ಯಾದಗಿರಿ: ನಗರದ ಜೆಸ್ಕಾಂ ಲೆಕ್ಕಾಧಿಕಾರಿ ರಾಜು ಪತ್ತಾರ್ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಳೆದ 20 ವರ್ಷದಿಂದ ಯಾದಗಿರಿ ಜೆಸ್ಕಾಂ ಕಚೇರಿಯಲ್ಲಿ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ರಾಜು ಪತ್ತಾರ ಮೇಲೆ ಆದಾಯಕ್ಕೂ ಮೀರಿ ಆಸ್ತಿ ಹೊಂದಿದ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ಯಾದಗಿರಿ ನಗರದ ಸಹರಾ ಕಾಲೋನಿಯಲ್ಲಿರುವ ನಿವಾಸಿ ಮೇಲೆ ಎಸಿಬಿ ದಾಳಿ ನಡೆಸಿದೆ. ದಾಳಿಯಲ್ಲಿ ಅಪಾರ ಪ್ರಮಾಣದ ನಗದು ಹಣ, ಚಿನ್ನಾಭರಣ ಸೇರಿದಂತೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಎಸಿಬಿ ಎಸ್‍ಪಿ ಮಹೇಶ್ ಮೇಗಣ್ಣನವರ್ ಹಾಗೂ ಡಿವೈಎಸ್‍ಪಿ ಉಮಾಶಂಕರ್, ಇನ್‍ಸ್ಪೆಕ್ಟರ್ ಗುರುಪಾದ ಬಿರಾದರ್, ಶರಣಬಸವ ಕೊಡ್ಲಾ, ಮತ್ತು ಸಿಬ್ಬಂದಿ ವಿಜಯ್, ಗುತ್ತಪ್ಪಗೌಡ, ಅಮರನಾಥ್, ಸಾಬಣ್ಣ, ರವಿ ನೇತೃತ್ವದ ತಂಡ ಈ ದಾಳಿ ನಡೆಸಿದೆ. ಇನ್ನೂ ದಾಳಿ ವೇಳೆ ಅಧಿಕಾರಿ ಮನೆಯಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.