ಬೆಂಗಳೂರು: ಬಿಗ್‍ಬಾಸ್ ಕಳಿಸುವ ಅವಾರ್ಡ್‍ಗಳಲ್ಲಿ ಶುಭಾ ಪೂಂಜಾ ತಮ್ಮ ಅವಾರ್ಡ್ ನೋಡಿ ಸಂತೋಷದಿಂದ ಕವಿತೆಯನ್ನು ಹೇಳಿದ್ದಾರೆ.
ಮನೆಯ ಸದಸ್ಯರು ಇದು ಯಾರ ಅವಾರ್ಡ್ ಎಂದು ಗುರುತಿಸುವ ಟಾಸ್ಕ್ ಒಂದನ್ನು ಎರಡನೇಯ ದಿನ ಬಿಗ್ ಬಾಸ್ ನೀಡಿದ್ದರು. ಈ ವೇಳೆ ಪ್ರಶಾಂತ್ ಸಂಬರ್ಗಿ ತಪ್ಪಾದ ಹೆಸರನ್ನು ಹೇಳಿದ್ದಾರೆ. ಆಗ ಶುಭಾ ಪೂಂಜಾ ಇದು ನಂದೇ ಎಂದು ಕುಣಿಯುತ್ತಾ ಬಂದು ಕವಿತೆಯನ್ನು ಹೇಳಿದ್ದಾರೆ. ಇದು ನಂದೇ.. ನಾನು ಅವಾರ್ಡ್ ವಿನ್ ಮಾಡಿದೀನಿ ಒಂದೇ.. ಹೇಳನಾ ಮುಂದೆ.. ಎಂದು ಒಂದು ಕವಿತೆಯನ್ನು ಹೇಳಿದ್ದಾರೆ. ಮನೆಯವರು ಶುಭಾ ಅವರ ಕವಿತೆ ಮೆಚ್ಚಿ ಮನಬಿಚ್ಚಿ ನಕ್ಕು ಖುಷಿಪಟ್ಟಿದ್ದಾರೆ.
ನಾನು ನಟಿಸಿರುವ ಮೊಗ್ಗಿನ ಮನಸ್ಸು ಸಿನಿಮಾಗೆ ಈ ಅವಾರ್ಡ್ ಸಿಕ್ಕಿರುವುದು. ಚಿಕ್ಕ ಮಗುವನ್ನು ನೋಡಿ ಬರೆದಿರುವ ಪಾತ್ರವಾಗಿತ್ತು. ನಾನು ನಂದೆ ಆಗಿರುವ ಮುಗ್ಧತೆಯಿಂದ ಪಾತ್ರವನ್ನು ಮಾಡಿದ್ದೆನು. ಅವಾರ್ಡ್ ಬರುತ್ತೆ ಎಂದು ನೀರಿಕ್ಷೆ ಮಾಡಿರಲ್ಲಿಲ್ಲ. ಈ ಅವಾರ್ಡ್ ಸಿಕ್ಕ ನಂತರ ಒಂದು ಅವಾರ್ಡ್ ಸಿಕ್ಕಿಲ್ಲ ಎಂದು ಹೇಳುತ್ತಾ ತನ್ನ ಬಗ್ಗೆ ತಾವೇ ಹಾಸ್ಯ ಮಾಡಿಕೊಂಡಿದ್ದಾರೆ.
ಇಲ್ಲಿ ಇರುವ ಎಲ್ಲರೂ ಕಷ್ಟಪಟ್ಟು ಬಂದಿದ್ದೇವೆ. ಪ್ರತಿಯೊಬ್ಬರ ಹಿಂದೆ ನೋವಿನ ಕಥೆ ಇದೆ. ಅಷ್ಟು ಸುಲಭವಾಗಿ ಎಲ್ಲರನ್ನು ಜಡ್ಜ್ ಮಾಡಬೇಡಿ. ಪ್ರತಿಯೊಬ್ಬರು ಅವರದ್ದೇ ಆಗಿರುವ ಕ್ಷೇತ್ರಗಳಲ್ಲಿ ಕಷ್ಟಪಟ್ಟಿರುತ್ತಾರೆ. ನಿಮ್ಮೆಲ್ಲರ ಪ್ರೀತಿ ನಮ್ಮೆಲ್ಲರ ಮೇಲೆ ಇರಲಿ. ನನಗೆ ಒಂದೇ ಅವಾರ್ಡ್ ಬಂದಿದೇ ದಯವಿಟ್ಟು ಇಲ್ಲಿ ಏನಾದರೂ ಅವಾರ್ಡ್ ಸಿಕ್ಕರೆ ನನಗೆ ಕೊಡಿ ಎಂದು ಶುಭಾ ನಗೆ ಚಟಾಕೆಯನ್ನು ಹಾರಿಸಿದ್ದಾರೆ.
ಬಿಗ್ ಮನೆಯ ಸೆಲೆಬ್ರಿಟಿಗಳು ಅವರ ಜೀವದಲ್ಲಿ ಮಾಡಿರುವ ಸಾಧನೆಯ ಹಿಂದಿನ ನೆನಪುಗಳನ್ನು ಮರುಕಳಿಸುವ ಒಂದು ಚಟುವಟಿಕೆಯನ್ನು ನೀಡಿದ್ದರು. ಈ ವೇಳೆ ತಮಗೆ ಬಂದಿರುವ ಪ್ರಶಸ್ತಿಗಳನ್ನು ನೋಡಿ ಸೆಲೆಬ್ರಿಟಿಗಳು ಸಂತೋಷ ಪಟ್ಟಿದ್ದಾರೆ. ಅವರ ಸಾಧನೆಯ ಹಿಂದಿನ ಕಥೆಯನ್ನು ನೆನೆದು ಕಣ್ಣೀರು ಇಟ್ಟಿದ್ದಾರೆ.