ಬೆಂಗಳೂರು: ಕೆ.ಆರ್. ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಸರಗಳ್ಳತನ ಪ್ರಕರಣ ನಡೆದಿದ್ದು, ಆರೋಪಿಗಳನ್ನು ಅರೆಸ್ಟ್ ಮಾಡುವುದಕ್ಕೆಂದು ಪೊಲೀಸರು ಮುಂದಾದಾಗ ಸೈನೈಡ್ ತಿಂದು ಆರೋಪಿ ಸಾವನ್ನಪ್ಪಿದ್ದಾನೆ.
ಆಂಧ್ರದ ಮದನಪಲ್ಲಿ ಮೂಲದ ಶಂಕರ್ ಮೃತ ಆರೋಪಿ. ಶಂಕರ್ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ. ಆಂಧ್ರದಿಂದ ಬೆಂಗಳೂರಿಗೆ ಬರುತ್ತಿದ್ದ ಶಂಕರ್ ಮತ್ತು ಚಂದ್ರಶೇಖರ್ ಎಂಬವರ ಜೊತೆ ಸರಗಳ್ಳತನ ಮಾಡುತ್ತಿದ್ದನು.
ಈ ಆರೋಪಿಗಳ ಬೆನ್ನು ಹತ್ತಿದ್ದ ಕೆ.ಆರ್ ಪುರಂ ಪೊಲೀಸರಿಗೆ ಆರೋಪಿಗಳು ಹೊಸಕೋಟೆ ಬಳಿಯ ಪಿಲ್ಲಗುಂಪಾದ ದೇವಾಲಯಕ್ಕೆ ಬರುತ್ತಿರುವ ಮಾಹಿತಿ ಸಿಕ್ಕಿದೆ. ಕಳ್ಳತನಕ್ಕೂ ಮೊದಲು ದೇವಾಲಯಕ್ಕೆ ಆರೋಪಿಗಳು ತೆರಳಿ ಕೈ ಮುಗಿದು ಬರುತ್ತಿದ್ದರು. ಹೀಗಾಗಿ ದೇವಾಲಯದ ಬಳಿ ಪೊಲೀಸರು ಕಾದು ಆರೋಪಿಗಳನ್ನು ಅರೆಸ್ಟ್ ಮಾಡಲು ಮುಂದಾಗಿದ್ದಾರೆ.ಇದನ್ನೂ ಓದಿ:ಹೆಡ್‍ಲೈಟ್ ಡಿಮ್ ಅಂಡ್ ಡಿಪ್ ಮಾಡದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ
ಈ ವೇಳೆ ಆರೋಪಿ ಶಂಕರ್ ಜೇಬಿನಲ್ಲಿದ್ದ ಸೈನೈಡ್ ಸೇವಿಸಿ ರಕ್ತಕಾರಿ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಆರೋಪಿ ಚಂದ್ರಶೇಖರನನ್ನ ಪೊಲೀಸರು ಬಂಧಿಸಿದ್ದಾರೆ. ಸದ್ಯ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ:ಠಾಣೆಗೆ ದೂರು ಕೊಡಲು ಬಂದ ಬಾಲಕಿಗೆ ಕಿರುಕುಳ – ಮಂಗಳೂರಿನ ಹೆಡ್ ಕಾನ್ಸ್‌ಟೇಬಲ್ ಅಂದರ್