ಚಿಕ್ಕಬಳ್ಳಾಪುರ: ಲಾಕ್‍ಡೌನ್ ಹಿನ್ನೆಲೆ ನಡೆದುಕೊಂಡು ಆಸ್ಪತ್ರೆಗೆ ಹೋಗುವಾಗ ನಡುರಸ್ತೆಯಲ್ಲಿ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ತನ್ನ ಬೈಕ್ ಮೂಲಕ ಪೊಲೀಸ್ ಪೇದೆ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ.
Advertisement
ಗೂಳೂರು ಗ್ರಾಮದಿಂದ ಬಾಗೇಪಲ್ಲಿ ಪಟ್ಟಣಕ್ಕೆ ಬಂಧಿದ್ದ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಆಟೋದಲ್ಲಿ ಬಾಗೇಪಲ್ಲಿ ಪಟ್ಟಣಕ್ಕೆ ಬಂದಿದ್ದರು. ಆದರೆ ಲಾಕ್‍ಡೌನ್ ಹಿನ್ನೆಲೆ ಪಟ್ಟಣದಲ್ಲಿ ಪೊಲೀಸ್ ನಾಕಬಂದಿ ಕಂಡು ಆಟೋ ಚಾಲಕ ದೂರದಲ್ಲಿ ಅವರನ್ನು ಇಳಿಸಿ ಹೊರಟುಹೋಗಿದ್ದ.
Advertisement
Advertisement
ಈ ವೇಳೆ ನಡೆದುಕೊಂಡು ಆಸ್ಪತ್ರೆಗೆ ಹೋಗುವಾಗ ಮಹಿಳೆ ಕುಸಿದುಬಿದ್ದಿದ್ದಾಳೆ.ಈ ವೇಳೆ ಕರ್ತವ್ಯ ನಿರತ ಬಾಗೇಪಲ್ಲಿ ಪೊಲೀಸ್ ಠಾಣೆಯ ಕಾನಸ್ಟೇಬಲ್ ಧನಂಜಯ ಮಹಿಳೆಯನ್ನು ತನ್ನ ಬೈಕ್‍ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಬಿಟ್ಟಿದ್ದಾರೆ. ಒಂದು ಕಡೆ ಲಾಕ್‍ಡೌನ್ ವೇಳೆ ರಸ್ತೆಗೆ ಇಳಿತಿರೋ ಜನರಿಗೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ ಅಂತ ಪೊಲೀಸರ ಬಗ್ಗೆ ಹರಿಹಾಯ್ತಿದ್ದಾರೆ. ಆದರೆ ಪೊಲೀಸರು ಸಹ ಮನುಷ್ಯರೇ ಅವರಲ್ಲಿ ಮಾನವೀಯತೆ ಇದೆ ಎನ್ನುವುದು ಪೊಲೀಸ್ ಪೇದೆಯ ಸಮಯಪ್ರಜ್ಣೆ ಮಾನವೀಯತೆ ಕಾರ್ಯ ಎಲ್ಲರು ಮೆಚ್ಚುವಂತದ್ದಾಗಿದೆ.