ಚಿತ್ರದುರ್ಗ: ಆಟೋ ಚಾಲಕನ ಎಡವಟ್ಟಿನಿಂದಾಗಿ ಪರೀಕ್ಷಾ ಕೇಂದ್ರ ಸಿಗದೇ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯರು ಕಣ್ಣೀರು ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಇಂದಿನಿಂದ ಎಲ್‍ಎಲ್‍ಎಲ್‍ಸಿ ಪರೀಕ್ಷೆ ನಡೆಯುತ್ತಿದ್ದು, ಹೀಗಾಗಿ ಪರೀಕ್ಷೆ ಬರೆಯಲು ಚಿತ್ರದುರ್ಗ ತಾಲೂಕಿನ ಆರು ಜನ ವಿದ್ಯಾರ್ಥಿನಿಯರು ಆಟೋದಲ್ಲಿ ತಮಟಕಲ್ಲು ಗ್ರಾಮದಿಂದ ಆಗಮಿಸಿದ್ದರು. ಆದರೆ ಆಟೋ ಚಾಲಕ ಸಂಪಿಗೆ ಸಿದ್ದೇಶ್ವರ ಶಾಲಾ ಪರೀಕ್ಷಾ ಕೇಂದ್ರ ಬದಲು ಸಂತ ಜೋಸೆಫ್ ಕೇಂದ್ರಕ್ಕೆ ಬಿಟ್ಟು ಹೋಗಿದ್ದಾನೆ.
Advertisement
Advertisement
ಈ ಸಮಯದಲ್ಲಿ ಪರೀಕ್ಷೆ ತಡವಾಗಿದೆ ಎಂದು ಕಂಗಲಾದ ವಿದ್ಯಾರ್ಥಿನಿಯರು ಸಂತ ಜೋಸೆಫ್ ಪರೀಕ್ಷಾ ಕೇಂದ್ರದ ಬಳಿ ಕಣ್ಣೀರು ಹಾಕಿದ್ದಾರೆ. ನಂತರ ವಿದ್ಯಾರ್ಥಿನಿಯರನ್ನು ಸಮಾಧಾನ ಮಾಡಿದ ಪೊಲೀಸರು, ಇನ್ನೊಂದು ಆಟೋದ ವ್ಯವಸ್ಥೆ ಮಾಡಿ ಸಂಪಿಗೆ ಸಿದ್ದೇಶ್ವರ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಜೊತೆಗೆ ಪರೀಕ್ಷೆಗೆ ತಡವಾಗಿಲ್ಲ ನೀವು ಸರಿಯಾದ ಸಮಯಕ್ಕೆ ಹೋಗುತ್ತೀರಾ ಧೈರ್ಯವಾಗಿರಿ ಎಂದು ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಆತ್ಮಸ್ಥೆರ್ಯ ತುಂಬಿ ಕಳುಹಿಸಿದ್ದಾರೆ.