ಅರ್ಬನ್ ಕಿಸಾನ್ ಮೂಲಕ ತರಕಾರಿ ಬೆಳೆಯಲು ಮುಂದಾದ ಸಮಂತಾ

Public TV
1 Min Read
samantha

ಹೈದರಾಬಾದ್: ಲಾಕ್‍ಡೌನ್ ಹೊತ್ತಲ್ಲಿ ಬಹುತೇಕ ನಟ, ನಟಿಯರು ಮನೆಯಲ್ಲೇ ಕಾಲ ಕಳೆಯುತ್ತಿದ್ದು, ವಿಭಿನ್ನ ರೀತಿಯ ಆಲೋಚನೆಗಳನ್ನು ಮಾಡುತ್ತಿದ್ದಾರೆ. ಹಲವರು ತಮ್ಮದೆಯಾದ ಚಟುವಟಿಕೆಗಳಲ್ಲಿ ತೊಡಗಿದ್ದು, ಇನ್ನೂ ಹಲವರು ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಆದರೆ ಟಾಲಿವುಡ್ ಬೆಡಗಿ ಸಮಂತಾ ಅಕ್ಕಿನೇನಿ ಮಹತ್ವದ ಕೆಲಸವೊಂದನ್ನು ಆರಂಭಿಸಿದ್ದಾರೆ.

samantha

ಟಾಲಿವುಡ್ ಬೆಡಗಿ ಸಮಂತಾ ಅಕ್ಕಿನೇನಿ ಇಷ್ಟು ದಿನ ಕುಟುಂಬದ ಕೆಲಸಗಳು, ಸಮಾರಂಭಗಳಲ್ಲಿ ಫುಲ್ ಬ್ಯುಸಿಯಾಗಿದ್ದರು. ಇದರ ನಡುವೆಯೇ ತಮ್ಮಿಷ್ಟದ ಕೆಲಸ ಪ್ರಾರಂಭಿಸುವ ಕುರಿತು ಪ್ರಯತ್ನ ನಡೆಸಿದ್ದರು. ಇದೀಗ ಅದು ಅಂತಿಮ ಹಂತ ತಲುಪಿದ್ದು, ಅದೇ ಕೆಲಸದಲ್ಲಿ ಮಗ್ನರಾಗಿದ್ದಾರೆ. ಅಷ್ಟಕ್ಕೂ ಆ ಕೆಲಸ ಯಾವುದು ಅಂತೀರಾ ಅದೇ ಅರ್ಬನ್ ಕಿಸಾನ್. ಹೌದು ಅರ್ಬನ್ ಕಿಸಾನ್ ಎನ್ನುವ ಹೊಸ ಪರಿಕಲ್ಪನೆ ಮೂಲಕ ಕೃಷಿ ಮಾಡಲು ಮುಂದಾಗಿದ್ದಾರೆ.

Samantha Akkineni in a beige silk sari 1366x768 1

ಸಮಂತಾ ರೈತ ಮಹಿಳೆಯಾಗುವ ಕನಸು ಕಂಡಿದ್ದರಂತೆ, ಇದನ್ನು ನನಸಾಗಿಸಿಕೊಳ್ಳಲು ಇದೀಗ ಮುಂದಾಗಿದ್ದಾರಾ ಎಂದು ಅಭಿಮಾನಿಗಳು ಯೋಚಿಸುತ್ತಿದ್ದಾರೆ. ಈ ಕುರಿತು ಈಗಾಗಲೇ ಎಲ್ಲ ತಯಾರಿ ನಡೆಸಿದ್ದು, ಅವರ ಟೆರಸ್ ಮೇಲೆಯೇ ತರಕಾರಿ ಬೆಳೆಯಲು ಮುಂದಾಗಿದ್ದಾರೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ವಿವಿಧ ಬಗೆಯ ತರಕಾರಿ ಗಿಡಗಳನ್ನು ಸಹ ತಂದಿದ್ದಾರೆ.

Samantha 2

ಇದು ಸಮಂತಾ ಅವರ ತುಂಬಾ ದಿನಗಳ ಯೋಜನೆ. ಆದರೆ ಇದಕ್ಕೆ ಸಮಯ ಕೂಡಿ ಬಂದಿರಲಿಲ್ಲ. ಇದೀಗ ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಕಾಲ ಕಳೆಯುತ್ತಿರುವುದರಿಂದ ಕೃಷಿ ಮಾಡಲು ಮುಂದಾಗಿದ್ದಾರೆ. ಇದರ ಭಾಗವಾಗಿ ಟೆರಸ್ ಗಾರ್ಡನಿಂಗ್ ಬಗ್ಗೆ ತರಬೇತಿ ಸಹ ಪಡೆದಿದ್ದು, ಅದರ ಪ್ರಕಾರ ಇದೀಗ ಗಿಡಗಳನ್ನೂ ತರಿಸಿದ್ದಾರೆ. ಮನೆಯ ಟೆರಸ್ ಮೇಲೆ ಕೃಷಿ ಮಾಡಲು ಸಿದ್ಧರಾಗಿದ್ದು, ಈ ಕುರಿತು ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Samantha 6

ಈಗಾಗಲೇ ಹಲವು ಸೆಲೆಬ್ರೆಟಿಗಳು ತಮ್ಮ ಮನೆಗೆ ಬೇಕಾಗುವಷ್ಟು ತರಕಾರಿ ಬೆಳೆಯುತ್ತಿದ್ದು, ನಟಿಯರಾದ ಶಿಲ್ಪಾ ಶೆಟ್ಟಿ, ಜೂಹಿ ಚಾವ್ಲಾ ಸೇರಿದಂತೆ ಹಲವರು ಈ ಕಾರ್ಯದಲ್ಲಿ ತೊಡಗಿದ್ದಾರೆ. ಇದೀಗ ಸಮಂತಾ ಸಹ ತರಕಾರಿ ಬೆಳೆಯಲು ಮುಂದಾಗಿದ್ದಾರೆ. ಈ ಸಂತಸದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *