Connect with us

ಕೊಹ್ಲಿ, ವಿಲಿಯಮ್ಸನ್ ನಡುವಿನ ನಾಯಕತ್ವ ವಿಭಿನ್ನತೆ ನೋಡಲು ಕಾತುರ-ಬ್ರೆಟ್ ಲೀ

ಕೊಹ್ಲಿ, ವಿಲಿಯಮ್ಸನ್ ನಡುವಿನ ನಾಯಕತ್ವ ವಿಭಿನ್ನತೆ ನೋಡಲು ಕಾತುರ-ಬ್ರೆಟ್ ಲೀ

ಸಿಡ್ನಿ: ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದುಕೊಂಡಿದೆ. ಈ ನಡುವೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ನಡುವೆ ಇರುವಂತಹ ನಾಯಕತ್ವದ ವಿಭಿನ್ನತೆಯನ್ನು ನೋಡಲು ಕಾತುರನಾಗಿದ್ದೇನೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಬ್ರೆಟ್ ಲೀ ತಿಳಿಸಿದ್ದಾರೆ.

ಸ್ಥಳೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಬ್ರೆಟ್ ಲೀ, ಮುಂದೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಎರಡು ತಂಡದ ನಾಯಕರ ನಾಯಕತ್ವ ಮತ್ತು ಆಟ ವಿಭಿನ್ನವಾಗಿದೆ ವಿಲಿಯಮ್ಸನ್ ಶಾಂತಚಿತ್ತದ ನಾಯಕನಾದರೆ, ಕೊಹ್ಲಿ ಆಕ್ರಮಣಕಾರಿ ನಾಯಕತ್ವವನ್ನು ತೋರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ:ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಭಾರತ ತಂಡ ಪ್ರಕಟ -ಮೂವರು ಕನ್ನಡಿಗರಿಗೆ ಸ್ಥಾನ

ವಿರಾಟ್ ನಾಯಕತ್ವ ಮತ್ತು ಬ್ಯಾಟಿಂಗ್ ಎರಡರಲ್ಲೂ ಆಕ್ರಮಣಕಾರಿಯಾಗಿ ಕಾಣಿಸಿಕೊಂಡರೆ, ವಿಲಿಯಮ್ಸನ್ ಶಾಂತಚಿತ್ತರಾಗಿ ನಾಯಕತ್ವ ನಿಭಾಯಿಸುತ್ತಾರೆ ಇದರೊಂದಿಗೆ ಅವರು ಸಮಯಕ್ಕೆ ಸರಿಯಾಗಿ ಬ್ಯಾಟಿಂಗ್‍ನಲ್ಲಿ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಗುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

ಈ ಇಬ್ಬರೂ ಆಟಗಾರರ ಆಟ ಮತ್ತು ನಾಯಕತ್ವ ಗುಣ ಬೇರೆ ಬೇರೆಯಾಗಿದ್ದು, ವಿಲಿಯಮ್ಸನ್ ಬೋರ್ ಆಗದ ರೀತಿಯಲ್ಲಿ ಸಾಂಪ್ರಾದಾಯಿಕ ನಾಯಕತ್ವನ್ನು ನಿಭಾಯಿಸುತ್ತಿದ್ದಾರೆ ಮತ್ತು ಅವರ ಕ್ರಿಕೆಟ್ ಜ್ಞಾನ ಮೆಚ್ಚುವಂತದ್ದಾಗಿದೆ. ಕೊಹ್ಲಿ ಕೂಡ ಕ್ರಿಕೆಟ್‍ನಲ್ಲಿ ಸಾಕಷ್ಟು ಅನುಭವ ಹೊಂದಿದ್ದು ಇದೀಗ ಈ ಇಬ್ಬರು ವಿಭಿನ್ನ ನಾಯಕರ ಕಾದಾಟ ನೋಡಲು ಕಾತುರನಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕ್ರಿಕೆಟ್ ವಿಶ್ವಕಪ್‍ಗಾಗಿ ಐಸಿಸಿ ಮಹತ್ವದ ನಿರ್ಧಾರ – ಬದಲಾವಣೆಯ ಪರ್ವ ಆರಂಭ

ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಟೆಸ್ಟ್ ಚಾಂಪಿಯನ್‍ಶಿಪ್ ಜೂನ್ 18ರಿಂದ ಸೌಥಾಂಪ್ಟನ್‍ನಲ್ಲಿ ನಡೆಯಲಿದ್ದು, ಈಗಾಗಲೇ ಭಾರತ ತಂಡ ಇಂಗ್ಲೆಂಡ್‍ನಲ್ಲಿ ಕ್ವಾರಂಟೈನ್‍ಗೆ ಒಳಗಾಗಿದೆ.

Advertisement
Advertisement