ಶ್ರೀನಗರ: ಕಾಶ್ಮೀರದ ಯುವತಿಯೊಬ್ಬರು ಅತ್ಯಂತ ಕಿರಿಯ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಾಶ್ಮೀರದ ಆಯೇಷಾ ಅಜೀಜ್ (25) ಭಾರತದ ಅತ್ಯಂತ ಕಿರಿಯಾ ಮಹಿಳಾ ಪೈಲಟ್ ಆಗಿರುವ ಇವರು ಬೇರೆ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ.
Advertisement
Advertisement
ಆಯೇಷಾ 15 ವರುಷದವಳಾಗಿದ್ದಾಗ ಪೈಲಟ್ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಈ ಮೂಲಕವಾಗಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪೈಲಟ್ ಲೈಸೆನ್ಸ್ ಪಡೆದ ಕಿರಿಯ ವಿದ್ಯಾರ್ಥಿ ಎನಿಸಿಕೊಂಡಿದ್ದಾರೆ. ರಷ್ಯಾದ ಸೋಜೋಲ್ ಏರ್‍ಬೇಸ್‍ನಲ್ಲಿ ಮಿಗ್-29 ಜೆಟ್ ಹಾರಾಟ ತರಬೇತಿಯನ್ನು 2012ರಲ್ಲೇ ಪಡೆದಿದ್ದಾರೆ. ವಿಮಾನ ಹಾರಾಟ ಪದವಿಯನ್ನು ಬಾಂಬೆ ಫ್ಲೈಯಿಂಗ್ ಕ್ಲಬ್‍ನಿಂದ ಪಡೆದುಕೊಂಡಿದ್ದಾರೆ.2017 ರಲ್ಲಿ ಲೈಸೆನ್ಸ್ ಪಡೆದು ಇದೀಗ ಪೈಲಟ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ.
Advertisement
Advertisement
ಕಾಶ್ಮೀರದ ಮಹಿಳೆಯರು ಶಿಕ್ಷಣದ ವಿಚಾರದಲ್ಲಿ ಉತ್ತಮವಾದ ರೀತಿಯಲ್ಲಿ ಬೆಳೆಯುತ್ತಿದ್ದಾರೆ. ಅನೇಕ ಯುವತಿಯರು ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಮಾಡುತ್ತಿದ್ದಾರೆ. ಈ ಸವಾಲನ್ನು ಸ್ವೀಕರಿಸಲು ನನಗೆ ಸಂತೋಷವಾಗಿದೆ. ನನ್ನ ಸಾಧನೆಯಲ್ಲಿ ನನ್ನ ಹೆತ್ತವರ ಪಾಲಿದೆ. ನನ್ನ ಕಲಿಕೆಗೆ ಅವರು ನನಗೆ ಬೆಂಬಲ ನೀಡುತ್ತಾ ಬಂದಿದ್ದಾರೆ ಎಂದು ಆಯೇಷಾ ಅಜೀಜ್ ಹೇಳಿಕೊಂಡಿದ್ದಾರೆ.