ಆರ್​ಸಿಬಿ ಬಿಟ್ಟರೆ ಈ ತಂಡದಲ್ಲಿ ಆಡುವ ಬಯಕೆ ಇದೆ ಎಂದ ಚಹಲ್

Public TV
1 Min Read
YAZUVENDRA CHAHAL

ಮುಂಬೈ: ಭಾರತ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇರದೇ ಇದ್ದಿದ್ದರೆ ಈ ತಂಡದಲ್ಲಿ ಆಡುತ್ತಿದ್ದೆ ಎಂದು ತಮ್ಮ ಮನದ ಮಾತನ್ನು ಹೇಳಿಕೊಂಡಿದ್ದಾರೆ.

chahal

ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಚಹಲ್, ನಾನು ಐಪಿಎಲ್‍ನಲ್ಲಿ ಆರ್​ಸಿಬಿ ತಂಡದ ಪರ ಆಡದೇ ಇದ್ದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದೆ ಎಂದು ತಮ್ಮ ಬಯಕೆಯನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಕ್ರಿಸ್ ಗೇಲ್ ಮುಂದೆ ಮೋಡಿ ಮಾಡದ ಚಹಲ್ ಬಾಡಿ

jadeja csk

ಸಿಎಸ್‍ಕೆ ತಂಡದಲ್ಲಿ ಧೋನಿ ನಾಯಕರಾಗಿದ್ದಾರೆ ಅವರ ನಾಯಕತ್ವದಲ್ಲಿ ಆಡಲು ಬಯಸುತ್ತೇನೆ. ಚೆನ್ನೈ ತಂಡ ಮೂರು ಬಾರಿ ಚಾಂಪಿಯನ್ ಆಗಿದೆ. ಹಾಗೆ ತಂಡದಲ್ಲಿ ಸ್ಪಿನ್ನರ್‍ ಗೆ ಹೆಚ್ಚಿನ ಮಹತ್ವ ಇದೆ ಹಾಗಾಗಿ ಆಡಲು ನಾನು ಇಷ್ಟ ಪಡುತ್ತೇನೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

RCB KOHLI

2011ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್‍ಗೆ ಪಾರ್ದಾಪಣೆ ಮಾಡಿದ ಚಹಲ್ ನಂತರ 2014ರಲ್ಲಿ ಆರ್​ಸಿಬಿ ತಂಡಕ್ಕೆ ಸೇರಿಕೊಂಡರು. ಆ ಬಳಿಕ ಆರ್​ಸಿಬಿ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಚಹಲ್ ಐಪಿಎಲ್‍ನಲ್ಲಿ ಈ ವರೆಗೆ ಒಟ್ಟು 106 ಪಂದ್ಯಗಳನ್ನು ಆಡಿ 125 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ:ಕೊಹ್ಲಿ, ವಿಲಿಯಮ್ಸನ್ ನಡುವಿನ ನಾಯಕತ್ವ ವಿಭಿನ್ನತೆ ನೋಡಲು ಕಾತುರ-ಬ್ರೆಟ್ ಲೀ

Yuzvendra Chahal

ಭಾರತ ತಂಡದ ಪರ ಚಹಲ್ ಒಟ್ಟು 54 ಏಕದಿನ ಪಂದ್ಯದಿಂದ 92 ವಿಕೆಟ್, 42 ಟಿ20 ಪಂದ್ಯದಿಂದ 62 ವಿಕೆಟ್ ಪಡೆದಿದ್ದಾರೆ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಚಹಲ್ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತದ ಇನ್ನೊಂದು ತಂಡದ ಪ್ರಮುಖ ಸ್ಪಿನ್ ಬೌಲರ್ ಆಗಿ ಆಯ್ಕೆ ಆಗುವ ನಿರೀಕ್ಷೆ ಇದೆ.

Share This Article
Leave a Comment

Leave a Reply

Your email address will not be published. Required fields are marked *