ಒಮ್ಮೆ ತಿಂದರೆ ಮತ್ತೆ ತಿನ್ನ ಬೇಕು ಎಂದು ನಾಲಿಗೆ ರಚಿಯಾದ ಆಹಾರಾವನ್ನು ಸವಿಯಲು ಬಯಸುತ್ತದೆ. ಇಂತಹದ್ದೆ ಒಂದು ಸಿಹಿ ಅಡುಗೆ ಬಾದಾಮ್ ಪುರಿಯಾಗಿದೆ. ಆರೋಗ್ಯಕರವಾದ ಮತ್ತು ರುಚಿಯಾದ ಆಹಾರವನ್ನು ಸವಿಯಲು ಪ್ರತಿಯೊಬ್ಬರು ಇಷ್ಟ ಪಡುತ್ತಾರೆ. ಯಾವುದೇ ಹಬ್ಬವಿರಲಿ ಸಂತಸ ಕೂಟವಿರಲಿ ಅತಿಥಿಗಳು ಬಂದಾಗ ಅವರನ್ನು ಸತ್ಕರಿಸಲು ಬಾದಾಮ್ ಪುರಿಯನ್ನು ಸುಲಭವಾಗಿ ಮಾಡಬಹುದಾಗಿದೆ.
Advertisement
ಬಾದಾಮ್ ಪುರಿಯನ್ನು ಅತಿ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾಗಿದ್ದು, ಹೆಚ್ಚಿನ ಸಾಮಾಗ್ರಿಗಳ ಅಗತ್ಯ ಕೂಡ ಇದಕ್ಕಿಲ್ಲ. ರುಚಿಕರವಾದ ಮತ್ತು ಸಾಂಪ್ರದಾಯಿಕ ಸಿಹಿ ತಿನಿಸು ಇದಾಗಿದ್ದು, ಗರಿ ಗರಿಯಾದ ಪುರಿಯನ್ನು ಸಕ್ಕರೆ ಪಾಕದಲ್ಲಿ ಅದ್ದಿ ಈ ಸಿಹಿಯನ್ನು ಮಾಡಲಾಗುತ್ತದೆ. ಇದನ್ನೂ ಓದಿ: ಫಟಾಫಟ್ ಆಗಿ ಮಾಡಿ ಗರಿಗರಿಯಾದ ಕಡಲೆ ಹಿಟ್ಟಿನ ದೋಸೆ
Advertisement
ಬೇಕಾಗುವ ಸಾಮಗ್ರಿಗಳು:
* ಮೈದಾಹಿಟ್ಟು- 1 ಕಪ್
* ಅಡುಗೆ ಸೋಡಾ- ಚಿಟಿಕೆಯಷ್ಟು
* ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
* ಸಕ್ಕರೆ- ಒಂದೂವರೆ ಕಪ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮೈದಾಹಿಟ್ಟಿಗೆ ಸ್ವಲ್ಪ ಸೋಡಾ ಹಾಕಿ ಮಿಶ್ರಣ ಮಾಡಬೇಕು. ನಂತರ 5-6 ಚಮಚ ಎಣ್ಣೆಯನ್ನು ಬಿಸಿ ಮಾಡಿ ಹಾಕಿ ಮಿಶ್ರಣ ಮಾಡಿ, ನಂತರ ಸ್ವಲ್ಪ ನೀರು ಹಾಕಿ ಹಿಟ್ಟನ್ನು ತಯಾರು ಮಾಡಿಕೊಂಡು 15-20 ನಿಮಿಷ ನೆನೆಯಲು ಬಿಡಬೇಕು.
* ನಂತರ ಪಾತ್ರೆಯೊಂದಕ್ಕೆ ಸಕ್ಕರೆ ಹಾಗೂ 1 ಬಟ್ಟಲು ನೀರು ಹಾಕಿ ಪಾಕ ತಯಾರು ಮಾಡಿಕೊಳ್ಳಿ.
* ನಂತರ ಹಿಟ್ಟನ್ನು ಬಾದಾಮ್ ಪುರಿ ಆಕಾರಕ್ಕೆ ಒತ್ತಿಕೊಳ್ಳಿ. ಬಳಿಕೆ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಪುರಿಗಳನ್ನು ಹಾಕಿ ಸಣ್ಣ ಉರಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿದುಕೊಳ್ಳಿ.
* ಪಾಕ ಬೆಚ್ಚಗಿರುವಾಗಲೇ ಅದರೊಳಗೆ ಕರಿದುಕೊಂಡ ಪುರಿಗಳನ್ನು ಹಾಕಿ. 2-4 ನಿಮಿಷ ನೆಂದ ಬಳಿಕ ತೆಗೆದು ಡ್ರೈಫ್ರೂಟ್ಸ್ ನೊಂದಿಗೆ ಅಲಂಕರಿಸಿದರೆ ರುಚಿಕರವಾದ ಬಾದಾಮ್ ಪುರಿ ಸವಿಯಲು ಸಿದ್ಧವಾಗುತ್ತದೆ.