ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಲಿರುವ ಜೋ ಬೈಡನ್ ಅವರಿಗೆ ಭಾರತೀಯ ಮೂಲದ ಅಮೆರಿಕನ್ನರು ಸಾಂಪ್ರದಾಯಿಕವಾಗಿ ರಂಗೋಲಿ ಮೂಲಕವಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ.
ಅಮೆರಿಕಾದ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅಧಿಕಾರವಧಿ ಮುಗಿಯುತ್ತಿದೆ. 46ನೇ ಅಧ್ಯಕ್ಷರಾಗುತ್ತಿರುವ ಜೋ ಬೈಡೆನ್ ಜನವರಿ 20 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಈ ವೇಳೆ ಸುಮಾರು 1800ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಜೋ ಬೈಡನ್ ಸ್ವಾಗತಕ್ಕೆ ರಂಗೋಲಿ ಬಿಡಿಸುತ್ತಿದ್ದಾರೆ. ರಂಗೋಲಿ ಬಿಡಿಸುವ ಕಾರ್ಯದಲ್ಲಿ ವಿದ್ಯಾರ್ಥಿಗಳು, ಜನಸಾಮಾನ್ಯರು, ಕಲಾವಿದರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
Advertisement
Advertisement
ಭಾರತೀಯರು ಆರೋಗ್ಯ ಮತ್ತು ಸಮೃದ್ಧಿಗಾಗಿ ಮನೆಯ ಮುಂದೆ ರಂಗೋಲಿಯನ್ನು ಹಾಕುತ್ತಾರೆ. ಜೋ ಬೈಡೆನ್ ಅಧಿಕಾರವಧಿ ಹೀಗೆ ಸಮೃದ್ಧವಾಗಿರಲಿ ಹಾಗೂ ವೈವಿಧ್ಯಮಯ ಸಂಸ್ಕ್ರತಿಗೆ ಪೂರಕವಾಗಿ ಆಡಳಿತ ನಿರ್ವಹಿಸಲಿ ಎಂದು ರಂಗೋಲಿ ಸ್ವಾಗತಕ್ಕೆ ಸಿದ್ಧಪಡಿಸಲಾಗುತ್ತಿದೆ. ಅಮೆರಿಕಾದ ಪೊಲೀಸರು ಕ್ಯಾಪಿಟಲ್ ಕಟ್ಟಡದ ಸುತ್ತ ರಂಗೋಲಿ ಚಿತ್ರ ಬಿಡಿಸಲು ಅನುಮತಿ ನೀಡಿದ್ದಾರೆ.
Advertisement