ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಐದು ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸಿದ ಪಂಜಾಬ್ ತಂಡದ ದೈತ್ಯ ಆಟಗಾರ ಗೇಲ್, ಟಿ-20 ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.
ನಿನ್ನೆ ಶಾರ್ಜಾ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಪಂದ್ಯದಲ್ಲಿ ಪಂಜಾಬ್ ತಂಡ 8 ವಿಕೆಟ್‍ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್ ಮತ್ತು ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರು ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ ಪಂಜಾಬ್ ತಂಡ ಐಪಿಎಲ್-2020ಯಲ್ಲಿ ಎರಡನೇ ಗೆಲುವು ಸಾಧಿಸಿದೆ.
Advertisement
Advertisement
ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಅಬ್ಬರಿಸಿದ ಗೇಲ್, 45 ಎಸೆತದಲ್ಲಿ ಒಂದು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್ ಸಮೇತ 53 ರನ್ ಸಿಡಿಸಿ ಪಂದ್ಯದ ಕೊನೆಯ ಓವರಿನಲ್ಲಿ ರನೌಟ್ ಆದರು. ಆದರೆ ಒಂದು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್ ನೊಂದಿಗೆ ಟಿ-20 ಇತಿಹಾದಲ್ಲೇ ಫೋರ್ ಮತ್ತು ಸಿಕ್ಸ್ ಮೂಲಕ 10 ಸಾವಿರ ರನ್ ಮೂಲಕ ಏಕೈಕ ಬ್ಯಾಟ್ಸ್ ಮ್ಯಾನ್ ಎಂಬ ಹೊಸ ದಾಖಲೆ ಬರೆದಿದ್ದಾರೆ.
Advertisement
Advertisement
ಗೇಲ್ ಟಿ-20 ಮಾದರಿಯ ಆಟಕ್ಕೆ ಹೇಳಿ ಮಾಡಿಸಿದಂತ ಬ್ಯಾಟ್ಸ್‍ಮ್ಯಾನ್ ಆಗಿದ್ದಾರೆ. ಈ ಹೊಡಿಬಡಿ ಆಟದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಅವರು, ತಮ್ಮ ವೃತ್ತಿಜೀವನದಲ್ಲಿ ಅಂತಾರಾಷ್ಟ್ರೀಯ ಮತ್ತು ಇತರ ಲೀಗ್‍ಗಳಿಂದ ಬರೋಬ್ಬರಿ 397 ಟಿ-20 ಇನ್ನಿಂಗ್ಸ್ ಗನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 1,027 ಬೌಂಡರಿಗಳು ಮತ್ತು 983 ಸಿಕ್ಸರ್ ಗಳನ್ನು ಭಾರಿಸಿದ್ದಾರೆ. ಈ ಮೂಲಕ ಟಿ-20ಯಲ್ಲಿ 13,349 ರನ್‍ಗಳಿಸಿದ್ದಾರೆ. ಇದರಲ್ಲಿ 10,006 ರನ್ ಸಿಕ್ಸ್ ಮತ್ತು ಫೋರ್ ಗಳಿಂದ ಬಂದಿವೆ.
ಜೊತೆಗೆ ಐಪಿಎಲ್‍ನಲ್ಲೂ ಕೂಡ ಗೇಲ್ ಅವರು ಹಲವಾರು ದಾಖಲೆ ಮಾಡಿದ್ದಾರೆ. 125 ಐಪಿಎಲ್ ಪಂದ್ಯಗಳಿಂದ 4,537 ರನ್ ಗಳಿಸಿ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪೈಕಿ 9ನೇ ಸ್ಥಾನದಲ್ಲಿದ್ದಾರೆ. 41.13 ಸರಾಸರಿಯಲ್ಲಿ 6 ಶತಕ ಮತ್ತು 29 ಅರ್ಧಶತಕ ಭಾರಿಸಿದ್ದಾರೆ. ಐಪಿಎಲ್‍ನಲ್ಲಿ 331 ಸಿಕ್ಸರ್ ಭಾರಿಸಿ ಅತೀ ಹೆಚ್ಚು ಸಿಕ್ಸರ್ ಭಾರಿಸಿ ಆಟಗಾರ ಎನಿಸಿಕೊಂಡಿದ್ದಾರೆ. 6 ಶತಕ ಸಿಡಿಸಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್ ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ 175 ರನ್ ಹೊಡೆದು ಅತಿ ಹೆಚ್ಚು ವೈಯಕ್ತಿಕ ರನ್ ಸ್ಕೋರರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.