ಮುಂಬೈ: ಬಾಲಿವುಡ್ ಪರಿ ಅನುಷ್ಕಾ ಶರ್ಮಾಗೆ ಲೀಗಲ್ ನೋಟಿಸ್ ನೀಡಲಾಗಿದೆ.
ಅನುಷ್ಕಾ ಶರ್ಮಾ ನಿರ್ಮಾಣದ ವೆಬ್ ಸೀರಿಸ್ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಅದರಲ್ಲಿ ಬಳಸಲಾಗಿರುವ ಜಾತಿ ನಿಂದನಾತ್ಮಕ ಪದವುಳ್ಳ ಡೈಲಾಗ್ ತೆಗೆಯುವಂತೆ ಸೂಚಿಸಲಾಗಿದೆ. ಗಿಲ್ಡ್ ಸದಸ್ಯ ಮತ್ತು ಪ್ರಣಾಯ್ ರಾಯ್ ಅಸೋಸಿಯೇಟ್ಸ್ ಚೇಂಬರ ವಕೀಲ ವೀರೆನ್ ಶ್ರೀ ಗುರೂಂಗಾ ನೋಟಿಸ್ ಕಳುಹಿಸಿದ್ದಾರೆ. ವಕೀಲ ಗುರೂಂಗಾ, ವೆಬ್ ಸೀರೀಸ್ ಎರಡನೇ ಸಂಚಿಕೆಯಲ್ಲಿ ನೇಪಾಳಿ ಸಮುದಾಯವನ್ನು ಅವಮಾನಿಸುವ ಡೈಲಾಗ್ ಇದೆ ಎಂದು ಹೇಳಿದ್ದಾರೆ.
Advertisement
Advertisement
ವೆಬ್ ಸೀರೀಸ್ ಎರಡನೇ ಸಂಚಿಕೆಯ ದೃಶ್ಯವೊಂದರಲ್ಲಿ ಮಹಿಳಾ ಪೊಲೀಸ್ ನೇಪಾಳಿ ವ್ಯಕ್ತಿಯ ಪಾತ್ರದ ವಿಚಾರಣೆ ವೇಳೆ ಜಾತಿಯನ್ನು ಗುರುತಿಸೋ ಪದ ಬಳಕೆ ಮಾಡಲಾಗುತ್ತದೆ. ನೇಪಾಳಿ ಪದಗಳ ಜೊತೆ ಮುಂದೆ ಬಳಸುವ ಡೈಲಾಗ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅನುಷ್ಕಾ ಶರ್ಮಾರ ನಿರ್ಮಾಣದಲ್ಲಿ ವೆಬ್ ಸೀರೀಸ್ ಮೂಡಿ ಬಂದಿರೋದರಿಂದ ಅವರಿಗೆ ಲೀಗಲ್ ನೋಟಿಸ್ ನೀಡಲಾಗಿದೆ. ಇದುವರೆಗೂ ಅನುಷ್ಕಾ ಶರ್ಮಾರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಕೀಲ ವೀರೆನ್ ಶ್ರೀ ಗುರೂಂಗಾ ತಿಳಿಸಿದ್ದಾರೆ.
Advertisement
Advertisement
ಗೊರಖಾ ಸಮುದಾಯ ಸಹ ವೆಬ್ ಸೀರೀಸ್ ನಲ್ಲಿರೋ ಡೈಲಾಗ್ ಬಗ್ಗೆ ಅಸಮಾಧಾನ ಹೊರ ಹಾಕಿದೆ. ವಿವಾದಾತ್ಮಕ ಡೈಲಾಗ್ ಗೆ ಕತ್ತರಿ ಹಾಕಬೇಕೆಂದು ಮೇ 18ರಂದು ಆನ್‍ಲೈನ್ ಪಿಟಿಶನ್ ಸಲ್ಲಿಸಲಾಗಿದೆ.
ಅನುಷ್ಕಾ ಶರ್ಮಾ ನಿರ್ಮಾಣದ ವೆಬ್ ಸೀರೀಸ್ ನಲ್ಲಿ ಗೊರಖಾ ಸಮುದಾಯದ ಮಹಿಳೆಯರನ್ನು ನಿಂದಿಸಲಾಗಿದೆ. ಹಾಗಾಗಿ ಆ ಡೈಲಾಗ್‍ನ್ನು ಮ್ಯೂಟ್ ಮತ್ತು ಸಬ್ ಟೈಟಲ್ ಬ್ಲರ್ ಮಾಡಬೇಕು ಎಂದು ಪಿಟಿಶನ್ ನಲ್ಲಿ ಉಲ್ಲೇಖಿಸಲಾಗಿದೆ.