Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಧಿಕಾರಿಗಳಿಗೆ ಸಿಎಂ ಖಡಕ್‌ ವಾರ್ನಿಂಗ್‌ – ಕೋವಿಡ್‌ ನಿಯಂತ್ರಣ ಸಭೆಯ ಇನ್‌ಸೈಡ್‌ ಸ್ಟೋರಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಅಧಿಕಾರಿಗಳಿಗೆ ಸಿಎಂ ಖಡಕ್‌ ವಾರ್ನಿಂಗ್‌ – ಕೋವಿಡ್‌ ನಿಯಂತ್ರಣ ಸಭೆಯ ಇನ್‌ಸೈಡ್‌ ಸ್ಟೋರಿ

Bengaluru City

ಅಧಿಕಾರಿಗಳಿಗೆ ಸಿಎಂ ಖಡಕ್‌ ವಾರ್ನಿಂಗ್‌ – ಕೋವಿಡ್‌ ನಿಯಂತ್ರಣ ಸಭೆಯ ಇನ್‌ಸೈಡ್‌ ಸ್ಟೋರಿ

Public TV
Last updated: June 22, 2020 3:49 pm
Public TV
Share
3 Min Read
CM YEDIYURPPA CORONA MEETING
SHARE

ಬೆಂಗಳೂರು: ಕೋವಿಡ್‌ 19 ನಿಯಂತ್ರಣ ಸಂಬಂಧ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಖಡಕ್‌ ಎಚ್ಚರಿಕೆ ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ನಮ್ಮ ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದು ಕೇಂದ್ರ ಸರ್ಕಾರವೇ ಪ್ರಶಂಸೆ ನೀಡಿದೆ. ನಾವು ಕೈಗೊಂಡ ನಿಯಂತ್ರಣ ಕ್ರಮ ದೇಶಕ್ಕೆ ಮಾದರಿಯಾಗಿದೆ ಎಂಬ ಮೆಚ್ಚುಗೆ ಸಿಕ್ಕಿದೆ. ಹೀಗಿರುವಾಗ ಕಳೆದ ವಾರದಿಂದ ಕೊರೊನಾ ಗಣನೀಯವಾಗಿ ಯಾಕೆ ಏರಿಕೆ ಆಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್19 ಪರಿಸ್ಥಿತಿಗಳ ಪರಾಮರ್ಶೆ, ಸೋಂಕು ನಿಯಂತ್ರಣ ಕ್ರಮಗಳ ಕುರಿತು ಇಂದು ಸಭೆ ನಡೆಸಲಾಯಿತು. ಮುಂದಿನ 15ದಿನ ಅತಿಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ,ವಿಳಂಬವಿಲ್ಲದೆ ಚಿಕಿತ್ಸೆ, ಕ್ವಾರಂಟೈನ್ ಉಲ್ಲಂಘನೆ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. pic.twitter.com/UbwJuh01UF

— B.S.Yediyurappa (@BSYBJP) June 22, 2020

ಕೇಂದ್ರ ಸರ್ಕಾರವೇ ಪ್ರಶಂಸೆ ವ್ಯಕ್ತಪಡಿಸಿರುವಾಗ ನೀವು ಈಗ ನಿರ್ಲಕ್ಷ್ಯ ವಹಿಸಿದ್ರೆ ಹೇಗೆ? ಮಾಧ್ಯಮಗಳಲ್ಲಿ ಬರುವ ಪ್ರತಿ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಫಾಲೋ ಮಾಡಬೇಕು ಎಂದು ಸೂಚಿಸಿದರು. ಈ ವೇಳೆ ಪಬ್ಲಿಕ್ ಟಿವಿಯ ರಿಯಾಲಿಟಿ ಚೆಕ್‌ ವರದಿ ಬಗ್ಗೆ ಸಿಎಂ ಸಭೆಯಲ್ಲಿ ಪ್ರಸ್ತಾಪವಾಗಿದೆ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ಕೊರೊನಾ ನಿಯಂತ್ರಣ – ಕರ್ನಾಟಕದ ಸಾಧನೆ ಬೆಸ್ಟ್

