ಮಸ್ಕರಾ ಕಣ್ಣಿನ ರೆಪ್ಪೆಗಳನ್ನು ಸುಂದರವಾಗಿ ಕಾಣಿಸಲು ಬಳಸುವ ಸೌಂದರ್ಯ ವರ್ಧಕ (ಮೇಕಪ್) ವಸ್ತುಗಳಲ್ಲಿ ಒಂದು. ಮಸ್ಕರಾದಲ್ಲಿ ಒಂದೇ ವಿಧವಿಲ್ಲ. ವಿಭಿನ್ನ ಟೆಕಶ್ಚರ್, ಉದ್ದ ಮತ್ತು ಬಣ್ಣಗಳ ಮಸ್ಕರಾಗಳಿವೆ. ಮಸ್ಕರಾ ಹಾಕುವ ಮುನ್ನ ನೀವು ಅದನ್ನು ಹೇಗೆ ಹಾಕಿಕೊಳ್ಳಲು ನೀವು ಯಾವತ್ತಾದರೂ ಟ್ರೈ ಮಾಡಿದ್ದರೆ, ನಿಮ್ಮ ಐ ಲ್ಯಾಶ್‍ಗೆ ಸೂಟ್ ಆಗುವಂತಹ ಮಸ್ಕರಾ ಯಾವುದು? ಮಸ್ಕರಾ ಬ್ರಷ್ ಗಾತ್ರ ಮತ್ತು ಆಕಾರ ಹೇಗಿರಬೇಕು ಎಂದು ಕೂಡ ತಿಳಿದುಕೊಂಡಿರುತ್ತೀರಾ. ಮಸ್ಕಾರ್ ಕುರಿತಂತೆ ಹಲವು ಮಂದಿಗೆ ಏನು ತಿಳಿದಿರುವುದಿಲ್ಲ. ಹಾಗಾಗಿ ಮಸ್ಕರಾ ಸಂಬಂಧಸಿದ ಕೆಲವು ಟಿಪ್ಸ್ ಗಳು ಈ ಕೆಳಗಿನಂತಿವೆ.
Advertisement
ಯಾವ ರೀತಿ ಮಸ್ಕರಾವನ್ನು ಆಯ್ಕೆ ಮಾಡಬೇಕು?
ನಿಮ್ಮ ಐ ಲ್ಯಾಶ್‍ಗೂ ಇನ್ನೊಬ್ಬರ ಐ ಲ್ಯಾಶ್‍ಗೂ ಬಹಳ ವ್ಯತ್ಯಾಸವಿರುತ್ತದೆ. ಕೆಲವರ ರೆಪ್ಪೆಯ ಕೂದಲು ನೈಸರ್ಗಿಕವಾಗಿ ಕರ್ಲಿಯಾಗಿರುತ್ತದೆ. ಇನ್ನೊಂದಷ್ಟು ಜನ ಸಣ್ಣ, ದಪ್ಪ ಮತ್ತು ಕಡಿಮೆ ರೆಪ್ಪೆ ಕೂದಲುಗಳನ್ನು ಹೊಂದಿರುತ್ತಾರೆ. ಹಾಗಾಗಿ ನಿಮ್ಮ ಐ ಲ್ಯಾಶ್‍ಗೆ ಸರಿ ಹೊಂದುವಂತಹ ಮಸ್ಕರಾಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಮಸ್ಕರಾ ಐ ಲ್ಯಾಶ್‍ನ್ನು ದಪ್ಪ, ಉದ್ದ, ಕರ್ಲಿಗೊಳಿಸಿ ಐ ಲ್ಯಾಶ್‍ಗೆ ಮತ್ತಷ್ಟು ಬಣ್ಣ ನೀಡುತ್ತದೆ. ಮಸ್ಕರಾಗಳಲ್ಲಿ ವಾಟರ್ ಪ್ರೂಫ್ ಮತ್ತು ವಾಲ್ಯೂನೈಸಿಂಗ್ ನಂತಹ ವಿಭಿನ್ನ ಶೈಲಿಯ ಮಸ್ಕರಾಗಳಿವೆ. ನೀವು ರಚಿಸಲು ಬಯಸುವ ಡಿಸೈನ್ ನೀವು ಆಯ್ಕೆ ಮಾಡಿಕೊಳ್ಳುವ ಮಸ್ಕರಾದ ಮೇಲೆ ಆಧಾರಿತವಾಗಿರುತ್ತದೆ.
