ದುಬೈ: ಐಪಿಎಲ್ 2020ರ ಆವೃತ್ತಿಯ ಸಂಡೇ ಡಬಲ್ ಧಮಾಕ ಪಂದ್ಯದ ಮೊದಲ ಮ್ಯಾಚ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೋಲುಂಡಿತ್ತು. ಪಂದ್ಯದಲ್ಲಿ ಹಸಿರು ಬಣ್ಣದ ಜರ್ಸಿಯೊಂದಿಗೆ ಕಣಕ್ಕೆ ಇಳಿದಿದ್ದ ಕೊಹ್ಲಿ ಪಡೆ ಈ ಬಾರಿಯೂ ಕೆಟ್ಟ ಪ್ರದರ್ಶನ ನೀಡಿತ್ತು.
ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಇದುವರೆಗೂ 10 ಐಪಿಎಲ್ ಆವೃತ್ತಿಗಳಲ್ಲಿ ಗ್ರೀನ್ ಜರ್ಸಿಯೊಂದಿಗೆ ಕಣಕ್ಕೆ ಇಳಿದಿದ್ದು, ಇದರಲ್ಲಿ ಕೇವಲ 2 ಪಂದ್ಯದಲ್ಲಿ ಮಾತ್ರ ಗೆಲುವು ಪಡೆದಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಲಭ್ಯವಾಗದ ಕಾರಣ 7 ಪಂದ್ಯಗಳಲ್ಲಿ ಸೋಲುಂಡಿದೆ.
Advertisement
Advertisement
2011 ರಲ್ಲಿ ಮೊದಲ ಬಾರಿಗೆ ಗ್ರೀನ್ ಜರ್ಸಿ ತೊಟಿದ್ದ ಆರ್‌ಸಿಬಿ ತಂಡದ ಆಟಗಾರರು ಅಂದು ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ ಗೆಲುವು ಪಡೆದಿದ್ದರು. 2019ರ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗ್ರೀನ್ ಜರ್ಸಿ ತೊಟ್ಟು ಕಣಕ್ಕಿಳಿದಿದ್ದ ಪಂದ್ಯದಲ್ಲೂ ಸೋಲು ಲಭಿಸಿತ್ತು. ಗ್ರೀನ್ ಜರ್ಸಿಯಲ್ಲಿ ಆಡಿದ ಪಂದ್ಯಗಳ ಫಲಿತಾಂಶ ನೋಡುವುದಾದರೆ, 2011 ಗೆಲುವು, 2012 ಸೋಲು, 2013 ಸೋಲು, 2014 ಸೋಲು, 2015 ಫಲಿತಾಂಶವಿಲ್ಲ, 2016 ಗೆಲುವು, 2017 ಸೋಲು, 2018 ಸೋಲು, 2019 ಸೋಲು, 2020ರಲ್ಲಿ ಸೋಲು. ಇದನ್ನೂ ಓದಿ: ಐಪಿಎಲ್ 2020: ಪ್ಲೇ ಆಫ್ಸ್, ಫೈನಲ್ ಶೆಡ್ಯೂಲ್ ಡೇಟ್ ಫಿಕ್ಸ್
Advertisement
RCB in Green jersey:
2011 – Won
2012 – Lost
2013 – Lost
2014 – Lost
2015 – NR
2016 – Won
2017 – Lost
2018 – Lost
2019 – Lost
2020 – Lost
Played 10
Won 2
Lost 7
NR 1#IPL2020 #CSKvRCB
— Bharath Seervi (@SeerviBharath) October 25, 2020
Advertisement
ವಿಶೇಷ ಎಂದರೇ ಆರ್‌ಸಿಬಿ ಹಸಿರು ಜರ್ಸಿಯಲ್ಲಿ ಗೆಲುವು ಪಡೆದಿದ್ದ ಎರಡು ಆವೃತ್ತಿಗಳಲ್ಲಿ, ಅಂದರೇ 2011 ಮತ್ತು 2016ರಲ್ಲಿ ತಂಡ ಫೈನಲ್ ಪ್ರವೇಶ ಮಾಡಿತ್ತು. ಇದಕ್ಕೂ ಮುನ್ನ ಆರ್‌ಸಿಬಿ 2009 ರ ಟೂರ್ನಿಯಲ್ಲಿ ಫೈನಲ್ ಮಾಡಿತ್ತು. ಉಳಿದಂತೆ 2020ರ ಟೂರ್ನಿಯಲ್ಲಿ ಇದುವರೆಗೂ 11 ಪಂದ್ಯಗಳನ್ನು ಆಡಿರುವ ಆರ್‌ಸಿಬಿ 7 ಪಂದ್ಯಗಳಲ್ಲಿ ಗೆಲುವು ಪಡೆದು, 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಚೆನ್ನೈ ವಿರುದ್ಧ ಪಂದ್ಯದಲ್ಲಿ ಗೆಲುವು ಪಡೆದಿದ್ದರೇ ಪಟ್ಟಿಯಲ್ಲಿ ನಂ.1ಕ್ಕೇರುವ ಅವಕಾಶವಿತ್ತು. ಇದನ್ನೂ ಓದಿ: ಗ್ರೀನ್ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್‌ಸಿಬಿ- ಏನಿದರ ವಿಶೇಷತೆ?