾವತಿಯಲ್ಲಿ ಕೆಪಿಟಿಸಿಎಲ್ ನಲ್ಲಿ ಟ್ರಾನ್ಸಮಿಷನ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ವೃತ್ತಿ, ಓದಿನ ಜೊತಗೆ ಅವರಿಗೆ ಅವರ ಒಳತುಡಿತ ಫೋಟೋಗ್ರಾಫಿ. ದೇಶ , ವಿದೇಶದ ಫೋಟೊಗ್ರಾಫರ್ ಗಳ ಬಗ್ಗೆ ಮಾಹಿತಿ ಪಡೆದಿರುವ ಶ್ರೀನಿವಾಸ್ ಅವರಂತೆ ತಾನು ಫೋಟೊಗಳನ್ನು ತೆಗೆಯಬೇಕೆನ್ನುವ ತುಡಿತ ಹೊಂದಿದವರು. ಇದಕ್ಕೆ ತಕ್ಕಂತೆ ಕ್ಯಾಮೆರಾ ಖರೀದಿಸಿದ ಅವರು ಪ್ರಕೃತಿಯಲ್ಲಿಯ ಫೋಟೊಗಳನ್ನು ಕ್ಲಿಕ್ಕಿಸುತ್ತಾ ಹೋಗುತ್ತಿದ್ದಾರೆ. ಅವರ ರಸ್ತೆಯಲ್ಲಿ ಹೋಗುವಾಗ ನೋಡಿರುವ ದೃಷ್ಠಿಕೋನ, ಸಭೆ ಸಮಾರಂಭಗಳು, ಉತ್ಸವಗಳಲ್ಲಿ ಅವರ ಚಕಾಚಕಿತ ಹಾಗೂ ಬೆಳಕುಫೋಟೊಗಳಲ್ಲಿರುವ ಭಾವವನ್ನು ತಾಳ್ಮೆಯಿಂದ ಕ್ಲಿಕ್ ಮಾಡಿದ್ದಾರೆ. ನಿತ್ಯ ಸರ್ಕಾರಿ ಕಚೇರಿಯ ನಂತರ ಬಿಡುವಿನ ವೇಳೆಯನ್ನು ಅವರ ಇಂಥ ಹವ್ಯಾಸಕ್ಕಾಗಿ ಬಳಸಿಕೊಂಡಿರುವುದು ವಿಶೇಷವಾಗಿದೆ.
Advertisement
Advertisement
ಕಳೆದ ಆರು ವರ್ಷಗಳ ಹಿಂದೆಯೇ ರಘು ರಾಯ್, ರಘಬೀರಸಿಂಗ್, ಅಶೋಕ ಸರವಣಂ ಫೋಟೋಗ್ರಾಫಿಯಿಂದ ಉತ್ತೇಜನಗೊಂಡು ಫೋಟೋಗಳನ್ನು ತೆಗೆಯುವ ಹವ್ಯಾಸ ಬಳಸಿಕೊಂಡಿದ್ದಾರೆ. ನಾಡಿನಲ್ಲಿ ಎಲ್ಲಿಯಾದರೂ ಉತ್ಸವಗಳು ನಡೆದರೆ ಅಲ್ಲಿ ಹೋಗಿ ತಮ್ಮ ಕಲ್ಪನೆಗೆ ತಕ್ಕಂತೆ ಫೋಟೋಗಳನ್ನು ಸೆರೆ ಹಿಡಿಯುತ್ತಾರೆ.
ಕಳೆದ ಎರಡು ತಿಂಗಳ ಹಿಂದೆ ಭಾರತ, ಗಾಲ್ಫ ಸಮೂಹ, ಬಹರೈನ್, ಸೌದಿ ಅರಬಿಯಾ, ಕುವೈತ್ ರಾಷ್ಟ್ರಗಳ ಫೋಟೋಗ್ರಾಫಿ ಸೊಸೈಟಿಯಿಂದ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಿದ್ದರು. ಈ ಸ್ಪರ್ಧೆಯಲ್ಲಿ 48 ದೇಶಗಳ 450ಕ್ಕೂ ಹೆಚ್ಚು ಫೋಟೋಗ್ರಾಫರ್ ಗಳು ಭಾಗವಹಿಸಿದ್ದರು. ಅದರಲ್ಲಿ ಶ್ರೀನಿವಾಸ್ ಎಣ್ಣಿಯವರ ಟ್ರಾವೆಲ್ ವಿಭಾಗದಲ್ಲಿ ನಾಲ್ಕು ಫೋಟೋಗಳಿಗೆ ಪ್ರಶಸ್ತಿ ಬಂದಿದ್ದು, ಚಿನ್ನದ ಪದಕ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಫೋಟೋಗ್ರಾಫರ್ ಗಳಾದ ಓಲಾ ಅಲ್ಡೌಜ್, ಶಫೀಕ್ ಅಲ್ ಶಫೀಕ್, ಅಮ್ಮರ್ ಅಲಾವರ್, ನಜೌತ್ ಪರ್ಸಾನ ತೀರ್ಪುಗಾರರಾಗಿದ್ದರು.
ಶ್ರೀನಿವಾಸ್ ಆರು ವರ್ಷಗಳಲ್ಲಿ ದೇಶ ವಿದೇಶಗಳಲ್ಲಿ ಫೋಟೋಗಳನ್ನು ಸ್ಪರ್ಧೆಗಾಗಿ ಕಳುಹಿಸಿದ್ದು ಈಗಾಗಲೇ 100 ಅಧಿಕ ಮೆಡಲ್, ಪ್ರಶಂಸೆಗಳನ್ನು ಪಡೆದುಕೊಂಡಿದ್ದಾರೆ. ನಾಡಿನ ಬಹುತೇಕ ಡಿಜಿಟಲ್ ವಿಭಾಗದಲ್ಲಿ ಸಾಕಷ್ಟು ಫೋಟೋಗಳು ಪ್ರಕಟವಾಗಿವೆ, ದೇಶದ ವಿವಿಧ ಫೋಟೋಗ್ರಾಫರ್ ಅಸೋಸಿಯೇಷನ್ ಸದಸ್ಯರಾಗಿದ್ದಾರೆ.
ಪರಿಸರ, ಜನರ ಬದುಕು, ಉತ್ಸವ, ಸಭೆ ಸಮಾರಂಭಗಳನ್ನು ಎಲ್ಲರೂ ನೋಡುವ ದೃಷ್ಠಿಕೋನ ಒಂದಾದರೆ ಶ್ರೀನಿವಾಸ್ ಎಣ್ಣಿ ನೋಡುವ ದೃಷ್ಠಿಕೋನವೇ ವಿಭಿನ್ನವಾಗಿದ್ದು, ಅವರ ಸಾವಿರಾರು ಭಾವನೆಗಳ ಫೋಟೋಗಳ ಇನ್ನಷ್ಟು ಪ್ರಸಾರವಾಗಿ ಅವರ ಇನ್ನಷ್ಟು ಮನ್ನಣೆ ಸಿಗಲಿ ಎಂಬುವುದು ಅವರ ಸ್ನೇಹಿತರ ಆಶಯವಾಗಿದೆ.