ಹುಬ್ಬಳ್ಳಿ: ಸೋದರ ಮಾವನ ಹೆಸರಿನಲ್ಲಿ ನಕಲಿ ಬಾಂಡ್ ಸೃಷ್ಟಿ ಮಾಡಿ ಮಾವನ ಮಕ್ಕಳಿಗೆ ತೊಂದರೆ ಕೊಡುತ್ತಿದ್ದಾರೆಂಬ ಆರೋಪವೊಂದು ಭಾರತೀಯ ಜನತಾ ಪಕ್ಷದ ಮುಖಂಡನ ವಿರುದ್ಧ ಕೇಳಿಬಂದಿದೆ.
Advertisement
ಸಂಗಮೇಶ ಗೌರಕ್ಕನವರ್ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ. ಇವರು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಮುಖಂಡರೊಂದಿಗೆ ಸಂಪರ್ಕ ಹೊಂದಿದ್ದು, ಇದೀಗ ತೊಂದರೆ ಕೊಡುತ್ತಿದ್ದಾರೆಂದು ಆರೋಪಿಸಿ ಅಳಿಯಂದಿರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗಂಗಾಧರ ವಾಲಿ ಎಂಬವರ ಕುಟುಂಬಕ್ಕೆ ಸಂಗಮೇಶ್ ಅನ್ಯಾಯ ಮಾಡಿ 17 ಲಕ್ಷ 68 ಸಾವಿರ ಕೊಡುವಂತೆ ಪೀಡಿಸುತ್ತಿದ್ದಾರೆಂದು ವಾಲಿ ಪುತ್ರ ದೂರಿನಲ್ಲಿ ತಿಳಿಸಿದ್ದಾರೆ.
Advertisement
Advertisement
Advertisement
ಗಂಗಾಧರ ವಾಲಿಯವರು ತೀರಿಕೊಳ್ಳುವ ಮುನ್ನವೇ ಬಾಂಡ್ ಒಂದನ್ನ ಮಾಡಿಕೊಂಡಿದ್ದು, ಅದರಲ್ಲಿ 10 ಲಕ್ಷ ರೂಪಾಯಿ ಕೈಗಡ ಎಂದು ಬರೆಯಲಾಗಿದೆ. ಆದರೆ ಒಂದು ವರ್ಷದಲ್ಲಿ ಅದರ ಬಡ್ಡಿ ಸಮೇತ 17 ಲಕ್ಷಕ್ಕೂ ಹೆಚ್ಚು ಹಣವನ್ನ ಕೊಡುವಂತೆ ಪೀಡಿಸುತ್ತಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಸಂಗಮೇಶ ಗೌರಕ್ಕನವರ್ ಬಿಜೆಪಿ ಮುಖಂಡರ ಜೊತೆಗೂಡಿ ಇಂತಹ ದಂಧೆಗಳನ್ನ ಮಾಡುತ್ತಿದ್ದಾರೆಂದು ವಾಲಿ ಕುಟುಂಬದವರು ಆರೋಪ ಮಾಡುತ್ತಿದ್ದಾರೆ. ನಕಲಿ ಬಾಂಡ್‍ಗೆ ಮೃತ ರಾಘವೇಂದ್ರ ರಾಮದುರ್ಗ ಅವರ ಸಹಿ ಕೂಡಾ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೋದರ ಮಾವನ ಮಕ್ಕಳು ಬಿಜೆಪಿ ಮುಖಂಡನ ಅಕ್ರಮದ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ತನಿಖೆಯಿಂದ ಸತ್ಯ ತಿಳಿಯಲಿದೆ.