– ಪೊಲಿಸರ ಮುಂದೆ ಸೊಸೆ ಹೇಳಿದ್ದೇನು..?
ಲಕ್ನೋ: ಅತ್ತೆಯ ವರ್ತನೆಯಿಂದ ಬೇಸತ್ತು ನವವಿವಾಹಿತೆಯೊಬ್ಬಳು ಕರೆ ಮಾಡಿ ಪೊಲೀಸರನ್ನು ಮನೆಗೆ ಕರೆಸಿದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ಅತ್ತೆ ಸದಾ ಟಿವಿ ನೋಡುತ್ತಿದ್ದು, ಅದರ ಹುಚ್ಚಿನಿಂದ ನನಗೆ ಹಿಂದಿನ ದಿನದ ಆಹಾರವನ್ನು ನೀಡುತ್ತಾಳೆ. ಇದರಿಂದ ನನ್ನ ಆರೋಗ್ಯ ಕೆಡುತ್ತಿದೆ ಎಂದು ಪೊಲೀಸರ ಮುಂದೆ ಮಹಿಳೆ ಗಂಭೀರ ಆರೋಪ ಮಾಡಿದ್ದಾಳೆ.
ಮಹಿಳೆಯ ವಿಚಿತ್ರ ಆರೋಪವನ್ನು ಕೇಳಿದ ಪೊಲಿಸರೇ ಒಂದು ಬಾರಿ ದಂಗಾಗಿ ಹೋಗಿದ್ದಾರೆ. ಆದರೆ ಇತ್ತ ಅತ್ತೆ ಮಾತ್ರ ಸೊಸೆಯನ್ನು ಆರೋಪವನ್ನು ಅಲ್ಲಗೆಳೆದಿದ್ದಾರೆ. ಸೊಸೆಯ ದೂರನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆಕೆಗೆ ನಾನು ಪ್ರತಿ ದಿನ ಅಡುಗೆ ಮಾಡಿ ನೀಡುತ್ತಿದ್ದೇನೆ. ಆದರೆ ಆಕೆ ಸದಾ ಮೊಬೈಲ್ ನಲ್ಲಿ ಬ್ಯಸಿಯಾಗಿರುತ್ತಿದ್ದು, ಅದರೊಂದಿಗೆ ಸಮಯ ಕಳೆಯುತ್ತಿದ್ದಾಳೆ ಎಂದು ಪ್ರತ್ಯಾರೋಪ ಮಾಡಿದ್ದಾಳೆ.
ಮನೆಯಲ್ಲಿ ಅತ್ತೆ, ಸೊಸೆ ಇಬ್ಬರೇ ವಾಸ ಮಾಡುತ್ತಿದ್ದಾರೆ. ಇಬ್ಬರ ಪತಿಯಂದಿರು ಕೆಲಸದ ನಿಮಿತ್ತ ದೂರ ಇದ್ದಾರೆ. ಹೀಗಾಗಿ ಪ್ರತಿ ದಿನ ಅತ್ತೆ- ಸೊಸೆ ಒಂದಲ್ಲ ಒಂದು ವಿಚಾರದಲ್ಲಿ ಜಗಳವಾಡುತ್ತಿದ್ದಾರೆ ಎಂದು ನೆರೆಹೊರೆಯವರು ಕೂಡ ದೂರಿದ್ದಾರೆ.
ಅತ್ತೆ, ಸೊಸೆ ಹಾಗೂ ಅಕ್ಕಪಕ್ಕದ ಮನೆಯವರು ದೂರುಗಳನ್ನು ಆಲಿಸಿಕೊಂಡ ಪೊಲಿಸರೇ ಸುಸ್ತಾಗಿ ಹೋದರು. ಕೊನೆಗೆ ಇಬ್ಬರು ಹೊಂದಾಣಿಕೆ ಮಾಡಿಕೊಂಡು ಜೀವನ ಮುಂದುವರಿಸಿ, ಗಲಾಟೆ ಮಾಡಿಕೊಳ್ಳಬೇಡಿ ಎಂದು ಎಚ್ಚರಿಕೆಯೊಂದಿಗೆ ಬುದ್ಧಿ ಮಾತು ಹೇಳಿ ಅಲ್ಲಿಂದ ತೆರಳಿದ್ದಾರೆ.