ವಾಷಿಂಗ್ಟನ್: ವಿಮಾನವೊಂದು ಹಾರಾಡುತ್ತಿರುವಾಗಲೇ ಇಂಜಿನ್ ಹೊತ್ತಿ ಉರಿದ ಭಯಾನಕ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ಯುನೈಟೆಡ್ ಏರ್ ಲೈನ್ಸ್ ವಿಮಾನವು 231 ಮಂದಿ ಪ್ರಯಾಣಿಕರು ಮತ್ತು 10 ಜನ ಸಿಬ್ಬಂದಿಗಳೊಂದಿಗೆ ಡೆನ್ವರ್ ನಿಂದ ಹೊನಲುಲುಗೆ ಹೊರಟಿತ್ತು, ಮಾರ್ಗ ಮಧ್ಯದಲ್ಲಿ ಏಕಾಏಕಿ ವಿಮಾನದ ಇಂಜಿನ್‍ನಲ್ಲಿ ಬೆಂಕಿಯ ಕೆನ್ನಾಲಿಗೆ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೋರ್ವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.
Advertisement
it's a little on fire it's still good it's still good#UA328
(video via @michaelagiulia) pic.twitter.com/K5r7TE4DJg
— Paul Byrne (@ThePlanetaryGuy) February 20, 2021
Advertisement
ವಿಮಾನದ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡು, ನಡುಗಲು ಪ್ರಾರಂಭಿಸಿದಾಗ ತಕ್ಷಣ ಫೈಲಟ್ ತುರ್ತು ಭೂಸ್ಪರ್ಶ ಮಾಡಿ 241 ಜನರ ಪ್ರಾಣವನ್ನು ರಕ್ಷಿಸಿದ್ದಾರೆ.
Advertisement
ಡೆನ್ವರ್ ನಿಂದ ಹೊನಲುಲುಗೆ ಹೊರಟಿದ್ದ ವಿಮಾನ ಯುಎ 328 ಏಫ್‍ನಲ್ಲಿ ಕಾಣಿಸಿಕೊಂಡ ಇಂಜಿನ್ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಯಾವುದೇ ಸಾವುನೋವುಗಳು ಸಂಭವಿಸದೆ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನಯಾನದ ಆಡಳಿತ ಮಂಡಳಿ ಟ್ವಿಟ್ಟರ್ ನಲ್ಲಿ ತಿಳಿಸಿದೆ.
Life in Broomfield today
courtesy: Steve Frye pic.twitter.com/jOSWCz2sjx
— Chris Vanderveen (@chrisvanderveen) February 20, 2021
ವಿಮಾನದ ಇಂಜಿನ್ ಹೊತ್ತಿ ಉರಿದ ಪರಿಣಾಮವಾಗಿ ಬಿಡಿಭಾಗಗಳು ಕಟ್ಟಡಗಳ ಮಧ್ಯೆ, ಮತ್ತು ಮೈದಾನಕ್ಕೆ ಬಿದ್ದಿದೆ. ವಿಮಾನದಲ್ಲಿ ಕಾಣಿಸಿಕೊಂಡ ದೋಷವನ್ನು ಪರೀಕ್ಷಿಸಲು ರಾಷ್ಟ್ರೀಯ ಸಾರಿಗೆ ಸುರಕ್ಷಾ ಮಂಡಳಿ ತಯಾರಿ ನಡೆಸಿದೆ.