ಅಪರೂಪದ ಸಾಧನೆಯ ಸನಿಹದಲ್ಲಿ ಹಿಟ್‍ಮ್ಯಾನ್ ರೋಹಿತ್

Public TV
2 Min Read
rohith sharma

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಇಂದು ಟಫ್ ಫೈಟ್ ನಡೆಯುವ ನಿರೀಕ್ಷೆ ಇದೆ. ಮೊದಲ ಪಂದ್ಯದಲ್ಲಿ ಗೆಲುವು ಪಡೆದು 2ನೇ ಪಂದ್ಯದಲ್ಲಿ ಸೋಲುಂಡ ಕೊಹ್ಲಿ ಪಡೆ ಗೆಲ್ಲುವ ಒತ್ತಡದೊಂದಿಗೆ ಕಣಕ್ಕಿಳಿಯುತ್ತಿದೆ. ಇದೇ ಪಂದ್ಯದಲ್ಲಿ ಅಪರೂಪದ ಸಾಧನೆ ಮಾಡಲು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾಗೆ 10 ರನ್ ಗಳ ಅಗತ್ಯವಿದೆ.

virat kohli rohit sharma

ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 10 ರನ್ ಗಳಿಸಿದರೆ ಐಪಿಎಲ್ ನಲ್ಲಿ 5 ಸಾವಿರ ರನ್ ಗಳಿಸಿದ 3ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ, ಚೆನ್ನೈ ತಂಡದ ಸುರೇಶ್ ರೈನಾ ಮಾತ್ರ ಇದುವರೆಗೂ ಈ ಸಾಧನೆ ಮಾಡಿದ್ದಾರೆ.

ಕೊಹ್ಲಿ 179 ಎಸೆತಗಳಲ್ಲಿ 37.42 ಸರಾಸರಿಯಲ್ಲಿ 5,427 ರನ್ ಗಳಿಸಿದ್ದು, ಸುರೇಶ್ ರೈನಾ 193 ಪಂದ್ಯದಲ್ಲಿ 33.33ರ ಸರಾಸರಿಯಲ್ಲಿ 5,368 ರನ್ ಗಳಿಸಿದ್ದಾರೆ. 190 ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ 31.78 ಸರಾಸರಿಯಲ್ಲಿ 4,990 ರನ್ ಗಳಿಸಿದ್ದಾರೆ.

ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ 6 ಸಿಕ್ಸರ್ ಬಾರಿಸಿದ್ದ ರೋಹಿತ್ ಶರ್ಮಾ ಐಪಿಎಲ್ ನಲ್ಲಿ 200 ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದರು. ರೋಹಿತ್ ಶರ್ಮಾ ಮತ್ತೊಂದು ಸಿಕ್ಸರ್ ಸಿಡಿಸಿದರೇ ಮುಂಬೈ ಇಂಡಿಯನ್ಸ್ ಪರ 150 ಸಿಕ್ಸರ್ ಸಿಡಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆಯಲಿದ್ದಾರೆ. ಕೀರನ್ ಪೊಲಾರ್ಡ್ ಮುಂಬೈ ಪರ 177 ಸಿಕ್ಸರ್ ಸಿಡಿಸಿದ್ದಾರೆ.

ಉಳಿದಂತೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೇವಲ 12 ರನ್ ಗಳಿಸಿ ನಿರಾಸೆ ಮೂಡಿಸಿದ್ದ ರೋಹಿತ್ ಶರ್ಮಾ, ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ 80 ರನ್ ಸಿಡಿಸಿ ಮಿಂಚಿದ್ದರು.

Share This Article
Leave a Comment

Leave a Reply

Your email address will not be published. Required fields are marked *