ಬೆಡ್ ಇಲ್ಲ ಎಂದು ವಾಪಸ್ ಕಳುಹಿಸಿದ ಪ್ರಕರಣ ವರದಿಯಾಗ್ತಿವೆ. ಕೂಡಲೇ ಆ ಪ್ರಕರಣಗಳ ಬಗ್ಗೆ ಗಮನಹರಿಸಿ‌ ಸಮಸ್ಯೆ ಬಗೆಹರಿಸಿ. ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ಬೆಡಡ್‌ಗಳ‌ ಮಾನಿಟರಿಂಗ್ ಮಾಡಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಬೇಕು. ಮಾನಿಟರ್ ಮಾಡಿದ್ದನ್ನು ಅಪ್ಲಿಕೇಶನ್ ಮೂಲಕ ಡಿಸ್ಪ್ಲೇ ಮಾಡಲು‌ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.  ಇದನ್ನೂ ಓದಿ: ರಿಯಾಲಿಟಿ ಚೆಕ್‌.. ಚಿಕಿತ್ಸೆ ನೀಡುವ ಆಸ್ಪತ್ರೆಗಳಿಂದ್ಲೇ ಕೊರೊನಾ- ಸೋಂಕಿತರ ಜೊತೆ ಶಂಕಿತರು ಮಿಕ್ಸ್!

ಸಿಐಐ ಆಯೋಜಿಸಿದ್ದ 12ನೇ ಹೊರಾಸಿಸ್ ಇಂಡಿಯಾ – ವರ್ಚುವಲ್ ಸಭೆಯಲ್ಲಿ ಕೋವಿಡ್ ನಂತರದ ಆರ್ಥಿಕತೆ ವಿಷಯದ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಲಾಯಿತು. ಕೊರೋನಾ ನಂತರದ ಪರಿಸ್ಥಿತಿಗಳಲ್ಲಿ ಆರ್ಥಿಕತೆ ಸದೃಢಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಪರಿಣತರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. @FollowCII pic.twitter.com/2syARMKQbM

— B.S.Yediyurappa (@BSYBJP) June 22, 2020

ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್‌ ರೋಗಿಗಳಿಗೆಂದೇ ನಿಗದಿತ ಬೆಡ್ ಗಳು ಇರಬೇಕು. ಆ ಬೆಡ್ ಸಂಖ್ಯೆಯನ್ನ ವರದಿ ಸಲ್ಲಿಸಿ. ಕೋವಿಡ್ ರೋಗಿಗಳಿಗೆ ಊಟದ ವ್ಯವಸ್ಥೆ ಸರಿ ಇಲ್ಲ ಎಂಬ ಆರೋಪಗಳು ಬರುತ್ತಿದೆ. ಊಟ ಚೆನ್ನಾಗಿ ಕೊಡಿ, ದುಡ್ದಿನ ಲೆಕ್ಕ ನೋಡಬೇಡಿ ಎಂದು ಸೂಚಿಸಿದ್ದಾರೆ.

ಏರಿಯಾಗಳಲ್ಲಿ ಸೀಲ್ ಡೌನ್ ಮಾಡುವುದು ಸ್ಥಳೀಯ ಮಟ್ಟದಲ್ಲಿಯೇ ಕ್ರಮ ಕೈಗೊಳ್ಳಿ. ಇಡೀ ವಾರ್ಡ್‌ಗಳನ್ನೇ ಲಾಕ್ ಡೌನ್ ಮಾಡುವ ಬದಲು ಆಯಾ ರಸ್ತೆಗಳನ್ನು ಸೀಲ್ ಡೌನ್ ಮಾಡಿ ಎಂದು ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಖಡಕ್‌ ವಾರ್ನಿಂಗ್‌ ಮಾಡಿದ್ದಾರೆ.

