ಆರ್‌ಸಿಬಿ ಫೀಲ್ಡಿಂಗ್‍ನಲ್ಲಿ ತಪ್ಪು ಮಾಡೋದನ್ನು ಬಿಡಬೇಕು: ಎಬಿಡಿ

Public TV
1 Min Read
rcb 2

– ಬೆಂಗಳೂರಿನ ಆಟಗಾರರ ಬಗ್ಗೆ ನನಗೆ ಹೆಮ್ಮೆ ಇದೆ

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ಷೇತ್ರರಕ್ಷಣೆಯಲ್ಲಿ ತಪ್ಪು ಮಾಡುವುದನ್ನು ಬಿಡಬೇಕು ಎಂದು ತಂಡದ ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಸೋಮವಾರ ಐಪಿಎಲ್ ಅಭಿಮಾನಿಗಳಿಗೆ ಹಬ್ಬದ ವಾತವಾರಣ ಸೃಷ್ಟಿಯಾಗಿತ್ತು. ಟೂರ್ನಿಯ ಎರಡು ಬಲಿಷ್ಠ ತಂಡಗಳಾದ  ಆರ್‌ಸಿಬಿ  ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿದ್ದು, ರನ್ ಹೊಳೆಯನ್ನೇ ಹರಿಸಿದ್ದವು. ಈ ರೋಚಕ ಪಂದ್ಯ ಕೊನೆಯಲ್ಲಿ ಸೂಪರ್ ಓವರ್ ತಲುಪಿದ್ದು, ಈ ಸೂಪರ್ ಓವರಿನಲ್ಲಿ ಆರ್‌ಸಿಬಿ ತಂಡ ಗೆದ್ದು ಅಭಿಮಾನಿಗಳನ್ನು ರಂಜಿಸಿತ್ತು.

kohli chahal abd

ಈ ಪಂದ್ಯದ ನಂತರ ಮಾತನಾಡಿದ ಆರ್‌ಸಿಬಿ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್, ಇದು ಒಂದು ಅದ್ಭುತ ಪಂದ್ಯ. ನಾವು ಕೂಡ ಮುಂಬೈ ವಿರುದ್ಧ ಪ್ರಬಲವಾಗಿ ಆಡಿದ್ದೇವೆ. ಎರಡನೇ ಇನ್ನಿಂಗ್ಸ್‍ನಲ್ಲಿ ನಾವು ಮುಂಬೈಗೆ ಸ್ವಲ್ಪ ಸುಲಭ ಮಾಡಿಕೊಟ್ಟೆವು. ಫೀಲ್ಡಿಂಗ್‍ನಲ್ಲಿ ಬಹಳ ತಪ್ಪುಗಳನ್ನು ಮಾಡಿದ್ದೇವೆ. ಇದನ್ನು ನಾವು ಇನ್ನು ಮುಂದಿನ ಪಂದ್ಯಗಳಲ್ಲಿ ನಿಲ್ಲಿಸಬೇಕು ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ತಂಡಕ್ಕೆ ಇದು ಟೂರ್ನಿಯ ಮೂರನೇ ಪಂದ್ಯ. ನಮಗೆ ಇನ್ನೂ ಸಮಯವಿದೆ. ನಾವು ನಮ್ಮ ಸ್ಕಿಲ್ ಮತ್ತು ಫೀಲ್ಡಿಂಗ್ ಮೇಲೆ ಗಮನಹರಿಸುತ್ತೇವೆ. ಕಳೆದ ಪಂದ್ಯದಲ್ಲಿ ನಮ್ಮ ತಂಡದ ಆಟಗಾರರು ಅದ್ಭುತವಾಗಿ ಆಡಿದ್ದಾರೆ. ಅವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಎಬಿಡಿ ಮಾತನಾಡಿರುವ ಈ ವಿಡಿಯೋವನ್ನು ಆರ್‌ಸಿಬಿ ತಂಡ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

EjA6 1AUYAAwXD1

ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಎಬಿಡಿ ಬ್ಯಾಟಿಂಗ್ ಜೊತೆ ಕೀಪಿಂಗ್ ಜವಬ್ದಾರಿಯನ್ನು ಹೊತ್ತುಕೊಂಡಿದ್ದರು. ಕಳೆದ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ಎಬಿಡಿ ಕೇವಲ 24 ಎಸೆತದಲ್ಲಿ 55 ರನ್ ಸಿಡಿಸಿ ಮಿಂಚಿದ್ದರು. ಈ ಇನ್ನಿಂಗ್ಸ್‍ನಲ್ಲಿ ಎಬಿಡಿ 4 ಫೋರ್ ಮತ್ತು 4 ಸಿಕ್ಸರ್ ಭಾರಿಸಿದ್ದರು. ಜೊತೆಗೆ ಆರ್‌ಸಿಬಿ ಪರ ಸೂಪರ್ ಓವರಿನಲ್ಲಿ ಬ್ಯಾಟಿಂಗ್ ಮಾಡಿದ ಎಬಿಡಿ ಒಂದು ಬೌಂಡರಿ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *