ಬೆಂಗಳೂರು: ಸ್ಯಾಂಡಲ್‍ವುಡ್ ಸೆನ್ಸೇಷನ್ ಜೋಡಿ ಎಂದೇ ಗುರುತಿಸಿಕೊಂಡಿರುವ, ಆದಿ-ನಿಧಿಮಾ ಎಂದೇ ಪ್ರಸಿದ್ಧಿ ಪಡೆದಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಸಿನಿಮಾ ಕೆಲಸಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆಯೇ ಪ್ರೀತಿ, ತುಂಟಾಟಗಳನ್ನು ಮುಂದುವರಿಸಿದ್ದಾರೆ. ಅಲ್ಲದೆ ಜೂನ್ 12ರಂದು ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬವಾಗಿದ್ದು, ಸರ್ಪ್ರೈಸ್ ನೀಡಿದ್ದಾರೆ.
ಲಾಕ್‍ಡೌನ್ ಹಿನ್ನೆಲೆ ಹೆಚ್ಚು ಜನ ಸೇರುವ ಹಾಗಿಲ್ಲ. ಹೀಗಾಗಿ ಅಭಿಮಾನಿಗಳು ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕವೇ ಶುಭ ಕೋರುತ್ತಿದ್ದಾರೆ. ಆದರೆ ಡಾರ್ಲಿಂಗ್ ಕೃಷ್ಣ ಭಾವಿ ಪತ್ನಿ ಮಿಲನ ನಾಗರಾಜ್ ವಿಭಿನ್ನವಾಗಿ ಹಾಗೂ ವಿಶೇಷವಾಗಿ ಹುಟ್ಟುಹಬ್ಬಕ್ಕೆ ಸರ್ಪೈಸ್ ನೀಡಿ ಸೆಲೆಬ್ರೇಟ್ ಮಾಡಿದ್ದಾರೆ.
ಹೌದು ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬದ ಅಂಗವಾಗಿ ಲವ್‍ಮಾಕ್‍ಟೇಲ್ 2 ಚಿತ್ರದ ಟೈಟಲ್‍ನ ಪೋಸ್ಟರ್ ಬಿಡುಗಡೆಗೊಳಿಸಿದ್ದು, ಈ ಮೂಲಕ ಟೈಟಲ್ ಶೈಲಿಯನ್ನು ತಿಳಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಚಿತ್ರದೊಂದಿಗೆ ಸಿನಿಮಾ ಹೆಸರಿದ್ದು, ಸ್ಟೋರಿ ಟು ಬಿ ಕಂಟಿನ್ಯೂಡ್ ಎಂಬ ಸಬ್ ಟೈಟಲ್ ಬರೆಯಲಾಗಿದೆ. ಇದರ ಕೆಳಗೆ ಸಿನಿಮಾ ಹೆಸರಿದೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಮಿಲನ ನಾಗರಾಜ್, ವಿಶಿಂಗ್ ಎ ವೆರಿ ಹ್ಯಾಪಿ ಬರ್ತ್‍ಡೇ ಟು ಅವರ್ ಡಾರ್ಲಿಂಗ್ ಡೈರೆಕ್ಟರ್ ಎಂದು ಬರೆದುಕೊಂಡಿದ್ದಾರೆ.
View this post on Instagram
Wishing a very happy birthday to our darling director @darling_krishnaa ❤️
ಮಧ್ಯರಾತ್ರಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ ವಿಡಿಯೋವನ್ನು ಸಹ ಹಂಚಿಕೊಂಡಿದ್ದು, ಇದರಲ್ಲಿ ತಾವು ನೀಡಿದ ಸರ್ಪ್ರೈಸ್ ನ್ನು ತೋರಿಸಿದ್ದಾರೆ. ತಮ್ಮ ಸ್ನೇಹವನ್ನು ನೆನಪಿಸುವ ಹಾಗೂ ತಾವು ಭೇಟಿಯಾದ ಸುಂದರ ಕ್ಷಣಗಳ ಚಿತ್ರಗಳ ಗುಚ್ಛವನ್ನು ಗಿಫ್ಟ್ ನೀಡಿದ್ದಾರೆ. ಕೇವಲ ಮೂರ್ನಾಲ್ಕು ಜನರೊಂದಿಗೆ ಹುಟ್ಟುಹಬ್ಬ ಆಚರಿಸಿದ್ದಾರೆ.
ಇದಕ್ಕೂ ಮೊದಲು ಇಬ್ಬರೂ ಚೇತಕ್ ಮೇಲೆ ಕುಳಿತಿರುವ ಫೋಟೋ ಹಾಕಿ ಭಾವನಾತ್ಮಕ ಸಾಲುಗಳನ್ನು ಬರೆದಿದ್ದು, ನೀನು ಪ್ರೀತಿಸಿದ ರೀತಿ ಮತ್ಯಾರು ನನ್ನನ್ನು ಪ್ರೀತಿಸಿಲ್ಲ. ನೀನೇ ಶ್ರೇಷ್ಠ, ನಾನೇ ಅದೃಷ್ಟವಂತೆ ಹ್ಯಾಪಿಯಸ್ಟ್ ಬರ್ತ್‍ಡೇ ಎಂದು ಬರೆದುಕೊಂಡಿದ್ದಾರೆ.
ಈ ಜೋಡಿ ತಾವೇ ನಿರ್ದೇಶಿಸಿ, ನಿರ್ಮಿಸಿ ನಟಿಸಿದ್ದ ಲವ್ ಮಾಕ್‍ಟೇಲ್ ಚಿತ್ರ ಜನವರಿಯಲ್ಲಿ ತೆರೆ ಕಂಡಿತ್ತು. ಮೊದಲ ಪ್ರಯತ್ನದಲ್ಲೇ ಈ ಜೋಡಿ ಅಪಾರ ಜನ ಮನ್ನಣೆ ಗಳಿಸಿತು. ಹೀಗಾಗಿ ಇದೇ ಸಿನಿಮಾದ ಸೀಕ್ವೆಲ್ ತಯಾರಿಸುತ್ತಿದ್ದು, ಇದು ಯಾವ ರೀತಿ ಮೂಡಿ ಬರಲಿದೆ ಎಂಬುದು ಅಭಿಮಾನಿಗಳ ಸದ್ಯದ ಕುತೂಹಲವಾಗಿದೆ. ಲಾಕ್‍ಡೌನ್ ಸಮಯವನ್ನೇ ಬಳಸಿಕೊಂಡು ಈ ಜೋಡಿ ಈಗಾಗಲೇ ಸ್ಕ್ರಿಪ್ಟ್ ಬರೆದಿದ್ದು, ಇನ್ನೇನು ಚಿತ್ರೀಕರಣ ಆರಂಭಿಸುವಷ್ಟರ ಮಟ್ಟಿಗೆ ಸಿದ್ಧತೆ ಮಾಡಿಕೊಂಡಿದೆ. ಚಿತ್ರೀಕರಣಕ್ಕೆ ಅವಕಾಶ ಸಿಗುತ್ತಿದ್ದಂತೆ ತಂಡ ಚಿತ್ರೀಕರಣ ಆರಂಭಿಸಲಿದೆ.