ನವದೆಹಲಿ: ಮದುವೆ ಎಂದರೆ ವಿಜೃಂಭಣೆ, ಅದ್ಧೂರಿಯಾಗಿ ಹಣ ಖರ್ಚುಮಾಡಿ ಆಗುವುದನ್ನು ಸಾಮಾನ್ಯವಾಗಿ ನಾವು ನೋಡಿರುತ್ತೇವೆ. ಆದರೆ ದೆಹಲಿಯ ಜೋಡಿಯೊಂದು ಆಡಂಬರದ ಮದುವೆಗೆ ಬ್ರೇಕ್ ಹಾಕಿ ಬಹಳ ಯುನಿಕ್ ಆಗಿ ಸರಳವಾಗಿ ಪರಿಸರ ಸ್ನೇಹಿಗಳಿಬ್ಬರು ವಿವಾಹವಾಗಿದ್ದಾರೆ.
ಹೌದು, ವರ ಆದಿತ್ಯ ಅಗರ್‍ವಾಲ್(32) ತಮ್ಮ ಮದುವೆಗೆ ಕಾರು ಬೈಕ್‍ನಲ್ಲಿ ಬರದೇ ಯುಲು ಬೈಕ್ ಮೇಲೆ ಬಂದರು. ಮೊದಲಿನಿಂದಲೂ ಕಡಿಮೆ ವೆಚ್ಚದಲ್ಲಿ ಮದುವೆಯಗಬೇಕೆಂಬ ಆಸೆ ಹೊಂದಿದ್ದ, ವಧು ಮಾಧುರಿ ಬಲೋಡಿಯವರಿಗೆ ಕುಟುಂಬಸ್ಥರು ಹಾಗೂ ಸ್ನೇಹಿತರು ಬೆಂಬಲ ನೀಡಿದ್ದಾರೆ.
Advertisement
Advertisement
ಮಾಧುರಿಯವರ ವಿವಾಹವನ್ನು ಅವರ ಚಿಕ್ಕಪ್ಪನ ಮನೆಯ ಗಾರ್ಡನ್ ನಲ್ಲಿ ಏರ್ಪಡಿಸಲಾಗಿತ್ತು. ಮದುವೆ ಸಮಯದಲ್ಲಿ ಸಾಧ್ಯವಾದಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೇ, ಹಳೆಯ ಬಾಟಲಿಗಳಿಗೆ ನ್ಯೂಸ್ ಪೇಪರ್‌ಗಳನ್ನು ಅಂಟಿಸಿ, ಪರಿಸರ ಸ್ನೇಹಿ ವಸ್ತುಗಳನ್ನು ಅಲಂಕಾರಕ್ಕೆ ಉಪಯೋಗಿಸಲಾಗಿತ್ತು.
Advertisement
Advertisement
ಮದುವೆಗೆ ಆಹ್ವಾನ ಪತ್ರಿಕೆ ನೀಡಿದರೆ ಜನ ಅದನ್ನು ನೋಡಿ ಬಿಸಾಡುತ್ತಾರೆ. ಹಾಗಾಗಿ ಆಹ್ವಾನ ಪತ್ರಿಕೆಯನ್ನು ಪ್ರಿಂಟ್ ಮಾಡಿಸದೇ ನನ್ನ ಮದುವೆ ಸ್ವತಃ ನಾನೇ ಆಹ್ವಾನ ಪತ್ರಿಕೆಯನ್ನು ವಿನ್ಯಾಸಗೊಳಿಸಿದೆ ಹಾಗೂ ಮದುವೆಗೆ ಪ್ರಿಂಟೆಡ್ ಬ್ಯಾನರ್ ಬಳಸುವ ಬದಲಾಗಿ ನಾವು ಚಾರ್ಕ್ ಬೋಡ್ ಬಳಸಲಾಗಿದೆ ಎಂದು ಮಾಧುರಿ ತಿಳಿಸಿದ್ದಾರೆ.
ಮದುವೆ ಸಮಯದಲ್ಲಿ ನನ್ನ ಸ್ನೇಹಿತರು ಗಾಜಿಪುರದಿಂದ ತುಳಸಿ ಹಾರವನ್ನು ತರಿಸಿದ್ದು, ನಾವು ಹಾರವಾಗಿ ತುಳಸಿಯನ್ನು ಬಳಸಿದ್ದೇವೆ. ಅಲ್ಲದೇ ಎರಡು ಕುಟುಂಬಗಳು ಯಾವುದೇ ಗಿಫ್ಟ್‍ಗಳನ್ನು ವಿನಿಮಯ ಮಾಡಿಕೊಳ್ಳದೇ, ಬದಲಾಗಿ ಇಬ್ಬರು ಒಂದು ಕೆಜಿ ಹಣ್ಣುಗಳನ್ನು ತಂದಿದ್ದಾರೆ. ಹಿಂದಿನ ಕಾಲದಲ್ಲಿ ಜನರು ಮದುವೆಗೆ ಹೋಗುವಾಗ ತಮ್ಮದೇ ಗುಂಪುಗಳನ್ನು ಮಾಡಿಕೊಂಡು ಹೋಗುತ್ತಿದ್ದರು. ಇದೀಗ ಜನರ ಮಧ್ಯೆ ಆ ಬಾಂಧವ್ಯ ಕಾಣೆಯಾಗದೆ. ಆದರೆ ನಮ್ಮ ಮದುವೆಗೆ ಎಲ್ಲರೂ ವಿಭಿನ್ನ ರೀತಿಯಲ್ಲಿಯೇ ಕೊಡುಗೆ ನೀಡಿದ್ದಾರೆ.
ಈ ಜೋಡಿ ವಿವಾಹಕ್ಕೆ ಮಾಧುರಿ ಸೋದರ ಸಂಬಂಧಿಯೊಬ್ಬರು ಪಂಡಿತರ ಪಾತ್ರವನ್ನು ವಹಿಸಿದರೆ, ಸ್ನೇಹಿತರು ಫೋಟೋವನ್ನು ಮದುವೆಯ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಮದುವೆ ವೇಳೆ ಮಾಧುರಿ 2,500 ರೂ ಸೀರೆ ಉಟ್ಟರೆ, ವರ ಆದಿತ್ಯ 3,000 ರೂ ಶೇರ್ವಾನಿ ಧರಿಸಿದ್ದರು. ಅಲ್ಲದೆ ಮದುವೆಯಲ್ಲಿ ಪಾಲ್ಗೊಂಡವರಿಗೆ ತಾಂಬೂಲದ ಬದಲಿಗೆ ಗಿಡವನ್ನು ಉಡುಗೊರೆಯಾಗಿ ನೀಡಲಾಗಿತ್ತು.