CM BSY PM MODI

ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್, ಪೊಲೀಸ್ ಆಯುಕ್ತ ಭಾಸ್ಕರ ರಾವ್ ಮತ್ತು ಇತರ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಸರ್ಕಾರ ನೀಡಿದ ಸಭೆಯ ಮುಖ್ಯಾಂಶಗಳು:
ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಹದಿನೈದು ದಿನಗಳಲ್ಲಿ ಅತಿ ಹೆಚ್ಚು ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಿದರೆ ಮಾತ್ರ, ಸೋಂಕು ಹರಡುವ ಪ್ರಮಾಣವನ್ನು ನಿಯಂತ್ರಿಸಲು ಸಾಧ್ಯ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಶ್ರಮವಹಿಸಬೇಕೆಂದು ಆದೇಶಿಸಿದರು.

Migrants Workers Karnataka Majestick Bus Stand Lockdown Relief 27

ಬೆಂಗಳೂರು ನಗರದಲ್ಲಿ ಹಾಗೂ ಇತರ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿರುವ ಪ್ರದೇಶಗಳಲ್ಲಿ ಲಾಕ್ ಡೌನ್ ಪ್ರಕ್ರಿಯೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದೆ. ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ಕೆ.ಆರ್. ಮಾರ್ಕೆಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಖ್ಯವಾಗಿ ಸಿದ್ದಾಪುರ ವಾರ್ಡ್, ವಿವಿಪುರಂ, ಕಲಾಸಿ ಪಾಳ್ಯಗಳಲ್ಲಿ, ಪ್ರಕರಣ ವರದಿಯಾದ ಅಕ್ಕಪಕ್ಕದ ಬೀದಿಗಳು ಸೇರಿದಂತೆ ಸೀಲ್ ಡೌನ್ ಮಾಡಲು ನಿರ್ಧರಿಸಲಾಯಿತು.

ಕ್ವಾರಂಟೈನ್ ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಯಿತು. ಅಗತ್ಯ ಬಿದ್ದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಲಾಯಿತು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ದರ ನಿಗದಿ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಪ್ರಕರಣಗಳಲ್ಲಿ ಸೋಂಕಿತರಿಗೆ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಯಿತು. ಅಲ್ಲದೆ ಪ್ರತಿ ವಾರ್ಡಿನಲ್ಲಿ ಫೀವರ್ ಕ್ಲಿನಿಕ್ ಸ್ಥಾಪಿಸಲು ನಿರ್ಧರಿಸಲಾಯಿತು.

Bengaluru Lockdown 6

ಸಾಂಸ್ಥಿಕ ಕ್ವಾರಂಟೈನ್ ಗೆ ಒಳಗಾಗಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳು ಮತ್ತಿತರ ಸರ್ಕಾರಿ ಸಂಸ್ಥೆಗಳಲ್ಲಿ ಇರುವವರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ತಿಳಿಸಲಾಯಿತು. ಬೆಂಗಳೂರು ನಗರದಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಕೋವಿಡ್ 19 ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಬೆಂಗಳೂರಿನಲ್ಲಿ ಆರ್ಥಿಕ ಚಟುವಟಿಕೆಗಳು ಪುನರಾರಂಭವಾಗಿದ್ದು, ಈ ಚಟುವಟಿಕೆಗಳಿಗೆ ಧಕ್ಕೆಯಾಗದಂತೆ ಕೋವಿಡ್ 19 ನಿಯಂತ್ರಿಸುವುದು ನಮ್ಮ ಕರ್ತವ್ಯ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕ್ವಾರಂಟೈನ್ ಉಲ್ಲಂಘನೆ ಮತ್ತು ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮತ್ತು ಸ್ವಯಂ ಸೇವಕರನ್ನೊಳಗೊಂಡ ತಂಡಗಳು ಕಾರ್ಯನಿರ್ವಹಿಸುತ್ತಿವೆ. ವಾರ್ ರೂಂ ನಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಕುರಿತು ಕ್ಷಣ ಕ್ಷಣದ ಮಾಹಿತಿ ಲಭ್ಯವಿರಬೇಕು. ಸೋಂಕಿತರಿಗೆ ವಿಳಂಬವಿಲ್ಲದೆ ಚಿಕಿತ್ಸೆ ಒದಗಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

