ಸಿಡ್ನಿ: ಧಾರಾಕಾರ ಮಳೆಯಿಂದ ಆಸ್ಟ್ರೇಲಿಯಾದ ಪೂರ್ವ ಕರಾವಳಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಅಲ್ಲಿ ನೆಲೆಸಿರುವ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ನ್ಯೂ ಸೌತ್ ವೇಲ್ಸ್ ರಾಜ್ಯವಾದ ಸಿಡ್ನಿಯ ಉತ್ತರ ಪ್ರದೇಶಕ್ಕೆ ನೂರಾರು ಜನರನ್ನು ಸ್ಥಳಾಂತರಿಸಲಾಗಿದ್ದು, ದಕ್ಷಿಣ ಕರಾವಳಿಯತ್ತ ಮಳೆ ಸಾಗುತ್ತಿರುವುದರಿಂದ ಇನ್ನೂ ಹಲವರಿಗೆ ಆಶ್ರಯ ಕಲ್ಪಿಸಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
2013ರಲ್ಲಿ ಕಾಣಿಸಿಕೊಂಡಿದ್ದ ಪ್ರವಾಹದ ಮಟ್ಟಕ್ಕಿಂತ, ಇದೀಗ ಸಿಡ್ನಿ ಉತ್ತರದ 400 ಕಿಮೀ(240) ಮೈಲಿ ದೂರದಲ್ಲಿರುವ ಪೋರ್ಟ್ ಮ್ಯಾಕ್ಟರಿಯ ಬಳಿಯ ಹೇಸ್ಟಿಂಗ್ಸ್ ನದಿಯಲ್ಲಿ ಪ್ರವಾಹ ಮಟ್ಟ ಹೆಚ್ಚಾಗಿದೆ. ಅಲ್ಲದೆ ಭಾರೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಈ ಮಳೆಯು ಇಂದು ಕೂಡ ಮುಂದುವರಿಯಲಿದ್ದು, ಸಿಡ್ನಿ ದಕ್ಷಿಣದ ಪೋರ್ಟ್ ಮ್ಯಾಕ್ಟರಿಯ 500ಕಿ.ಮೀ(300 ಮೈಲಿ)ವರೆಗೂ ಮಳೆ ಆಗಲಿದ್ದು, ಪ್ರವಾಹದ ತೀವ್ರತೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಜನರು ಹೊರಗೆ ಬರದೇ ಮನೆಯೊಳಗೆ ಇರುವಂತೆ ಎಚ್ಚರಿಕೆ ನೀಡಲಾಗಿದೆ.
ಇಲ್ಲಿಯವರೆಗೂ ತುರ್ತು ಸೇವೆಯ ಸಹಾಯಕ್ಕಾಗಿ 500 ಕರೆ ಬಂದಿದ್ದು, ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಸುಮಾರು 180 ಮಂದಿಯನ್ನು ರಕ್ಷಿಸಲಾಗಿದೆ.