– ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ
ಬೆಂಗಳೂರು: ಹಿರಿಯ ನಟಿ ಜಯಂತಿ ಅವರು ನನಗೆ ತಾಯಿಯ ಸ್ವರೂಪವೆಂದು ನಟಿ ತಾರಾ ಕಣ್ಣೀರಿಟ್ಟಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇನ್ನೂ ಹೆಚ್ಚು ಆರೋಗ್ಯವನ್ನು ಕೊಟ್ಟಿದ್ದಾರೆ ಚೆನ್ನಾಗಿರುತ್ತಿತ್ತು. ಅವರನ್ನು ಕಳೆದುಕೊಂಡು ನಾವು ನಿಜವಾಗಲು ಬಡವರಾಗಿದ್ದೇವೆ. ಅವರು ನನಗೆ ತಾಯಿ ಸ್ವರೂಪಿ. ಅವರು ಸಿಕ್ಕಗೆಲ್ಲ ನನಗೆ ನೇಲ್ ಪಾಲಿಶ್, ಲಿಪ್ಸ್ಟಿಕ್ ಹಾಕು ಎಂದು ಕೇಳುತ್ತಿದ್ದರು. ಆಗ ನನಗೆ ನಗು ಬರುತ್ತಿತ್ತು. ಅಷ್ಟು ಖುಷಿಯಿಂದ ಇದ್ದವರನ್ನು ಈ ಪರಿಸ್ಥಿತಿಯಲ್ಲಿ ನೋಡಲು ತುಂಬಾ ಕಷ್ಟವಾಗುತ್ತೆ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ವೈದ್ಯರು ಬದುಕುವುದು ಕಷ್ಟ ಎಂದಿದ್ದರೂ ಅಭಿಮಾನಿಗಳ ಹಾರೈಕೆಯಿಂದ ಗುಣವಾಗಿದ್ರು – ಮಗ ಕೃಷ್ಣಕುಮಾರ್
Advertisement
Advertisement
ಜಯಂತಿ ಅವರನ್ನು ಅಂತಿಮವಾಗಿ ನಮ್ಮ ಮನೆಯಲ್ಲಿ ನೋಡಿದ್ದೆ. ಏಕೆಂದರೆ ನಮ್ಮ ಮನೆಯಲ್ಲಿ ಒಂದು ಪೂಜೆಯನ್ನು ಏರ್ಪಡಿಸಿದ್ದೆವು. ಈ ಕಾರಣಕ್ಕೆ ಅಮ್ಮ ಅಲ್ಲಿಗೆ ಬಂದಿದ್ದರು. ಕೊರೊನಾ ಇದ್ದ ಕಾರಣ ನಾವು ಹೆಚ್ಚು ಜನರನ್ನು ಕರೆದಿಲ್ಲ. ಅವರಿಗೆ ನಮ್ಮ ಮನೆಯ ಪೂಜೆಗೆ ಬರುವುದು ತುಂಬಾ ಇಷ್ಟ. ಅವರಿಗೆ ನಮ್ಮ ಮನೆಯ ಅಡುಗೆ, ಊಟ ಎಂದರೆ ತುಂಬಾ ಇಷ್ಟ. ಒಂದು ವೇಳೆ ನಾನು ಅವರನ್ನು ಪೂಜೆಗೆ ಕರೆದಿಲ್ಲವೆಂದರೆ ಅವರು ನನಗೆ ಕರೆ ಮಾಡಿ ಬೈಯುತ್ತಿದ್ದರು ಎಂದು ನೆನಪುಗಳನ್ನು ಹಂಚಿಕೊಂಡರು. ಇದನ್ನೂ ಓದಿ: ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಕಲಾವಿದೆ ಜಯಂತಿ: ಗಣ್ಯರ ಸಂತಾಪ
Advertisement
ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನ ಏರ್ಪಡಿಸಬೇಕು ಎಂದು ಕುಟುಂಬದವರು ಮತ್ತು ಕಲಾ ಕುಟುಂಬದವರು ತೀರ್ಮಾನಿಸಿ ಸರ್ಕಾರಕ್ಕೆ ಅನುಮತಿ ಕೊಡಿ ಎಂದು ಕೇಳಿದ ತಕ್ಷಣ ಸರ್ಕಾರ ಅನುಮತಿಯನ್ನು ನೀಡಿದೆ. ಇಲ್ಲಿನ ಪುರೋಹಿತರು ಬಂದು ಪೂಜಾ ಕೈಂಕರ್ಯಗಳನ್ನು ಮುಗಿಸಿದ ಕೊಡಲೇ ನಾವು ಕಲಾಕ್ಷೇತ್ರಕ್ಕೆ ಜಯಂತಿ ಅಮ್ಮನವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತೆ ಎಂದು ತಿಳಿಸಿದರು.
ಅವರ ಸಂಸ್ಕಾರ ಎಲ್ಲಿ, ಯಾವಾಗ ನಡೆಯುತ್ತೆ ಎಂದು ಅವರ ಪುತ್ರ ಕೃಷ್ಣ ಕುಮಾರ್ ಅವರು ನಿರ್ಧರಿಸಿ ಹೇಳುತ್ತಾರೆ. ಅವರನ್ನು ನಾನು ಮಾತ್ರವಲ್ಲ ಇಡೀ ಕನ್ನಡ ಚಲನಚಿತ್ರ ತಂಡ ಮತ್ತು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಾರೆ ಎಂದರು.