ಶ್ರೀನಗರ: ಆನ್‍ಲೈನ್ ಕ್ಲಾಸ್ ಇಲ್ಲ, ಶಾಲೆ ಇಲ್ಲದೇ 10 ನೇ ತರಗತಿ ಪರೀಕ್ಷೆಯಲ್ಲಿ ಶೇ. 98 ಅಂಕ ಪಡೆದು ಪಾಸ್ ಆಗಿ ಜಮ್ಮು ಮತ್ತು ಕಾಶ್ಮೀರದ ಬಾಲಕ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಉಧಂಪುರ ಜಿಲ್ಲೆಯ ಅನೋಹ್ ಗ್ರಾಮದ ನಿವಾಸಿ ಮನ್ ದೀಪ್ ಸಿಂಗ್ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ತೆಗೆದುಕೊಂಡು ಪಾಸ್ ಆಗಿದ್ದಾನೆ. ಕೊರೊನಾ ಲಾಕ್‍ಡೌನ್ ಕಾರಣದಿಂದಾಗಿ ಶಾಲೆಗೂ ತೆರಳದೆ, ಆನ್‍ಲೈನ್ ಪಾಠದಲ್ಲಿ ಭಾಗಿಯಾಗಲೂ ಸಾಧ್ಯವಾದೆ 10 ನೇ ತರಗತಿಯಲ್ಲಿ ಉತ್ತಮ ಅಂಕನ್ನು ಪಡೆದು ಜಿಲ್ಲೆಗೆ ಪ್ರಥಮಸ್ಥಾನವನ್ನು ಪಡೆದಿದ್ದಾನೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ರಿಪಿಟರ್ಸ್ ಪಾಸ್ ಮಾಡಲು ಸರ್ಕಾರದ ನಿರ್ಧಾರ!
Advertisement
ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಳೆದ ವರ್ಷ ಶಾಲೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಆನ್‍ಲೈನ್ ಕ್ಲಾಸ್‍ಗೆ ಮೊಬೈಲ್, ಕಂಪ್ಯೂಟರ್ ವ್ಯವಸ್ಥೆ ಇರಲಿಲ್ಲ. ಅಧ್ಯಾಪಕರು ಮತ್ತು ಸ್ನೇಹಿತರ ಸಹಾಯದಿಂದ ಶ್ರದ್ಧೆಯಿಂದ ಕಲಿತೆ. ನಾನು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇನೆ. ನಾನು ರೈತ ಕುಟುಂಬಕ್ಕೆ ಸೇರಿದವನಾಗಿರುವ ಕಾರಣ ಕೆಲವೊಮ್ಮೆ ಕೆಲಸವನ್ನೂ ಮಾಡುತ್ತಿದ್ದೇನು ಎಂದು ದೀಪ್ ಸಿಂಗ್ ಹೇಳಿಕೊಂಡಿದ್ದಾನೆ.
Advertisement
Surpassing ordeals, Mandeep Singh from J&K’s Udhampur tops the district with 98.6% in State Board. “During the lockdown, my brother helped me in my studies. Despite inadequate power supply & other facilities in my village Amroh, I managed to study,” he says pic.twitter.com/d44ncCYtos
— ANI (@ANI) July 4, 2021
Advertisement
ಪದವಿ ಪೂರ್ವ ತರಗತಿ ಪರೀಕ್ಷೆ ಬಳಿಕ ನೀಟ್‍ನಲ್ಲಿ ಉತ್ತೀರ್ಣನಾಗಿ ಎಂಬಿಬಿಎಸ್‍ಗೆ ಸೇರ್ಪಡೆಯಾಗಬೇಕು ಎಂದಿದ್ದೇನೆ. ನನ್ನ ಸಹೋದರ ಜಮ್ಮುವಿನಲ್ಲಿರುವ ಶೇರ್-ಇ-ಕಾಶ್ಮೀರ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕಲಿಯುತ್ತಿದ್ದಾನೆ. ಎಲ್ಲರ ಸಹಾಯದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದಿದ್ದಾನೆ
Advertisement