ಭೋಪಾಲ್: ಅತ್ತೆ ಸೂಸೆ ಜಗಳ ಎಲ್ಲರ ಮನೆಯಲ್ಲಿ ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಕುಟುಂಬ ಎಲ್ಲರಂತಿರದೆ ತಮ್ಮದೇ ಆಚರಣೆಯ ಮೂಲಕ ಗಮನ ಸೆಳೆದಿದೆ. ಅತ್ತೆ ಸಾವನ್ನಪ್ಪಿ 10 ವರ್ಷ ಕಳೆದರು ಕೂಡ ಅವರ ಮೂರ್ತಿ ಮಾಡಿ ಗುಡಿಕಟ್ಟಿ ಪ್ರತಿದಿನ ಪೂಜೆ ಮಾಡಿ ಆದರ್ಶ ಸೂಸೆಯಂದಿರಾಗಿ ಎಲ್ಲರ ಮನಗೆದ್ದಿದ್ದಾರೆ.
ಚತ್ತೀಸಗಢದ ಬಿಲಾಸ್ಪುರ ಜಿಲ್ಲೆಯ ರತ್ನಾಪುರ ಗ್ರಾಮದ ತಂಬೋಲಿ ಕುಟುಂಬದ ಸೊಸೆಯಂದಿರ ಅತ್ತೆ ಗೀತಾ ದೇವಿ ತೀರಿಕೊಂಡಿದ್ದರು. ಆ ಬಳಿಕದಿಂದ ಅವರಿಗಾಗಿ ಗುಡಿ ಕಟ್ಟಿ ಪ್ರತಿದಿನ ಪೂಜೆ ಮತ್ತು ತಿಂಗಳಿಗೊಮ್ಮೆ ಅತ್ತೆ ಹೆಸರಿನಲ್ಲಿ ಭಜನೆ, ಕೀರ್ತನೆಗಳನ್ನು ಮಾಡುತ್ತಾ ಬಂದಿದ್ದಾರೆ.
ಕೂಡು ಕುಟುಂಬವಾಗಿದ್ದ ತಂಬೋಲಿ ಮನೆತನದಲ್ಲಿ ಗೀತಾ ದೇವಿ ತನ್ನ 11 ಜನ ಸೊಸೆಯಂದಿರ ಪಾಲಿನ ನೆಚ್ಚಿನ ಸೂಸೆಯಾಗಿ ಗುರುತಿಸಿಕೊಂಡಿದ್ದರು. 2010ರಲ್ಲಿ ಗೀತಾ ಮರಣಹೊಂದಿದ್ದರು ಕೂಡ ಅವರ ಸೂಸೆಯಂದಿರು ಇಂದಿಗೂ ಬದುಕಿದ್ದಾಗ ಯಾವ ರೀತಿ ಅತ್ತೆಯೊಂದಿಗೆ ಆದರ್ಶವಾಗಿದ್ದರೋ ಅದೇ ರೀತಿ ಈಗಲೂ ಮುಂದುವರಿಸುವ ನಿಟ್ಟಿನಲ್ಲಿ ಅವರ ಪಾಲಿನ ನೀಜವಾದ ದೇವರರಾಗಿ ಅತ್ತೆಯನ್ನು ಕಾಣುತ್ತಿದ್ದಾರೆ.
ಸೂಸೆಯಂದಿರನ್ನು ಅತ್ತೆ ಬದುಕಿದ್ದಾಗ ತಮ್ಮ ಸ್ವಂತ ಮಕ್ಕಳಂತೆ, ಪ್ರೀತಿ ವಾತ್ಸಲ್ಯದಿಂದ ಕಾಣುತ್ತಿದ್ದರಂತೆ. ಇದರಿಂದ ಅತ್ತೆ ತೀರಿಕೊಂಡ ನಂತರ ಅವರ ಆದರ್ಶ ವ್ಯಕ್ತಿತ್ವವನ್ನು ಮರೆಯಾಲಾಗದೆ ಸೂಸೆಯಂದಿರು ಅವರ ಮೂರ್ತಿ ಮಾಡಿ ಅದಕ್ಕೆ ತಮ್ಮ ಚಿನ್ನಾಭರಣವನ್ನು ಹಾಕಿ ಪ್ರತಿ ದಿನ ಪೂಜೆ ನೆರವೇರಿಸಿ ಸಂತೋಷ ಪಡುತ್ತಿದ್ದಾರೆ.
ಈ ಕೂಡು ಕುಟುಂಬಕ್ಕೆ 20 ಎಕರೆ ಜಮೀನು, ಒಂದು ಹೋಟೆಲ್, ಒಂದು ದಿನಸಿ ಅಂಗಡಿ, ಒಂದು ಪಾನ್ ಶಾಪ್ ಮತ್ತು ಸೋಪ್ ಫ್ಯಾಕ್ಟರಿ ಇದ್ದು, ಇದರಲ್ಲಿ ಇವರೆಲ್ಲರೂ ಕೈಜೋಡಿಸಿ ಕೆಲಸ ನಿರ್ವಾಹಿಸುತ್ತಾರೆ. ಈ ಕುಟುಂಬದ ಇನ್ನೂಂದು ವಿಶೇಷತೆ, ಇಲ್ಲಿರುವ ಎಲ್ಲ ಹೆಣ್ಣು ಮಕ್ಕಳು ವಿದ್ಯಾವಂತರಾಗಿದ್ದು ಸ್ನಾತಕೋತ್ತರ ಪದವಿ ಪೂರೈಸಿದವರು ಇದ್ದಾರೆ. ಇವರೆಲ್ಲರು ಕೂಡ ಹೊಂದಾಣಿಕೆಯಿಂದ ಪ್ರತಿದಿನ ಎಲ್ಲರೂ ಸೇರಿ ಅಡುಗೆ ತಯಾರು ಮಾಡಿ ಜೊತೆಗೆ ಕೂತು ಊಟ ಮಾಡುತ್ತಾರೆ. ಹೀಗೆ ತುಂಬಿದ ಸಂಸಾರ ಬಹಳ ಅರ್ಥಪೂರ್ಣವಾಗಿ ಜೀವನ ಸಾಗಿಸಿ ಇತರರಿಗೆ ಆದರ್ಶವಾಗಿದೆ.