– ಯಾವುದೇ ಭಾರತೀಯ ಮಹಿಳೆ ಈ ರೀತಿ ಹೇಳಲು ಸಾಧ್ಯವೇ ಇಲ್ಲ
– 27ರ ಯುವಕನ ವಿರುದ್ಧ 42 ವರ್ಷದ ಮಹಿಳೆ ದೂರು
ಬೆಂಗಳೂರು: ಅತ್ಯಾಚಾರದ ವೇಳೆ ನಾನು ನಿದ್ದೆಗೆ ಜಾರಿದ್ದೆ ಎಂದು ಸಂತ್ರಸ್ತೆ ಹೇಳಿದ್ದರಿಂದ ಕರ್ನಾಟಕ ಹೈಕೋರ್ಟ್ ಆರೋಪಿಗೆ ಜಾಮೀನು ನೀಡಿದೆ.
ಕೆಳ ನ್ಯಾಯಾಲಯವು ಮೇ 19ರಂದು ಆರೋಪಿ ರಾಕೇಶ್ (27) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಹೈಕೋರ್ಟ್ ಮೆಟ್ಟಿಲು ಏರಿದಾಗ 42 ವರ್ಷದ ಸಂತ್ರಸ್ತೆ ಹೇಳಿಕೆಯಿಂದ ಆರೋಪಿಗೆ ಜಾಮೀನು ಸಿಕ್ಕಿದೆ.
Advertisement
Advertisement
ಏನಿದು ಪ್ರಕರಣ?:
ಮಹಿಳೆಯೊಬ್ಬಳು ಸಹೋದ್ಯೋಗಿ ರಾಕೇಶ್ ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ಅತ್ಯಾಚಾರ ಎಸೆಗಿದ್ದಾನೆ ಎಂದು ಇದೇ ಮೇ 2ರಂದು ಆರ್.ಆರ್.ನಗರ ಠಾಣೆಗೆ ದೂರು ನೀಡಿದ್ದಳು. ಈ ಸಂಬಂಧ ಪೊಲೀಸರು ರಾಕೇಶ್ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 420 (ಮೋಸ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು.
Advertisement
ರಾಕೇಶ್ ಪರ ವಕೀಲರು ತಮ್ಮ ಕಕ್ಷಿದಾರನಿಗೆ ಜಾಮೀನು ನೀಡುವಂತೆ ಬೆಂಗಳೂರು ನಗರ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇತ್ತೀಚೆಗೆ ನ್ಯಾಯಮೂರ್ತಿಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿತ್ತು.
Advertisement
ಈ ವೇಳೆ ಹೇಳಿಕೆ ನೀಡಿದ್ದ ಸಂತ್ರಸ್ತೆ “ಇಬ್ಬರು ಸೇರಿ ಹೋಟೆಲ್ ಒಂದಕ್ಕೆ ತೆರಳಿ ಮದ್ಯಪಾನ ಮಾಡಿದ್ವಿ. ಬಳಿಕ ಕಾರಿನಲ್ಲಿ ಸ್ವಲ್ಪ ಹೊತ್ತು ಕುಳಿತು ಆಫೀಸ್‍ಗೆ ಬಂದಿದ್ದೆವು. ಆಗ ಆರೋಪಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದ. ಆದರೆ ತುಂಬಾ ಸುಸ್ತಾಗಿದ್ದರಿಂದ ನಾನು ಮಲಗಿದ್ದೆ” ಎಂದು ತಿಳಿಸಿದ್ದಳು.
ಮಹಿಳೆ ಕೆಲ ದಿನಗಳ ಹಿಂದೆ ರಾಜಿ ಮಾಡಿಕೊಳ್ಳುವ ಕುರಿತು ಪತ್ರ ಬರೆದಿದ್ದನ್ನು ಕೋರ್ಟ್ ಪರಿಗಣಿಸಿದೆ. ಜೊತೆಗೆ ತಡರಾತ್ರಿ ಆರೋಪಿಯನ್ನು ಕಚೇರಿಗೆ ಕರೆದುಕೊಂಡು ಹೋಗಿದ್ಯಾಕೆ? ಮದ್ಯಪಾನ ಮಾಡಲು ಅವಕಾಶ ಕೊಟ್ಟಿದ್ಯಾಕೆ? ಅಷ್ಟೇ ಅಲ್ಲದೆ ಇಡೀ ರಾತ್ರಿ ಆರೋಪಿಯ ಜೊತೆಗೆ ಉಳಿದಿದ್ಯಾಕೆ ಎಂದು ಕೋರ್ಟ್ ಪ್ರಶ್ನಿಸಿದೆ.
ಅತ್ಯಾಚಾರದ ವೇಳೆ ನಾನು ಮಲಗಿದ್ದೆ ಎಂಬ ಮಹಿಳೆಯ ಹೇಳಿಕೆಯನ್ನು ತಳ್ಳಿಹಾಕಿದ ನ್ಯಾಯಾಲಯವು, ಅತ್ಯಾಚಾರದ ವೇಳೆ ಮಲಗಿದ್ದೆ ಎಂದು ಯಾವುದೇ ಭಾರತೀಯ ಮಹಿಳೆ ಹೇಳಲು ಸಾಧ್ಯವೇ ಇಲ್ಲ. ಮದುವೆಯಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂಬುದಕ್ಕೆ ಆಧಾರವೇ ಇಲ್ಲ ಎಂದು ತಿಳಿಸಿದೆ. ಈ ಮೂಲಕ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.