– ಫೋಟೋ, ಹೆಸರು ಇದೆ ಅಂತ ಅಂಬುಲೆನ್ಸ್ ಸೀಜ್
– ತಹಶೀಲ್ದಾರ್, ಶಾಸಕರ ಕ್ರಮಕ್ಕೆ ದಾನಿ ರೇವಣ್ಣ ಆಕ್ರೋಶ
ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಜನರಿಗೆ ಕೊರೊನಾ ಕಾಲದಲ್ಲಿ ಉಚಿತ ಸೇವೆಗೆಂದು ಸಮಾಜ ಸೇವಕ ಬಿ.ರೇವಣ್ಣ ಅವರು ಮೂರು ಅಂಬುಲೆನ್ಸ್ ಅನ್ನು ನೀಡಿದ್ದರು. ಆದರೆ ಇದೀಗ ಅಂಬುಲೆನ್ಸ್ ಗಳ ಮೇಲೆ ರೇವಣ್ಣ ಅವರ ಭಾವಚಿತ್ರವುಳ್ಳ ಸ್ಟಿಕರ್ ಇದೆ ಎಂದು ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಅವರು ಸೀಜ್ ಮಾಡಿದ್ದಾರೆ.
Advertisement
ಸದ್ಯ ಮಂಡ್ಯ ಜಿಲ್ಲೆಯಲ್ಲಿ ಅಂಬುಲೆನ್ಸ್ ಸಮಸ್ಯೆ ಎದುರಾಗಿದ್ದು, ಇದನ್ನು ನೀಗಿಸಲು ರೇವಣ್ಣ ಅವರು ಪಾಂಡವಪುರ ತಾಲೂಕಿನ ವ್ಯಾಪ್ತಿಯ ಜನರಿಗೆ ಉಚಿತವಾಗಿ ಅಂಬುಲೆನ್ಸ್ ಸೇವೆ ನೀಡಲು ಕಳೆದ ಐದು ದಿನಗಳ ಹಿಂದೆ ಮೂರು ಅಂಬುಲೆನ್ಸ್ ಗಳಿಗೆ ಚಾಲನೆ ನೀಡಿದ್ದರು. ಈ ವೇಳೆ ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಅವರೇ ಮೂರು ಅಂಬುಲೆನ್ಸ್ ಗಳಿಗೆ ಚಾಲನೆ ನೀಡಿದ್ದರು. ಇದೀಗ ತಹಶೀಲ್ದಾರ್ ಅವರೇ ಈ ಅಂಬುಲೆನ್ಸ್ ಗಳ ಮೇಲೆ ಬಿ.ರೇವಣ್ಣ ಅವರ ಭಾವಚಿತ್ರ ಮತ್ತು ಅವರ ಹೆಸರು ಇದೆ ಎಂದು ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಅಂಬುಲೆನ್ಸ್ ಗಳನ್ನು ಸೀಜ್ ಮಾಡಿದ್ದಾರೆ. ಇದನ್ನೂ ಓದಿ: `ಆಮ್ಲಜನಕ’ ಸರ್ಕಾರವೇ ಸುಳ್ಳಿನ ಮಂಟಪದಿಂದ ಕೆಳಗಿಳಿಸಿ ನಡೆಸೆನ್ನನು..!
Advertisement
Advertisement
ಪ್ರಮೋದ್ ಪಾಟೀಲ್ ಅವರು ಮೇಲುಕೋಟೆ ಕ್ಷೇತ್ರದ ಶಾಸಕ ಪುಟ್ಟರಾಜು ಅವರ ಒತ್ತಡದಿಂದ ಈ ಕೆಲಸವನ್ನು ಮಾಡಿದ್ದಾರೆ. ಪುಟ್ಟರಾಜು ಅವರು ನನ್ನ ಏಳಿಗೆಯನ್ನು ಸಹಿಸಲಾಗದೇ ನನ್ನ ಅಂಬುಲೆನ್ಸ್ ಗಳನ್ನು ಸೀಜ್ ಮಾಡಲು ತಹಶೀಲ್ದಾರ್ ಮೇಲೆ ಒತ್ತಡ ಹಾಕಿದ್ದಾರೆ ಎಂದು ಸಮಾಜ ಸೇವಕ ರೇವಣ್ಣ ಪುಟ್ಟರಾಜು ಅವರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಆಮ್ಲಜನಕ ಪೂರೈಸುವುದಕ್ಕೆ ಸರ್ಕಾರ ಏದುಸಿರು ಬಿಡುತ್ತಿದೆ: ಎಚ್‍ಡಿಕೆ
Advertisement
ನಾನು ಮೂರು ಅಂಬ್ಯುಲೆನ್ಸ್ ನೀಡಿದ್ದರೆ ಪುಟ್ಟರಾಜು ಅವರು 30 ಅಂಬುಲೆನ್ಸ್ ನೀಡಿ ಸಮಾಜ ಸೇವೆ ಮಾಡಬೇಕು. ಅದನ್ನು ಬಿಟ್ಟು ಫೋಟೋ ಇದೆ ಹೆಸರು ಇದೆ ಎಂಬ ಕಾರಣಗಳನ್ನು ಹೇಳಿ ಅಧಿಕಾರಿಗಳಿಗೆ ಒತ್ತಡ ಹಾಕಿ ಸೀಜ್ ಮಾಡುವ ಕೆಲಸ ಮಾಡಬಾರದು. ರಾಜ್ಯದ ಹಲವು ಜಿಲ್ಲೆಯಲ್ಲಿ ಮೂರು ಪಕ್ಷದ ಮುಖಂಡರು ಅವರು ನೀಡಿರುವ ಅಂಬುಲೆನ್ಸ್ ಗಳ ಮೇಲೆ ಅವರವರ ಭಾವಚಿತ್ರ ಹಾಗೂ ಹೆಸರುಗಳನ್ನು ಹಾಕಿಸಿಕೊಂಡಿದ್ದಾರೆ. ಅಲ್ಲಿ ಅವುಗಳನ್ನು ಸೀಜ್ ಮಾಡಿಲ್ಲ. ಆದರೆ ಪಾಂಡವಪುರದಲ್ಲಿ ಮಾತ್ರ ಹೊಸ ಕಾನೂನು ಇದೆ. ಇದು ರಾಜಕೀಯ ದ್ವೇಷಕ್ಕಾಗಿ ಪುಟ್ಟರಾಜು ಅವರು ಈ ರೀತಿಯ ಕೆಲಸ ಮಾಡಿರುವುದು ಸರಿಯಲ್ಲಿ ಎಂದು ಬಿ.ರೇವಣ್ಣ ಅವರು ಆಕ್ರೋಶ ಹೊರಹಾಕಿದ್ದಾರೆ.