Advertisement
Advertisement
Advertisement
ಮಸ್ಕರಾದ ಕಡ್ಡಿ(ಬ್ರಶ್) ಆಕಾರ ಹೇಗಿರಬೇಕು?
ಮಸ್ಕರಾ ಹಾಕಲು ಕ್ಲಾಸಿಕ್ ಐ ಲ್ಯಾಶ್ ಉತ್ತಮ. ನಿಮ್ಮ ಐ ಲ್ಯಾಶ್ ದಪ್ಪವಾಗಿದ್ದರೆ ಕ್ಲಾಸಿಕ್ ಮಸ್ಕರಾ ಬಳಸಿ. ಅದು ನಿಮ್ಮ ಐ ಲ್ಯಾಶ್ ಸುಂದರಗೊಳಿಸುವುದರ ಜೊತೆಗೆ ನಿಮ್ಮ ಕಣ್ಣಿನ ಒಳ ಮೂಲೆ ಮತ್ತು ಕಣ್ಣಿನ ಮೇಲಿನ ತುದಿಯನ್ನು ತಲುಪಲು ಸಹಾಯ ಮಡುತ್ತದೆ ಹಾಗೂ ಕೇಂದ್ರಿಕರಿಸುತ್ತದೆ. ಅಲ್ಲದೆ ಎರಡು ಮತ್ತು ಮೂರು ಕೋಟ್ ಲೇಯರ್ ಹಾಕಿ ಇದು ಐ ಲ್ಯಾಶ್‍ನನ್ನು ದಟ್ಟವಾಗಿ ಕಾಣಿಸುವಂತೆ ಮಾಡುತ್ತದೆ.
ರೆಪ್ಪೆ ಕೂದಲು ಕರ್ಲಿ ಆಕಾರ ಹೇಗೆ ಮಾಡುವುದು?
ನಿಮ್ಮ ಐ ಲ್ಯಾಶ್‍ಗೆ ಕರ್ಲ್ ಶೇಪ್ ನೀಡಬೇಕಾದರೆ, ನೀವು ಕರ್ಲ್ ಬ್ರಶ್ ಮಸ್ಕರಾವನ್ನು ಬಳಸಬೇಕಾಗುತ್ತದೆ. ಈ ಮಸ್ಕರಾವು ನಿಮ್ಮ ಐ ಲ್ಯಾಶ್‍ನನ್ನು ಕರ್ಲ್ ಆಕಾರಗೊಳಿಸುತ್ತದೆ. ಕರ್ಲಿಂಗ್ ಆಕಾರವಲ್ಲದ ಮಸ್ಕರಾವನ್ನು ಬಳಸಿದರೆ, ನೀವು ಐ ಲ್ಯಾಶ್ ಕರ್ಲ್ ಮಾಡಿದರೂ ಕೂಡ ಅದು ಮತ್ತೆ ನೇರ ಬಿಡುತ್ತದೆ. ಆದ್ದರಿಂದ ನಿಮ್ಮ ಐ ಲ್ಯಾಶ್‍ನ್ನು ಯಾವ ಮಸ್ಕರಾ ಸುಂದರವಾಗಿಸುತ್ತದೆ ಎಂಬುವುದರ ಕುರಿತು ಹೆಚ್ಚು ಗಮನ ನೀಡಿ.
ಮಸ್ಕರಾವನ್ನು ಹೇಗೆ ರೆಪ್ಪೆಗೆ ಲೇಪಿಸಬೇಕು?
ಕಣ್ಣಿನಿಂದ ಮೇಲಕ್ಕೆ ನೋಡುತ್ತಾ ಮಸ್ಕರಾದ ಬ್ರಶ್ ಐ ಲ್ಯಾಶ್ ತುದಿಯವರೆಗೂ ಹಿಂದಕ್ಕೆ ಮತ್ತು ಮುಂದಕ್ಕೆ ಸರಿಸಬೇಕು. ನಿಮ್ಮ ಐ ಲ್ಯಾಶ್ ಮೂಲವನ್ನು ಕೋಟ್ ಮಾಡಿ ತುದಿಯವರೆಗೂ ಬ್ರಶ್ ಎಳೆದು, ರೆಪ್ಪೆ ಕೂದಲಿನ ಪ್ರತಿಯೊಂದು ಭಾಗಕ್ಕೂ ಲೇಪಿಸಬೇಕು.