TAGGED:bengaluruCoronaCovid19kannada newsmeetingYediyurppaಕೊರೊನಾಕೋವಿಡ್ 19ಕ್ವಾರಂಟೈನ್ಬೆಂಗಳೂರುಯಡಿಯೂರಪ್ಪ
Share This Article
Facebook Whatsapp Whatsapp Telegram

Cinema news

Rachita Ram
ಪ್ರೇಮಿಗಳ ದಿನದಂದೆ I Love You ಅಂತ ರಚ್ಚು ಪ್ರಪೋಸ್‌ – ಹೇಳಿದ್ದು ಯಾರಿಗೆ?
Bengaluru City Cinema Latest Main Post Sandalwood
ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post
rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood

You Might Also Like

hassan women
Hassan

ಹಾಸನ ಮಹಿಳೆ ನಾಪತ್ತೆ ಕೇಸ್‌ಗೆ ಟ್ವಿಸ್ಟ್‌ – ಕುಣಿಗಲ್‌ನಲ್ಲಿ ಜೀವಂತವಾಗಿ ಪತ್ತೆ

Public TV
By Public TV
21 minutes ago
MP Ramesh Jigajinagi
Districts

ಇಷ್ಟೊಂದು ಹೊಲಸು ಸರ್ಕಾರವನ್ನು ನಾನು ನೋಡಿಯೇ ಇಲ್ಲ – ರಮೇಶ ಜಿಗಜಿಣಗಿ

Public TV
By Public TV
48 minutes ago
south africa 1
Cricket

ಮಾರ್ಕ್ರಾಮ್‌ ಸ್ಫೋಟಕ ಬ್ಯಾಟಿಂಗ್‌, ಜಾನ್ಸೆನ್‌ ಬೆಂಕಿ ಬೌಲಿಂಗ್‌ಗೆ ನ್ಯೂಜಿಲೆಂಡ್‌ ತತ್ತರ – ಆಫ್ರಿಕಾಗೆ 7 ವಿಕೆಟ್‌ಗಳ ಜಯ

Public TV
By Public TV
50 minutes ago
DK Shivakumar 2
Davanagere

ನೂರು ಜನ್ರು ಗೋ-ಬ್ಯಾಕ್ ಅಂದ್ರೆ, ಅದಕ್ಕಿಂತ ಜಾಸ್ತಿ ಕಮ್ ಬ್ಯಾಕ್ ಅನ್ನೋರು ಇರ‍್ತಾರೆ: ಡಿಕೆಶಿ

Public TV
By Public TV
1 hour ago
India vs Pakistan shake hands row
Cricket

ಮ್ಯಾಚ್‌ನಲ್ಲಿ ಪಾಕ್‌ ಆಟಗಾರರ ಜೊತೆ ಹ್ಯಾಂಡ್‌ಶೇಕ್‌ ಮಾಡ್ತೀರಾ?- ಪ್ರಶ್ನೆಗೆ ಸೂರ್ಯಕುಮಾರ್‌ ಹೇಳಿದ್ದೇನು?

Public TV
By Public TV
2 hours ago
Noida Suicide
Crime

Valentine’s Day Tragedy – ಶೂಟ್ ಮಾಡಿಕೊಂಡು ಕಾರಿನಲ್ಲೇ ಪ್ರೇಮಿಗಳು ಆತ್ಮಹತ್ಯೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?